ಮಾಜಿ ಸಿಎಂ ಯಡಿಯೂರಪ್ಪ 7 ಕೋಟಿ ಆಸ್ತಿ ಒಡೆಯ

Recommended Video

      ರಾಜೀವ್ ಚಂದ್ರಶೇಖರ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ | ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ | Oneindia Kannada

      ಶಿಕಾರಿಪುರ, ಏಪ್ರಿಲ್ 20: ಶಿಕಾರಿಪುರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ.

      ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಘೋಷಿತ ಆಸ್ತಿ 7 ಕೋಟಿ ರು ನಷ್ಟಿದೆ. 2013ರಲ್ಲಿ ಅವರ ಆಸ್ತಿ 5.96 ಕೋಟಿ ರು ಹಾಗೂ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 6.97 ಕೋಟಿ ರು ಎಂದು ಅಫಿಡವಿಟ್ ಸಲ್ಲಿಸಿದ್ದರು.

      2018ರ ಘೋಷಿತ ಪ್ರಮಾಣ ಪತ್ರದ ವಿವರಗಳನ್ನು ನೋಡಿದ್ದಾಗ ಅವರ ಬಳಿ 4.85 ಕೋಟಿ ರೂ. ಸ್ಥಿರಾಸ್ತಿ, 71.30 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

      ಸುಮಾರು 1.09 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇವೆ. ಬೆಂಗಳೂರು ಹೊರವಲಯದಲ್ಲಿ 24.15 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, ಶಿಕಾರಿಪುರ, ಬೆಂಗಳೂರಲ್ಲಿ ವಸತಿ ಹಾಗೂ 3.83 ಕೋಟಿ ಮೌಲ್ಯದ ಕಟ್ಟಡಗಳಿವೆ. 2013ಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರ ಆಸ್ತಿ ಪ್ರಮಾಣದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಯಡಿಯೂರಪ್ಪ ಅವರು ಸಲ್ಲಿಸಿರುವ ಆಸ್ತಿ ವಿವರ ಅಫಿಡವಿಟ್ ಮಾಹಿತಿ ಮುಂದಿದೆ...

      ಮನೆ ಹಾಗೂ ನಿವೇಶನ, ಸ್ಥಿರಾಸ್ತಿ

      ಮನೆ ಹಾಗೂ ನಿವೇಶನ, ಸ್ಥಿರಾಸ್ತಿ

      ಮನೆ ಹಾಗೂ ನಿವೇಶನಗಳು: ಶಿಕಾರಿಪುರದಲ್ಲಿ ಎರಡು ಮನೆಗಳಿವೆ. ಒಂದು ಮನೆ ಹೆಂಡತಿ ಮನೆ ಕಡೆಯಿಂದ ಬಂದದ್ದು, 2004ರಲ್ಲಿ ಶಿಕಾರಿಪುರದಲ್ಲಿ ಮತ್ತೊಂದು ಮನೆ ಖರೀದಿ.
      * ಬೆಂಗಳೂರಿನ ಆರ್ ಎಂವಿ ಬಡಾವಣೆಯಲ್ಲಿ ನಿವಾಸವಿದೆ.
      * ಬೆಂಗಳೂರಿನಲ್ಲಿ 65 X 85 ಬಿಡಿಎ ನಿವೇಶನ.
      * ತಿರುಮಲಾಪುರದಲ್ಲಿ 5.02 ಎಕರೆ ಕೃಷಿ ಭೂಮಿ.
      * ಚನ್ನಹಳ್ಳಿ 4.10 ಎಕರೆ ಕೃಷಿ ಭೂಮಿ.
      * ಶಿರಾಳಕೊಪ್ಪದಲ್ಲಿ ಕೈಗಾರಿಕಾ ಉದ್ದೇಶದಿಂದ 9.12 ಎಕರೆ ಭೂಮಿ ಖರೀದಿ.

      ಬ್ಯಾಂಕ್ ಠೇವಣಿ, ಷೇರುಗಳು

      ಬ್ಯಾಂಕ್ ಠೇವಣಿ, ಷೇರುಗಳು

      * ಶಿಕಾರಿಪುರದ ಕೆನರಾ ಬ್ಯಾಂಕ್ ನಲ್ಲಿ 2,19,636 ರು ಹಣ.
      * ಶಿವ ಸಹಕಾರಿ ಬ್ಯಾಂಕ್ ನಲ್ಲಿ 20 ಸಾವಿರ ಠೇವಣಿ.
      * ಅಪೆಕ್ಸ್ ಬ್ಯಾಂಕ್ ವಿಧಾನಸೌಧ ಶಾಖೆಯಲ್ಲಿ 17 ಲಕ್ಷ 25ಸಾವಿರ 131 ರುಪಾಯಿಗಳು
      * ಸಾಫ್ಟ್ ವೇರ್ ಟೆಕ್ ಗ್ರೂಪ್ ನಲ್ಲಿ 100 ಷೇರುಗಳು
      * ಜೆನಿತ್ ಇನ್ಫೋಟೆಕ್ ನಲ್ಲಿ 50 ಷೇರುಗಳು
      * ಖೇತಾನ್ ಲಿಮಿಟೆಡ್ ನಲ್ಲಿ 70 ಷೇರುಗಳು
      * ಶಿಕಾರಿಪುರ ಅರ್ಬನ್ ಬ್ಯಾಂಕ್ 100 ಷೇರುಗಳು

      ಚಿನ್ನ ಬೆಳ್ಳಿ, ವಿಮೆ ಹಣ, ಇತ್ಯಾದಿ

      ಚಿನ್ನ ಬೆಳ್ಳಿ, ವಿಮೆ ಹಣ, ಇತ್ಯಾದಿ

      ವಿಮೆ ಹಣ, ಚಿನ್ನ ಬೆಳ್ಳಿ ಇತ್ಯಾದಿ:
      * ಎಲ್ ಐಸಿ 1.72 ಲಕ್ಷ ರು.
      * ಬಿಎಸ್ ಎನ್ ಎಲ್ ನಿಂದ ಪಿಂಚಣಿ ಹಣ
      * 10 ಲಕ್ಷ ರು ಮೌಲ್ಯದ ಗೃಹೋಪಯೋಗಿ ವಸ್ತುಗಳು
      * 76 ಕೆಜಿ ಬೆಳ್ಳಿ, 2ಕೆಜಿ 976ಗ್ರಾಂ ಬಂಗಾರ.
      * ಒಂದು ಕಾಂಟೆಸ್ಸಾ ಕಾರು, ಒಂದು ಸ್ಕಾರ್ಪಿಯೋ ಕಾರು(ನಂತರ ಬ್ಯಾಂಕ್ ಸಾಲಕ್ಕೆ ಮಾರಿದ್ದಾರೆ)

      ನಮ್ಮ ಕುಟುಂಬ ಸ್ವಿಸ್ ಖಾತೆ ಹೊಂದಿಲ್ಲ

      ನಮ್ಮ ಕುಟುಂಬ ಸ್ವಿಸ್ ಖಾತೆ ಹೊಂದಿಲ್ಲ

      2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ಒಟ್ಟು ಮೌಲ್ಯ 1.82 ಕೋಟಿ ರು ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ನಂತರ ಲೋಕಾಯುಕ್ತರಿಗೆ ಸಲ್ಲಿಸಿದ ವಾರ್ಷಿಕ ವಿವರಗಳಲ್ಲಿ ಆಸ್ತಿ ಮೌಲ್ಯ 5.38 ಕೋಟಿ ರು ಎಂದು ಬಹಿರಂಗಪಡಿಸಿದ್ದರು. ನನಗೆ ನನ್ನ ಮಕ್ಕಳಿಗೆ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಇಲ್ಲ ಎಂದು ವಿಶೇಷವಾಗಿ ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+