ಇಂಡಿ ಕ್ಷೇತ್ರ: ಸೌಹಾರ್ದ ಕ್ಷೇತ್ರದ ಹೊಣೆ ಯಾರ ಹೆಗಲಿಗೆ?

Posted By:
Subscribe to Oneindia Kannada

ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ ಇಂಡಿ ವಿಜಯಪುರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ.

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಇಂಡಿಯ ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ , ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಸಿಂದಗಿ ತಾಲ್ಲೂಕುಗಳಿವೆ.

ತೀರಾ ಬಿಸಿಲೂ ಇಲ್ಲದ ಹಿತಕರ ವಾರಾವರಣ ಇಲ್ಲಿರುತ್ತದೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳನ್ನು ಸಹ ಬೆಳೆಯುತ್ತಾರೆ. ಇಲ್ಲಿನ ಜೋಳದ ರೊಟ್ಟಿ , ಶೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ವಿಜಯಪುರ ಕ್ಷೇತ್ರದಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ?

ಇಲ್ಲಿನ ಜನಸಂಖ್ಯೆ 50000. ಅದರಲ್ಲಿ 27000 ಪುರುಷರು ಮತ್ತು 23000 ಮಹಿಳೆಯರು.
ಹಿಂದು ಮತ್ತು ಮುಸ್ಲಿಂ ಮತೀಯರು ಹೆಚ್ಚಿದ್ದಾರೆ. ನಗರದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಶ್ರೀ ಬಂಥನಾಳ ಶಿವಯೋಗಿಗಳು ಮಹಾಸ್ವಾಮಿಜಿಗಳು, ಶಿಂಪಿ ಲಿಂಗಣ್ಣ, ಮಧುರಚೆನ್ನರಂಥ ಕವಿಗಳ ನೆಲೆ ಈ ಇಂಡಿ.

Karnataka Assembly Election 2018: Indi Constituency Profile

ಪ್ರತಿವರ್ಷ ಇಲ್ಲಿ ನಡೆಯುವ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳು ಪ್ರಸಿದ್ಧಿ ಪಡೆದಿವೆ. ಜಾತಿ-ಮತದ ಹಂಗಿಲ್ಲದೆ ಈ ಹಬ್ಬಗಳನ್ನು ಸೌಹಅರ್ದ ಭಾವದಿಂದ ಆಚರಿಸಲಾಗುತ್ತದೆ. 2011 ವರ್ಷದ ಪ್ರಕಾರ ಇಲ್ಲಿನ ಸಾಕ್ಷರತೆಯು 67%.

ಸಂಕ್ರಾಂತಿ ವಿಶೇಷ ಪುಟ

ಕಾಂಗ್ರೆಸ್ ನ ಯಶವಂತ ಗೌಡ ಪಾಟೀಲ ಇಲ್ಲಿನ ಹಾಲಿ ಶಾಸಕರು. ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ. ಇದನ್ನೇ ಈ ಚುನಾವಣೆಗೆ ಪ್ರಚಾರದ ಅಸ್ತ್ರವನ್ನಾಗಿ ಅವರು ಬದಲಿಸಿಕೊಳ್ಳಬಹುದು.

ಬಬಲೇಶ್ವರ ಕ್ಷೇತ್ರ: ಐತಿಹಾಸಿಕ ಸ್ಥಳದಲ್ಲಿ ಯಶಸ್ಸು ಯಾರಪಾಲಿಗೆ?

2013 ರ ವಿಧಾನಸಭೆ ಚುನಾವಣೆಯಲ್ಲಿ ಯಶವಂತ ಗೌಡ ಪಾಟೀಲ 58562 ಮತಗಳನ್ನು ಪಡೆದಿದ್ದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ರವಿಕಾಂತ ಗೌಡ ಪಾಟೀಲ 25260 ಮತ ಪಡೆದಿದ್ದರು. ಕಳೆದ ಬಾರಿ ಕೆಜೆಪಿಯಿಂದ ಪ್ರಬಲ ಸ್ಪರ್ಧೆ ನೀಡಿದ್ದ ರವಿಕಾಂತ ಗೌಡ ಪಾಟೀಲ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Indi assembly constituency of Vijayapura(Bijapur) district. Get election news from Indi. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ