ಬೇಲೂರು ಕ್ಷೇತ್ರ : ಶಿಲ್ಪಕಲೆ ಬೀಡಿನಲ್ಲಿ ಮೂಲ ಸೌಕರ್ಯ ಕೊರತೆ
ಹಾಸನ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಬೇಲೂರು ಸದಾ ಕಾಲ ಆಕರ್ಷಣೆಯ ಕೇಂದ್ರ. ಚೆನ್ನಕೇಶವ ದೇಗುಲ, ಹಳೆಬೀಡಿನ ಶಿಲ್ಪಕಲೆ ಪ್ರವಾಸಿಗರು, ಇತಿಹಾಸ ತಜ್ಞರು, ಇಷ್ಟಪಟ್ಟು ಕಾಲಿಡುವ ತಾಣಗಳಾಗಿವೆ.
ಅಸಮರ್ಪಕ ರಸ್ತೆ ಸಂಪರ್ಕ, ಮೂಲ ಸೌಕರ್ಯಗಳ ಕೊರತೆ, ಅವ್ಯವಸ್ಥಿತ ಪ್ರವಾಸಿಗರ ಮಾರ್ಗದರ್ಶಿ ಹೀಗೆ ನಾಗರಿಕ ಸಮಸ್ಯೆಗಳನ್ನು ಹೊತ್ತುಕೊಂಡಿರುವ ಬೇಲೂರಿನ ಸಮಸ್ಯೆಗಳನ್ನು ಹೊಯ್ಸಳ ದೇಗುಲಗಳು ಮರೆಮಾಚುತ್ತವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವೈ. ಎನ್ ರುದ್ರೇಶ್ ಗೌಡ (48802) ಅವರು ಜೆಡಿಎಸ್ ನ ಕೆ.ಎಸ್ ಲಿಂಗೇಶ(41273) ವಿರುದ್ಧ 6 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಯಗಚಿ ನದಿ ತೀರದಲ್ಲಿದ್ದರೂ ಬೇಲೂರಿನಲ್ಲಿ ರೈತರು ಸದಾ ಕಾಲ ನೀರಾವರಿ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಮುಖ ಕೈಗಾರಿಕೆಗಳ ಕೊರತೆ, ಶಾಲಾ, ಕಾಲೇಜುಗಳಿಗೆ ಹಾಸನ ಅಥವಾ ಚಿಕ್ಕಮಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಆದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ಎದುರಿಸುವುದು ಕಷ್ಟವಾಗುವ ಸಾಧ್ಯತೆಯಿದೆ. ಲಿಂಗಾಯತ ಮತ ಬ್ಯಾಂಕಿಗೆ ನೊಣಬ ಸಮುದಾಯದ ಓಲೈಕೆಯಲ್ಲಿ ಪಕ್ಷಗಳು ತೊಡಗಿವೆ. ಈ ಕ್ಷೇತ್ರವನ್ನು ಜೆಡಿಎಸ್ ಮತ್ತೊಮ್ಮೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವೈ. ಎನ್ ರುದ್ರೇಶ್ ಗೌಡ (48802) ಅವರು ಜೆಡಿಎಸ್ ನ ಕೆ.ಎಸ್ ಲಿಂಗೇಶ(41273) ವಿರುದ್ಧ 6 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಿಜೆಪಿಯ ಶಿವರುದ್ರಪ್ಪ ಅವರು ಮತ್ತೊಮ್ಮೆ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಜೆಡಿಎಸ್ ನಿಂದ ಎಚ್ ಡಿ ರೇವಣ್ಣ ಹಾಗೂ ಭವಾನಿ ಪುತ್ರ ಪ್ರಜ್ವಲ್ ರೇವಣ್ಣ ಅವರು ಕಣಕ್ಕಿಳಿಯುವ ಸುದ್ದಿಯೂ ಇದೆ. ಪ್ರಜ್ವಲ್ ಅವರು ಕಣಕ್ಕಿಳಿದರೆ ಜೆಡಿಎಸ್ ಗೆಲುವಿನ ಹಾದಿ ಸುಗುಮವಾಗಲಿದೆ.












Click it and Unblock the Notifications