ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಕರ್ನಾಟಕದಲ್ಲಿ ಮತ್ತೆ ಅರಳಲಿದೆ ಕಮಲ

ಬೆಂಗಳೂರು, ಮೇ 09: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಮೂಲಕ ಓದುಗರ ಅಭಿಪ್ರಾಯ ಸಂಗ್ರಹ ಮಾಡುವ ಉದ್ದೇಶದಿಂದ ಒನ್ಇಂಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಲೈವ್ ಪೋಲ್ ನಡೆಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಐದು ವರ್ಷಗಳ ಕಾಲ ಅಧಿಕಾರ ನಡೆಸಿ, ದಾಖಲೆ ಬರೆದಿದ್ದರೂ, ಓದುಗರ ಅಭಿಪ್ರಾಯ ವಿರುದ್ಧವಾಗಿದೆ.

ಫೇಸ್ಬುಕ್ ಲೈವ್ ಮತದಾನ: ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.

Assembly Elections 2018 Oneindia Fb Poll : BJP set to win against JDS and Congress

ಫಲಿತಾಂಶ: ಸುಮಾರು ಒಂದು ಮುಕ್ಕಾಲು ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. 3,81,853 ಮಂದಿಯನ್ನು ಸಮೀಕ್ಷೆ ತಲುಪಿದ್ದು, 90 ಸಾವಿರ ಮಂದಿ ವೀಕ್ಷಿಸಿ, 64,191 ಮಂದಿ ಪ್ರತಿಕ್ರಿಯಿಸಿದ್ದಾರೆ.

ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ. ಥಮ್ಸ್ ಅಪ್ ಒತ್ತಿದವರು 6766 ಮಂದಿ ಇದು ಯಾವುದೇ ಪಕ್ಷ ವೋಟಿಂಗ್ ಲೆಕ್ಕಕ್ಕೆ ಪರಿಗಣಿಸುವುದಿಲ್ಲ.

ಬಿಜೆಪಿಗೆ ನೀಡಲಾದ ಹಾರ್ಟ್ ಸಿಂಬಲ್ ಸುಮಾರು 25,028 ಬಾರಿ ಒತ್ತಲಾಗಿದೆ. ಆದರೆ, ಒಮ್ಮೆ ಒತ್ತಿದ್ದು ಮಾತ್ರ ಪರಿಗಣಿಸಲಾಗುವುದರಿಂದ ಬಿಜೆಪಿಗೆ ಬಂದ ಮತ 7,593.

ಇದೇ ರೀತಿ ಜೆಡಿಎಸ್ ಗೆ ನೀಡಲಾದ ಕ್ರೈ ಸಿಂಬಲ್ ಸುಮಾರು 11,578 ಒತ್ತಲಾಗಿದ್ದರೂ ಗಣನೆಗೆ ಬಂದ ಮತ 2849.

ಕಾಂಗ್ರೆಸ್ ಗೆ ನೀಡಲಾದ ಲಾಫಿಂಗ್ ಸಿಂಬಲ್ ಸುಮಾರು 8,367 ಬಾರಿ ಒತ್ತಲಾಗಿದ್ದರೂ ಗಣನೆಗೆ ಬಂದ ಮತ 1925.

ಮಿಕ್ಕ ಎಮೋಜಿಗಳಿಗೆ ಬಂದಿದ್ದು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. 12,503 ಕಾಮೆಂಟ್ ಗಳು ಬಂದಿದ್ದು, 629ಕ್ಕೂ ಅಧಿಕ ಬಾರಿ ಹಂಚುಕೊಳ್ಳಲಾಗಿದೆ. ಒಟ್ಟಾರೆ, ಫಲಿತಾಂಶದಂತೆ ಈ ಕ್ಷಣಕ್ಕೆ ಬಿಜೆಪಿ ಗೆಲುವು ಸಾಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+