ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿ ಅತಿ ದೊಡ್ಡ ಪಕ್ಷ- ಸರ್ಕಾರ ಅತಂತ್ರ

ಎಬಿಪಿ ನ್ಯೂಸ್ ವಾಹಿನಿ- ಸಿಎಸ್‌ಡಿಎಸ್ ನಡೆಸಿರುವ ಸಮೀಕ್ಷೆಯಲ್ಲಿ ಜನಾಭಿಪ್ರಾಯದ ಸಂಗ್ರಹದ ವರದಿ ಪ್ರಕಟವಾಗಿದೆ. ಹಿಂದಿನ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಸಿದ್ದರಾಮಯ್ಯ ಅವರ ಪರವಾದ ಒಲವು ಹೆಚ್ಚು ಪ್ರಕಟವಾಗಿತ್ತು. ಆದರೆ, ಎಬಿಪಿ ವಾಹಿನಿ ಸಮೀಕ್ಷೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ಸರಿಸಮನಾದ ಪೈಪೋಟಿ ನೀಡಲಿದೆ ಎಂದು ವರದಿಯಾಗಿದೆ.

ಸಮೀಕ್ಷೆಯ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಯಾವ ಪಕ್ಷವೂ 112 ಸೀಟುಗಳ ಗುರಿ ತಲುಪಲಾರವು ಎಂದು ಸಮೀಕ್ಷೆ ಹೇಳಿದೆ. ಇದರಿಂದ ಅತಂತ್ರ ಫಲಿತಾಂಶ ಹೊರಬೀಳಲಿದ್ದು, ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ರಚನೆಗೆ ಜೆಡಿಎಸ್ ನೆರವು ಪಡೆಯುವುದು ಅನಿವಾರ್ಯವಾಗಲಿದೆ.

karnatak-assembly-elections-2018-abp-news-opinion-poll

ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಜನರು ಸಿದ್ದರಾಮಯ್ಯ ಅವರ ಕಡೆಗೇ ಹೆಚ್ಚು ಒಲವು ತೋರಿಸಿದ್ದಾರೆ. ನಂತರದ ಸ್ಥಾನದಲ್ಲಿ ಯಡಿಯೂರಪ್ಪ ಅವರಿದ್ದಾರೆ.

ವಾಹಿನಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟಾರೆ ಮತದಾರರು ಯಾವ ಪಕ್ಷಗಳಿಗೆ ಮತ ನೀಡಲು ಬಯಸಿದ್ದಾರೆ ಎಂದು ತಿಳಿದುಕೊಳ್ಳಲು ಪ್ರಶ್ನೆಗಳನ್ನು ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಜರ ಪೈಕಿ ಹೆಚ್ಚಿನ ಜನರು ಕಾಂಗ್ರೆಸ್ ಪರ ಒಲವು ತೋರಿಸಿದ್ದಾರೆ.

ಕಾಂಗ್ರೆಸ್‌ಗೆ ಹೆಚ್ಚು ಮತ

ಕಾಂಗ್ರೆಸ್‌ಗೆ ಹೆಚ್ಚು ಮತ

ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಪರ ಹೆಚ್ಚು ಜನರು ಆಸಕ್ತಿ ತೋರಿಸಿದ್ದಾರೆ. ಹೆಚ್ಚಿನ ಮಂದಿ ಕಾಂಗ್ರೆಸ್‌ಗೆ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಮತ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಬಿಜೆಪಿ ತೀರಾ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್‌ಗಿಂತ ಕೇವಲ ಶೇ 2ರಷ್ಟು ಮತಗಳಿಂದ ಹಿಂದಿದೆ.

ಕಾಂಗ್ರೆಸ್‌ಗೆ ಮತ ಹಂಚಿಕೆ ಶೇ 37

ಬಿಜೆಪಿಗೆ ಮತ ಚಲಾವಣೆ ಶೇ 35 .

ಜೆಡಿಎಸ್‌ಗೆ ಮತ ಚಲಾಯಿಸುವವರು ಶೇ 20

ಉಳಿದ ಪಕ್ಷಗಳು ಮತ್ತು ಪಕ್ಷೇತರರಿಗೆ ಬೀಳಲಿರುವ ಮತ ಪ್ರಮಾಣ ಶೇ 8

ಮೋದಿ ಅಥವಾ ರಾಹುಲ್ ಯಾರು ಇಷ್ಟ?

ಮೋದಿ ಅಥವಾ ರಾಹುಲ್ ಯಾರು ಇಷ್ಟ?

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರಲ್ಲಿ ನಿಮಗೆ ಯಾರು ಹೆಚ್ಚು ಇಷ್ಟವಾಗುತ್ತಾರೆ ಎಂಬ ಪ್ರಶ್ನೆಯನ್ನು ಜನರಿಗೆ ಕೇಳಲಾಗಿತ್ತು. ಇದಕ್ಕೆ ಹೆಚ್ಚಿನ ಜನರು ಮೋದಿ ಅವರ ಹೆಸರನ್ನು ಅನುಮೋದಿಸಿದ್ದಾರೆ.

ನರೇಂದ್ರ ಮೋದಿ ಶೇ 43
ರಾಹುಲ್ ಗಾಂಧಿ ಶೇ 28

ಯಡಿಯೂರಪ್ಪಗೆ ಎರಡನೇ ಸ್ಥಾನ

ಯಡಿಯೂರಪ್ಪಗೆ ಎರಡನೇ ಸ್ಥಾನ

ಸಮೀಕ್ಷೆಯ ಪ್ರಕಾರ ಜನರ ಮೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಂತೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲೆಂದು 30% ಜನ ಅಭಿಪ್ರಾಯ ಪಟ್ಟಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲೆಂದು 25% ಅಭಿಪ್ರಾಯಪಟ್ಟಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೆಂದು 20% ಅಭಿಪ್ರಾಯಪಟ್ಟಿದ್ದಾರೆ.

ಲಿಂಗಾಯತರ ಮತ ಬಿಜೆಪಿಯತ್ತ

ಲಿಂಗಾಯತರ ಮತ ಬಿಜೆಪಿಯತ್ತ

ಸಮೀಕ್ಷೆ ಪ್ರಕಾರ ಲಿಂಗಾಯತರ ಮತಗಳು ಹೆಚ್ಚಿಗೆ ಹೋಗುವುದು ಬಿಜೆಪಿಗೆ ಅಂತೆ. ಶೇ 65% ಪ್ರತಿಶತ ಲಿಂಗಾಯತರ ಮತಗಳು ಬಿಜೆಪಿ ಪಾಲಾದರೆ. 25% ಮತಗಳು ಕಾಂಗ್ರೆಸ್‌ಗೆ ಹೋಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+