ಪದ್ಮನಾಭನಗರದ 'ಸಾಮ್ರಾಟ್' ಅಶೋಕ್ ಆಸ್ತಿ ವಿವರ
Recommended Video

ಬೆಂಗಳೂರು, ಏಪ್ರಿಲ್ 20: ಪದ್ಮನಾಭನಗರದ ಬಿಜೆಪಿ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದು, ಜತೆಗೆ ಆಸ್ತಿ ವಿವರವನ್ನು ದಾಖಲಿಸಿದ್ದಾರೆ.
2013ರಲ್ಲಿ 26 ಕೋಟಿ ರು ಮೌಲ್ಯದ ಆಸ್ತಿ ಘೋಷಿಸಿದ್ದ ಅಶೋಕ್ ಅವರ ಆಸ್ತಿ ಪ್ರಮಾಣ ಈಗ 40 ಕೋಟಿ ರುಗೇರಿದೆ.2008ರಲ್ಲಿ ಘೋಷಿತ ಆಸ್ತಿ ಪ್ರಮಾಣ 12.45ಕೋಟಿ ರು ನಷ್ಟಿತ್ತು. 2013ರಲ್ಲಿ 23.24 ಪ್ಲಸ್ ಕೋಟಿ ರು ನಷ್ಟಿತ್ತು.

ಅಶೋಕ್ ಅವರ ಕುಟುಂಬದ ಇತರರ ಅದಾಯ 2008ರಲ್ಲಿ 12 ಲಕ್ಷ ರು ನಷ್ಟಿತ್ತು. 2013ರಲ್ಲಿ 89 ಲಕ್ಷ ರುಗೇರಿದೆ. 2013ರಲ್ಲಿ 1.99 ಕೋಟಿ ರು ಸಾಲ ಹೊಂದಿದ್ದರು. ಈಗ 2.48 ಕೋಟಿ ರು ಸಾಲ ಇದೆ.
ಸ್ಥಿರಾಸ್ತಿ : 36.88 ಕೋಟಿ ರು
ಚರಾಸ್ತಿ : 3.73 ಕೋಟಿ ರು
ಚಿನ್ನಾಭರಣ: 2.5 ಕೆ.ಜಿ
ಸಮಗ್ರ ಆಸ್ತಿ ವಿವರ ಡೌನ್ ಲೋಡ್ ಮಾಡಿಕೊಳ್ಳಿ
ಅಶೋಕ್ ವಿರುದ್ಧ ಪ್ರಕರಣಗಳು
* ಲೊಟ್ಟೆಗೊಲ್ಲಹಳ್ಳಿ ಡಿನೋಟಿಫಿಕೇಷನ್ ಪ್ರಕರಣ
* 2008ರಲ್ಲಿ ನಮೂದಿಸಿದ್ದ 9 ಗುಂಟೆ ಡಿನೋಟಿಫಿಕೇಷನ್ ಪ್ರಕರಣದಿಂದ ಮುಕ್ತಿ. ವಿವಾದಿತ ಭೂಮಿಯನ್ನು ಬಿಡಿಎ ಸುಪರ್ದಿಗೆ ನೀಡಿದ್ದಾರೆ.
* ಸೋಮನಹಳ್ಳಿಯಲ್ಲಿ ಬಗರ್ ಹುಕಂ ಭೂ ಪ್ರದೇಶದ 8 ಎಕರೆ ಪ್ರದೇಸ ಅಕ್ರಮವಾಗಿ ಪರಭಾರೆ ಆರೋಪದ ಮೇಲೆ ಬಿಎಂಟಿಎಫ್ ನಿಂದ ಎಫ್ ಐಆರ್
Download











Click it and Unblock the Notifications