ದೆಹಲಿಯ ಹೋಟೆಲ್‌ಗಳಿಗೆ ಚೀನಾ ಪ್ರವಾಸಿಗರ ಪ್ರವೇಶ ನಿಷೇಧ
ನವದೆಹಲಿ, ಜೂನ್ 25: ಚೀನಾ ಪ್ರವಾಸಿಗರಿಗೆ ಇನ್ನು ದೆಹಲಿಯ ಯಾವ ಹೋಟೆಲ್, ರೆಸ್ಟೋರೆಂಟ್‌ಗಳಲ್ಲೂ ಆತಿಥ್ಯ ನೀಡಬಾರದು ಎಂದು ದೆಹಲಿಯ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲಿಕರ ಸಂಘ ನಿರ್ಧರಿಸಿದೆ.
Recommended Video
ಗುರುವಾರ ಬೆಳಗ್ಗೆ ಈ ಕುರಿತು ಸಭೆ ನಡೆಸಿದ ಅವರು ಇನ್ನುಮುಂದೆ ದೆಹಲಿಯಲ್ಲಿರುವ ಸುಮಾರು 3 ಸಾವಿರ ಹೋಟೆಲ್‌ಗಳಲ್ಲಿ ಚೀನಾದವರಿಗೆ ಉಳಿಯಲು ಅನುಮತಿ ಇಲ್ಲ, ಬುಕಿಂಗ್‌ಗೆ ಅವಕಾಶವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಘರ್ಷಣೆಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಹತ್ಯೆ ಮಾಡಿದ್ದರು. ಈ ಬೆಳವಣಿಗೆಯನ್ನು ಗಮನಿಸಿರುವ ಹೋಟೆಲ್ ಮಾಲಿಕರ ಸಂಘವು ಚೀನಾದವರಿಗೆ ಹೋಟೆಲ್‌ನಲ್ಲಿ ತಂಗಲು ಅವಕಾಶವನ್ನು ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.

ಚೀನಾವು ವಿಶ್ವವಲ್ಲ, ಚೀನಾದ ಸಹಾಯವಿಲ್ಲದೆಯೇ ನಾವು ಬದುಕಬಲ್ಲೆವು, ನಾವ್ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಕೂಡ ಚೀನಾದವರಿಗೆ ಅನುಮತಿ ಇಲ್ಲ. ಬಹುತೇಕ ಹೋಟೆಲ್‌ಗಳು ಒಪ್ಪಿಕೊಂಡಿವೆ. ನಾವು ಯಾವುದೇ ರೀತಿಯ ಒತ್ತಡವನ್ನು ಹಾಕಿಲ್ಲ ಅಸೋಸಿಯೇಷನ್ ಅಧ್ಯಕ್ಷ ಸಂದೀಪ್ ತಿಳಿಸಿದ್ದಾರೆ.
ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಹೋಟೆಲ್ ಉದ್ಯಮ ಅವನತಿಯಲ್ಲಿದೆ. ಕಟ್ಟಡದ ಬಾಡಿಗೆ, ಲೋನ್‌ಗಳನ್ನು ಕಟ್ಟಲು ಕೂಡ ಅವರ ಬಳಿ ಹಣವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications