• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಂಗಸರಿಗೆ ಮಾತ್ರ, ನಮ್ಮಂಥ ಗಂಡಸರಿಗೂ ಮಾತ್ರ

By Staff
|

ಹೆಣ್ಣು ಒಬ್ಬ ತಂಗಿ, ಅಕ್ಕ, ಮಡದಿ, ತಾಯಿ ಇನ್ನು ಏನೇನೋ. ಪೊರೆಯುವವಳೆ ನಿರಾಕರಿಸಿದರೆ ಬಾಳು ಸಾಧ್ಯವೆ? ಗಂಡಿಗೆ ?... ನೀವೇ ಊಹಿಸಿ...

* ಡಿ.ಆರ್‌. ಎನ್‌., ಚೆನ್ನೈ.

* ಕನ್ನಡಕ್ಕೆ : ರೇವಣ

ಹೆಂಗಸರಿಗೆ ಮಾತ್ರ ವಿಭಾಗವನ್ನು ಮೊದಲ ವಾರದಿಂದ ಓದಿಕೊಳ್ಳುತ್ತಿದ್ದೇನೆ. ಮೊದಲ ಸರತಿ ಕುತೂಹಲದಿಂದ ತೆರೆದು ನೋಡಿದೆ. ಭಾವನೆಗಳು ತುಂಬಾ ವೈಯಕ್ತಿಕ ಮಟ್ಟದಲ್ಲಿ ನೆಲೆಗೊಂಡಿತ್ತು. ಇದು ಅಂಕಣವಾದ್ದರಿಂದ, ಮತ್ತು ಪ್ರಥಮ ಪುರುಷದಲ್ಲಿ ಬರೆದುದಾಗಿದ್ದುದರಿಂದ ಅವರಪಾಡಿಗೆ ಅದುಸರಿ ಎನಿಸಿತು. ಭಾವನೆಗಳು ತೀವ್ರತೆಯಿಂದ ಕೂಡಿದ್ದವು. ಕನ್ನಡ ನನಗೆ ಅಷ್ಟು ಚೆನ್ನಾಗಿ ಬರುವುದಿಲ್ಲ. ಆದರೂ ಲೇಖಕರು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವುದು ಅರ್ಥ ಆಗುತ್ತದೆ.

ಇಲ್ಲಿರುವ ಲೇಖನಗಳೆಲ್ಲ ಹೆಂಗಸರಿಗಾಗಿ ಬರೆದುಕೊಂಡಂಥವು. ಆದರೆ ಹೆಂಗಸರ ಪರವಹಿಸುವುದಿಲ್ಲ ಎನ್ನುವುದೇ ನನ್ನ ಸ್ವಲ್ಪ ಸಂತೋಷಕ್ಕೆ ಕಾರಣ. ಯಾಕೆಂದರೆ, ಹೆಂಗಸರು (ಕಡೆಯಪಕ್ಷ ನನ್ನ ಜೀವನದಲ್ಲಿ) ಮಹಾ ಸ್ವಾರ್ಥಿಗಳು ಮತ್ತು ಎಲ್ಲಿಯತನಕ ಬೇಕಾದರೂ ಹೋಗಬಲ್ಲರು. ಗಂಡಸರನ್ನು ಅಂದರೆ ಗಂಡನೆನಿಸಿಕೊಂಡವನನ್ನು ಪಾಪದ ಪ್ರಾಣಿಯನ್ನಾಗಿಸಿ ತನ್ನ ಆಸೆಗಳಿಗೋಸ್ಕರ ಮಾತ್ರ ಜೀವನ ಮಾಡಲು ಉತ್ಸಾಹ ತೋರಿಸುವವಳು ಎನ್ನುವುದು ಕ್ರೂರವಾದ ಸತ್ಯ.

ಪ್ರೀತಿ, ಲಿವಿಂಗ್‌ ಟುಗೆದರ್‌ ಮತ್ತು ದಾಂಪತ್ಯದ ಮೌಲ್ಯಗಳನ್ನು ಚಿಂದಿಚಿಂದಿ ಮಾಡಿದವಳು ನನ್ನ ಹೆಂಡತಿ(ಆಗಿದ್ದವಳು). ಅವಳನ್ನು ಮದುವೆ ಆಗುವುದಕ್ಕೆ ನನಗೆ ಅಷ್ಟು ಇಷ್ಟವಿರಲಿಲ್ಲ. ಆದರೆ ಅವಳು ನನ್ನನ್ನು ತುಂಬಾ ಲವ್‌ ಮಾಡುತ್ತಿದ್ದಾಳೆ ಎಂದು ಗೊತ್ತಾಗಿ, ಪರೀಕ್ಷಿಸಿಕೊಂಡ ನಂತರ ಮದುವೆಗೆ ಒಪ್ಪಿದ್ದೆ. ಅವರ ತಂದೆ ತಾಯಿ ಮತ್ತು ವಂಶದ ದೊಡ್ಡಸ್ತಿಕೆಯೂ ಚೆನ್ನಾಗಿತ್ತು. ಬಿಡಿಗಾಸು ವರದಕ್ಷಿಣೆ ಪಡೆಯದೆ ಅವರಿಂದ ಯಾವ ಅನುಕೂಲಗಳನ್ನೂ ಸ್ವೀಕರಿಸದೆ ನಾನು ಅವಳ ಮದುವೆ ಆದೆ. ಯಾರನ್ನಾದರೂ ಮದುವೆ ಆಗಬೇಕಲ್ಲವೆ.

ಅವಳಿಗೆ ತನ್ನ ಗಂಡ ದೊಡ್ಡವನು, ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ, ತಿಂಗಳಿಗೆ 80ಕೆ ಸಂಬಳ ತರುತ್ತಾನೆ ಎನ್ನುವ ವಿಚಾರ ತುಂಬಾ ಪ್ರಾಮುಖ್ಯ ವಿಷಯವಾಗಿ ಕಾಣತೊಡಗಿತು. ಹೋದ ಜಾಗದಲ್ಲೆಲ್ಲಾ ಅದನ್ನೇ ದೊಡ್ಡ ವಿಷಯ ಅಂತ ಹೇಳುತ್ತಿದ್ದಳು. ನನಗೆ ಅವೆಲ್ಲ ಅಸಹ್ಯವಾಗಿ ಕಾಣುತ್ತದೆ. ನನಗೆ ಅವೆಲ್ಲ ಗೊತ್ತೇ ಇಲ್ಲ. ಓದಿದ್ದೆ, ಕೆಲಸಕ್ಕೆ ಸೇರಿದ್ದೆ, ಸಂಬಳ ಬರುತ್ತಿತ್ತು. ಅವಳಿಗೆ, ನನ್ನ ಹತ್ತಿರದ ಸಂಬಂಧಿಕರಿಗೆ ಖರ್ಚು ಮಾಡುತ್ತಿದ್ದೆ. ಯಾರೂ ಮಾಡದೇ ಇರುವ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ನನಗೆ ಯಾವತ್ತೂ ಅನ್ನಿಸಿರಲಿಲ್ಲ. ನಾನು ಮಾಡಿಯೂ ಇಲ್ಲ, ಬಿಡಿ.

ಹಾಗೆಯೇ ತಪ್ಪುಗಳನ್ನೂ ಹೆಚ್ಚಾಗಿ ಮಾಡಿದವನಲ್ಲ. ಮಾಡಿದ್ದರೆ ಅದು ಇವಳನ್ನು ಮದುವೆ ಆಗಿದ್ದು ಮಾತ್ರ, ಖಂಡಿತ.. ಅವಳಿಗೆ ತುಂಬಾ ಅಹಂಕಾರ. ಅಂತಃಕರಣ ಎನ್ನುವುದೇ ಇಲ್ಲ. ಎಷ್ಟು ಹೇಳಿದರೂ ಬುದ್ದಿ ಬರಲಿಲ್ಲ. ನಾನೇ ಮಹಾ ಎನ್ನುವ ಅಹಂಕಾರ ಅವಳಿಗಿತ್ತು. ಈಚೆಗೆ ನೀವು ಪ್ರಕಟಿಸಿದ ಒಂದು ಚಿತ್ರದಲ್ಲಿ ಅವಳು ಹೂಗುಚ್ಛ ಕೊಡುತ್ತಿರುವ ಚಿತ್ರ ಕಂಡೆ. ನೋಡಿ ಬಹಳ ಡಿಸ್ಟರ್ಬ್‌ ಆದೆ.

Self centered and also selfish ಆದ ಅವಳನ್ನು ತಿದ್ದಲಾಗದೆ, ತಡೆದುಕೊಳ್ಳಲೂ ಆಗದೆ ನಾನು ಅನುಭವಿಸಿದ ಮಾನಸಿಕ ಹಿಂಸೆ ಯಾವ ಗಂಡಸಿಗೂ ಬರಬಾರದು. ಎಲ್ಲರೂ ಹೆಂಗಸರ ಪರವಾಗಿಯೇ ಮಾತಾಡುವುದು, ಪತ್ರಿಕೆಗಳಲ್ಲಿ ಲೇಖನ ಬರೆಯುವುದು ನೋಡಿದಾಗಲೆಲ್ಲ ನನಗೆ ತುಂಬಾ ಸಿಟ್ಟು ಬರುತ್ತದೆ. ಯಾವ ತಪ್ಪನ್ನೂ ಮಾಡದ ನನಗೆ ಅಂತಹ ಶಿಕ್ಷೆ ಕೊಟ್ಟಳು ಅವಳು. ಡೈವೋರ್ಸ್‌ ಮಾಡುವುದು ಬೇಡ ಅಂದುಕೊಂಡು ಸುಮ್ಮನಿದ್ದೆ. ನಿಧಾನವಾಗಿ ಅವಳ ಆಟಾಟೋಪಗಳು ಅವಳ ತಂದೆತಾಯಿ ಮತ್ತು ತಂಗಿಯರಿಗೂ ಗೊತ್ತಾಯಿತು. ಭಾವ ನೀವು ಅವಳನ್ನು ತಿದ್ದಿ ಸರಿಮಾಡಿ ಎಂದು ಚಿಕ್ಕ ಹುಡುಗಿಯರು ಬುದ್ದಿ ಹೇಳಲು ಶುರು ಮಾಡಿದ್ದರು.

ಇವಳ ಉಪಟಳ ತುಂಬಾ ಹೆಚ್ಚಾಯಿತು. ನಾನು ಅಂತರ್‌ಮುಖಿಯಾಗಿ ಆಗುವುದೆಲ್ಲ ಆಗಲಿ ಎಂದುಕೊಂಡು ಸುಮ್ಮನಿರುತ್ತಿದ್ದೆ. ಅದಕ್ಕೂ ಅವಳು ತಕರಾರು ಹೇಳುತ್ತಿದ್ದಳು. ಹೊರಗಡೆ ಮಾಡಬಾರದ್ದನ್ನೆಲ್ಲ ಮಾಡಿ ಮನೆಗೆ ಬಂದು ನನಗೆ ಬುದ್ದಿವಾದ ಹೇಳುತ್ತಿದ್ದುದು ನನಗೆ ಸಹಿಸಿಕೊಳ್ಳಲು ಕಷ್ಟ ವಾಯಿತು.

ಎಲ್ಲವೂ ಒಂದಲ್ಲ ಒಂದು ದಿನ ತಾರ್ಕಿಕ ಹಂತಕ್ಕೆ ಬರಲೇ ಬೇಕು. ಅವಳನ್ನು ನಾನೇ ಒಂದು ದಿನ ಕೇಳಿದೆ. ನನ್ನಿಂದ ನಿನಗೆ ಏನು ಬೇಕು?

ಅವಳು ಹೇಳಿದ್ದು : ನನ್ನ ಇಷ್ಟಕ್ಕೆ ಅಡ್ಡ ಬರಬಾರದು, ನಾನು ಏನು ಬೇಕಾದರೂ ಮಾಡುತ್ತೇನೆ. Go to work and come back ಅಷ್ಟೆ ಎಂದು ಆಜ್ಞೆ ಕೊಟ್ಟಳು. ನನಗೆ ಬದುಕೇ ಬೇಜಾರಾಯಿತು. ಕೋಪ ಯಾರ ವಿರುದ್ಧ ತೀರಿಸಿಕೊಳ್ಳುದು ಎನ್ನುವುದು ಗೊತ್ತಾಗದೆ ಕೆಲಸಕ್ಕೆ ರಾಜಿನಾಮೆ ಕೊಟ್ಟೆ. ಅವಳ ನಡವಳಿಕೆ ಎಲ್ಲಿಯವರೆಗೆ ಹೋಯಿತು ಎಂದು ನಾನು ಇಲ್ಲಿ ಬರೆದು ತಿಳಿಸುವ ಅಗತ್ಯವಿಲ್ಲ. ನಾನು ತುಂಬಾ ನೊಂದುಕೊಂಡೆ.

ನಿಮ್ಮ ಒಂದು ಲೇಖನದಲ್ಲಿ 'ಯಾವ ಅಪರಾಧಕ್ಕೆ ಅವಳಿಗೆ ಈ ಶಿಕ್ಷೆ" ಎಂದು ಕೇಳಿದ್ದೀರಿ.

ನನಗೆ ಯಾಕೆ ಈ ಶಿಕ್ಷೆ?

ಊರು ಬಿಟ್ಟು, ನಾನು ಸಂಪಾದಿಸಿದ್ದನ್ನೆಲ್ಲ ಬಿಟ್ಟು , ಆದದ್ದೆಲ್ಲ ಒಂದು ಕೆಟ್ಟ ಕನಸು ಎಂದು ಭಾವಿಸಿ ಈಗ ಇಲ್ಲಿಗೆ ಬಂದು ಇದ್ದೇನೆ. ಜೀವನ ಹೇಗೂ ನಡೆಯುತ್ತದೆ. ನನ್ನ ಬಾಳಿನಲ್ಲಿ ಒಬ್ಬಳೆ ಹೆಂಗಸು ಬರುವುದಿತ್ತು. ಅವಳು ಬಂದಳು ಹೋದಳು.

ಅವಳ ದುರ್ನಡತೆಯಿಂದ ನಾನು ತುಂಬ ಖಿನ್ನನಾಗಿದ್ದೆ. ನಾನು ಅನುಭವಿಸಿದ ಪರಿತಾಪಗಳ ಪಟ್ಟಿ ಇಂತಿದೆ -

Losing interest in things

Being unable to enjoy things

Finding it hard to make even simple decisions

Feeling extremely tired

Feeling restless and agitated

Losing self confidence

Feeling useless, inadequate and hopeless

Feeling more irritable than usual

Thinking of suicide

Losing weight/appetite

Difficulty in getting to sleep

Waking up earlier than usual

Constipation

Going off sex

ಕಡೆಯ ಮಾತು : ನೀವು ತುಂಬಾ ಈಜಿಯಾಗಿ ಅರ್ಥವಾಗುವ ಕನ್ನಡದಲ್ಲಿ ಬರೆಯಿರಿ. ಹೆಂಗಸರಿಗೆ ಮಾತ್ರ ವಿಭಾಗದ ಬಗ್ಗೆ ನನಗೆ love-hate relationship ಉಂಟಾಗಿದೆ. ಡ್ರೆಸ್ಸು ಮಾಡಿಕೊಳ್ಳುವುದು ಹೇಗೆ, ಪ್ರೆಸೆಂಟಬಿಲಿಟಿ ಮುಂತಾದವುಗಳನ್ನೆಲ್ಲ ಹೊರತುಪಡಿಸಿ ಹೆಂಗಸರು ಕುಲಕ್ಕೆ ಕಂಟಕ ಹೇಗಾಗುತ್ತಾರೆ, ಆಗಬಾರದು ಎನ್ನುವುದರ ಬಗ್ಗೆ ಬರೆಯಿರಿ. ಇದು ಒಬ್ಬ ನಿರಪರಾಧಿ ಗಂಡಿನ ಜೀವನ್ಮರಣದ ಪ್ರಶ್ನೆ. ಎಲ್ಲರಿಗೂ ಒಳ್ಳೆಯದಾಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X