ದೇಶದಲ್ಲೇ ಹಾಟ್ ಹಾಟ್ ರಾಜ್ಯ ನನ್ನ ಕರ್ನಾಟಕ ಆಗಬೇಕು
Recommended Video

ನಾನು ಲಾಸ್ಯಾ ನಾಗರಾಜ್. ನನ್ನ ಕನಸಿನ ಕರ್ನಾಟಕ ಹೇಗಿರಬೇಕು ಅನ್ನೋದನ್ನ ನಿಮ್ಮೆದುರು ಹೇಳಿಕೊಳ್ತಾ ಇದ್ದೀನಿ. ಇದು ನಿಮಗೆ ಕ್ರೇಜಿ ಅನ್ನಿಸಬಹುದು. ಆದರೆ ಕರ್ನಾಟಕ ಹಾಗೆ ಇದ್ದರೆ ಎಷ್ಟು ಚೆಂದ ಅನ್ನೋದನ್ನ ನೀವೇ ಊಹಿಸಿಕೊಳ್ಳಿ.
ಜಪಾನ್ ನಲ್ಲಿ ದಪ್ಪಗಿರೋದು ಕಾನೂನುಬಾಹಿರ. ಹೌದು ನೀವು ಕೇಳಿಸಿಕೊಳ್ಳುತ್ತಿರೋದು ಸರಿಯಿದೆ. ಸ್ಥೂಲಕಾಯದಿಂದ ಎಷ್ಟೆಲ್ಲ ಸಮಸ್ಯೆ ಆಗ್ತಿದೆ? ಕಾರ್ಡಿಯಾಕ್ ಅರೆಸ್ಟ್, ಬಿಪಿ, ಶುಗರ್ ಎಷ್ಟೆಲ್ಲ ಆರೋಗ್ಯ ಸಮಸ್ಯೆಗಳು?
ಇನ್ನು ನಮ್ಮ ಐಟಿ ಸಿಟಿಯಲ್ಲಿ ಡೆಸ್ಕ್ ಜಾಬ್ ಮಾಡಿ, ಎಂಥೆಂಥ ಅದ್ಭುತ ಪ್ರತಿಭೆಗಳು ಬೇಗ ಬೇಗ ಸತ್ತು ಹೋಗ್ತಿದ್ದಾರೆ. ಈಗ ಇಮ್ಯಾಜಿನ್ ಮಾಡಿಕೊಳ್ಳಿ: ನಮ್ಮ ಕರ್ನಾಟಕದಲ್ಲಿ ಹಾಟ್ ಗರ್ಲ್ಸ್ ಅಂಡ್ ಬಾಯ್ಸ್ ಮಾತ್ರ ಇದ್ದಾರೆ ಅಂದುಕೊಳ್ಳಿ. ಕರ್ನಾಟಕವು ಇಡೀ ದೇಶದಲ್ಲೇ ಹಾಟೆಸ್ಟ್ ಸ್ಟೇಟ್ ಅಂತ ಅನ್ನಿಸಿಕೊಂಡರೆ ಹೇಗಿರುತ್ತದೆ?!

ಎಲ್ಲರೂ ದೈಹಿಕವಾಗಿ ತುಂಬ ಆರೋಗ್ಯವಾಗಿ ಇದ್ದರೆ ಎಷ್ಟೆಲ್ಲ ಚಂದ ಅಲ್ಲವಾ? ಹೌದು, ನಮ್ಮ ಕರ್ನಾಟಕ ಹಾಗೆ ಆಗಬೇಕು. ಸ್ಥೂಲಕಾಯರು ಅಂದರೆ ತುಂಬ ದಪ್ಪಗಿರುವವರು ಕೂಡ ಫಿಟ್ ಅಂಡ್ ಫೈನ್ ಆಗಬೇಕು. ಇದು ನನ್ನ ಕನಸಿನ ಕರ್ನಾಟಕ. ಇವಳೇನಪ್ಪ ತಿಕ್ಕಲಿ ಥರ ಮಾತನಾಡ್ತಿದ್ದಾಳೆ ಅಂದುಕೊಳ್ಳಬೇಡಿ. ಎಲ್ಲರೂ ಆರೋಗ್ಯವಾಗಿದ್ದರೆ ಎಷ್ಟೆಲ್ಲ ಚಂದ ಅಂತ ಊಹಿಸಿಕೊಂಡು ನೋಡಿ.












Click it and Unblock the Notifications