ದೇವರ ಹಿಪ್ಪರಗಿ: ಮತದಾರನ ಒಲವು ಯಾರ ಕಡೆಗೆ?

Posted By:
Subscribe to Oneindia Kannada

ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ ದೇವರ ಹಿಪ್ಪರಗಿ ಗ್ರಾಮ ವಿಜಯಪುರ - ಗುಲ್ಬರ್ಗಾ ಹೆದ್ದಾರಿಯಲ್ಲಿದೆ. ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ದೇವರ ಹಿಪ್ಪರಗಿ ನಗರವನ್ನು ಹೊಸ ತಾಲ್ಲೂಕೆಂದು ರಚಿಸಲಾಗಿದೆ.

ಗ್ರಾಮದ ಜನಸಂಖ್ಯೆ ಸುಮಾರು 22000. ಮುಖ್ಯ ಭಾಷೆ ಕನ್ನಡ, ಜೊತೆಗೆ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಟ ಕನ್ನಡ ಮಾತನಾಡುವವರೂ ಸಿಗುತ್ತಾರೆ.

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು.

Karnataka Assembly Election 2018: Nagathan Constituency Profile

ಗ್ರಾಮದಲ್ಲಿ ಫಲವತ್ತಾದ ಭೂಮಿ ಇರುವುದರಿಂದ ಶೇ.70 ರಷ್ಟು ಜನ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ. ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಈರುಳ್ಳಿ ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ಇಲ್ಲಿನ ರಾಜಕೀಯ ಚಿತ್ರಣದತ್ತ ಕಣ್ಣು ಹಾಯಿಸುವುದಾದರೆ ಈ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿದಣಿ ಎ.ಎಸ್.ನಡಹಳ್ಳಿ ಪಾಟಿಲ ಸತತ ಎರಡು ಬಾರಿ ಗೆದ್ದಿದ್ದಾರೆ. ಆದರೆ ಕೆಲವು ವಿವಾದಗಳಿಂದಾಗಿ ಈ ಬಾರಿ ಕಾಂಗ್ರೆಸ್ ನಿಂದ ಟಿಕೇಟ್ ಸಿಗುವುದು ಕಷ್ಟ ಎಂಬುದನ್ನರಿತ ಅವರು ಜೆಡಿಎಸ್ ಕಡೆ ವಾಲಿದ್ದಾರೆ. ಈ ಬಾರಿ ಅವರು ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಬಿಜೆಪಿಯಿಂದ ಎಸ್.ಬಿ.ಪಾಟೀಲ ಕಣಕ್ಕಿಳಿಯಬಹುದು ಎಂಬ ವದಂತಿ ಇದೆ. ನಡಹಳ್ಳಿ ಜೆಡಿಎಸ್ ಸೇರಿದರೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಕುತೂಹಲದ ವಿಷಯ.

ಎ.ಎಸ್.ಪಾಟೀಲ್ 2013 ರ ಚುನಾವಣೆಯಲ್ಲಿ 36231 ಮತಗಳಿಂದ ಗೆದ್ದಿದ್ದರೆ, ಎರಡನೇ ಸ್ಥಾನ ಗಳಿಸಿದ ಬಿಜೆಪಿಯ ಸೋಮನಗೌಡ ಬಿ.ಪಾಟೀಲ್(ಎಸ್.ಬಿ.ಪಾಟೀಲ್) 28135 ಮತ ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Devar Hippargi assembly constituency of Vijayapura district. Get election news from Devar Hippargi. Know about candidates list, election results during Karnataka elections

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ