ಬಬಲೇಶ್ವರ ಕ್ಷೇತ್ರ: ಐತಿಹಾಸಿಕ ಸ್ಥಳದಲ್ಲಿ ಯಶಸ್ಸು ಯಾರಪಾಲಿಗೆ?

Posted By:
Subscribe to Oneindia Kannada

ಬಬಲೇಶ್ವರ ಅಥವಾ ವಿಜಯಪುರ ಗ್ರಾಮಾಂತರ ಕ್ಷೇತ್ರ ಇತಿಹಾಸ ಪ್ರಸಿದ್ಧ ಶಾಂತವೀರ ಸ್ವಾಮೀಜಿಗಳ ತಪೋಭೂಮಿಯಾಗಿ ಪ್ರಸಿದ್ಧಿ ಪಡೆದಿದೆ. 2013 ರಲ್ಲಿ ಬಬಲೇಶ್ವರವನ್ನು ವಿಜಯಪುರದ ಹೊಸ ತಾಲೂಕನ್ನಾಗಿ ಘೋಷಿಸಲಾಯ್ತು. ಬಹುಮುಖ್ಯ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಈ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದಿದ್ದು ಕಾಂಗ್ರೆಸ್.

ಗ್ರಾಮದಲ್ಲಿ ಬಬಲಿ ಜಾಲಿ ಇರುವುದರಿಂದ ಬಬಲೇಶ್ವರ ಎಂಬ ಹೆಸರು ಬಂದಿದೆ. ಇಲ್ಲಿ ಹೆಚ್ಚಿನ ಜನರಾಡುವ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಟವಾದ ಕನ್ನಡ ಮಾತನಾಡುವ ಜನರನ್ನು ಕಾಣಬಹುದು.

ವಿಜಯಪುರ ಕ್ಷೇತ್ರದಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ?

ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಬಬಲೇಶ್ವರ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರು ಅನ್ಯೋನ್ಯವಾಗಿ ಬದುಕುತ್ತಿದ್ದಾರೆ.

Karnataka Assembly Election 2018: Babaleshwar Constituency Profile

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟಿನಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಗ್ರಾಮದ ಪ್ರಮುಖ ಆದಾಯ ಮೂಲವೇ ಕೃಷಿ ಮತ್ತು ತೋಟಗಾರಿಕೆ. ಬಬಲೇಶ್ವರದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ರಷ್ಟು ಜನರು ಕೃಷಿಯಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಇಂಡಿ ಕ್ಷೇತ್ರ: ಸೌಹಾರ್ದ ಕ್ಷೇತ್ರದ ಹೊಣೆ ಯಾರ ಹೆಗಲಿಗೆ?

ಇಲ್ಲಿನ ರಾಜಕೀಯ ಇತಿಹಾಸ ಕೆಣಕುವುದಾದರೆ ಇಲ್ಲಿ ಸಚಿವ ಎಂ.ಬಿ.ಪಾಟೀಲ್ ಕಾಂಗ್ರೆಸ್ ನಿಂದ ಕಣಕ್ಕಿಳಿಯುವುದು ಖಚಿತ. ಅವರ ವಿರುದ್ಧ ಬಿಜೆಪಿಯಿಂದ ರಾಜುಗೌಡ ಪಾಟೀಲ ಸ್ಪರ್ಧಿಸುವುದು ಖಚಿತ. ಹಾಲಿ ಶಾಸಕ ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರೂ ಆಗಿರುವುದರಿಂದ ತಮ್ಮ ಜಿಲ್ಲೆಗೆ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಹಲವು ರೀತಿಯ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸಿ, ಅನುಷ್ಠಾನಕ್ಕೂ ತಂದಿದ್ದಾರೆ. ಆದ್ದರಿಂದ ಈ ಭಾಗದಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚು.

ಸಂಕ್ರಾಂತಿ ವಿಶೇಷ ಪುಟ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಬಿ.ಪಾಟೀಲ್ 2013 ರ ಚುನಾವಣೆಯಲ್ಲಿ 62061 ಮತಗಳಿಸಿದ್ದರೆ, ಜೆಡಿಎಸ್ ನ ವಿಜುಗೌಡ ಪಾಟೀಳ್ 57706 ಮತ ಪಡೆದು ತೀವ್ರ ಪ್ರತಿಸ್ಪರ್ಧೆ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Babaleshwar assembly constituency of Vijayapura district. Get election news from Babaleshwar. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ