ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಅಲ್ಪ ಮುನ್ನಡೆ, ಬದಲಾಗುವುದೇ ಚಿತ್ರಣ?
ಬಾಗಲಕೋಟೆ, ಮೇ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿರುವ ಎರಡನೇ ಕ್ಷೇತ್ರ ಬಾದಾಮಿಯಲ್ಲಿ ಸಿದ್ದರಾಮಯ್ಯ ಅಲ್ಪ ಮುನ್ನಡೆ ಕಂಡಿದ್ದಾರೆ.
ಮತೆಣಿಕೆಯ ಎರಡನೇ ಸುತ್ತು ಮುಕ್ತಾಯವಾದಾಗ ಸಿದ್ದರಾಮಯ್ಯ 2000 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಆದರೆ ಅವರು ಚಾಮುಂಡೇಶ್ವರಿಯಲ್ಲಿ ಸೋಲಿನ ಸನಿಹದಲ್ಲಿದ್ದಾರೆ.
ಬಾದಾಮಿಯ ಸಿದ್ದರಾಮಯ್ಯ ಅವರ ವಿರುದ್ಧ ಅಭ್ಯರ್ಥಿ ಶ್ರೀರಾಮುಲು ಅವರು ತಾವು ಸ್ಪರ್ಧಿಸಿರುವ ಮತ್ತೊಂದು ಕ್ಷೇತ್ರ ಮೊಳಕಾಲ್ಮೂರಿನಲ್ಲಿ 10000 ಸಾವಿರ ಮತಗಳ ಭಾರಿ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.

ಬಾದಾಮಿಯಲ್ಲಿ ಇನ್ನೂ ಕೇವಲ 2 ಸುತ್ತಿನ ಮತ ಎಣಿಕೆ ಮಾತ್ರವೇ ನಡೆದಿದ್ದು, 2000 ಮತಗಳ ಮುನ್ನಡೆ ಅಲ್ಪ ಎಂದೇ ಪರಿಗಣಿಸಲಾಗುತ್ತದೆ ಹಾಗಾಗಿ ಈ ಚಿತ್ರಣ ಬದಲಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.












Click it and Unblock the Notifications