Get Updates
Get notified of breaking news, exclusive insights, and must-see stories!

ಮಕ್ಕಳ ದಿನದಂದು ಮಗುವಿನ ಮನದಿಂದ...


ಯಾರಿವನು ಸೃಜನ್‌? ಇಲ್ಲಿಗ್ಯಾಕೆ ಬಂದ? ಏನೀ ಪೋರನ ವಿಚಾರ ಮತ್ತು ಸಮಾಚಾರ ಎನ್ನುವಿರೋ? ಈತ ನಮ್ಮ ಕುಮಾರಕಂಠೀರವ! ಓದಿ, ‘ಚಿಲ್ಡ್ರನ್ಸ್‌ ಡೇ’ ಸ್ಪೆಷಲ್‌ ಎಪಿಸೋಡ್‌ ಟಿಪಿಕಲ್‌ ವಿಚಿತ್ರಾನ್ನ ಇಸ್ಟೈಲ್‌ನಲ್ಲಿ.

  • ಶ್ರೀವತ್ಸ ಜೋಶಿ
‘‘ಇವತ್ತು ನವೆಂಬರ್‌ ಹದಿನಾಲ್ಕು. ಭಾರತದಲ್ಲಿ ‘ಮಕ್ಕಳ ದಿನಾಚರಣೆ’. ಪ್ರಪಂಚದ ಬೇರೆಬೇರೆ ದೇಶಗಳಲ್ಲಿ ವರ್ಷದ ಬೇರೆಬೇರೆ ದಿನಗಳು - ಜಪಾನ್‌ನಲ್ಲಿ ಮೇ 5, ಬ್ರೆಜಿ‚ಲ್‌ನಲ್ಲಿ ಅಕ್ಟೋಬರ್‌ 12, ಹಾಂಗ್‌ಕಾಂಗ್‌ನಲ್ಲಿ ಏಪ್ರಿಲ್‌ 4, ಸಿಂಗಾಪುರ್‌ದಲ್ಲಿ ಅಕ್ಟೋಬರ್‌ 1 - ಹೀಗೆ ಮಕ್ಕಳದಿನವಾಗಿ ಆಚರಿಸಲ್ಪಡುತ್ತವೆ. ಅಷ್ಟೇ ಅಲ್ಲದೆ ‘ಯುನಿವರ್ಸಲ್‌ ಚಿಲ್ಡ್ರನ್ಸ್‌ ಡೇ’ (ನವೆಂಬರ್‌ 20) ಅಂತ ಇದೆ, ಹಾಗೆಯೇ ‘ಇಂಟರ್‌ನ್ಯಾಶನಲ್‌ ಚಿಲ್ಡ್ರನ್ಸ್‌ ಡೇ’ (ಜೂನ್‌ 1) ಸಹ ಇದೆ. ಆಯಾ ತಾರೀಕುಗಳ ವಿಶೇಷತೆಗೆ ಒಂದೊಂದು ಹಿನ್ನೆಲೆ - ನಮ್ಮಲ್ಲಿ ಪ್ರಥಮಪ್ರಧಾನಿ ಜವಾಹರ್‌ಲಾಲ್‌ ನೆಹರು ಜನ್ಮದಿನವೇ ಮಕ್ಕಳ ದಿನವಾಗಿ ಆಚರಣೆಯಾಗುವಂತೆ - ಇರುತ್ತದೆ, ಇತಿಹಾಸವೂ ಇರುತ್ತದೆ. ಆಚರಣೆಯಲ್ಲಿ ವೈವಿಧ್ಯವೂ ಇರುತ್ತದೆ...’’

ಈರೀತಿ ಮಕ್ಕಳದಿನಾಚರಣೆ ಬಗ್ಗೆ ಸಾಮಾನ್ಯಜ್ಞಾನದ ಒಣಮಾಹಿತಿಯನ್ನು ಪೋಣಿಸಿ ಇದು ‘ಚಿಲ್ಡ್ರನ್ಸ್‌ ಡೇ ಸ್ಪೆಷಲ್‌’ ಪ್ರಬಂಧ ಎನ್ನಬಹುದಿತ್ತು. ಆದರೆ ಮ್ಯಾಗಿ ಹಾಟ್‌ ಏಂಡ್‌ ಸ್ವೀಟ್‌ ಟೊಮಾಟೊ ಚಿಲ್ಲಿ ಸಾಸ್‌ನಂತೆ Its different! ಎಂದು ಅನ್ನಿಸಿಕೊಳ್ಳಬೇಕಾದರೆ ಮಕ್ಕಳದಿನ ವಿಶೇಷ ವಿಚಿತ್ರಾನ್ನ ಸಹ ಜರ್ರಾ ಹಟ್‌ಕೆ ಇಟ್ಸ್‌ ಡಿಫ‚ರೆಂಟ್‌ ಆಗಿರಲೇಬೇಕು!

ಹೇಗೆಂದರೆ, ಒಂದು ಮಗುವಿನ ಮುಗ್ಧಮನಸ್ಸಿನ ನಿಸ್ಪೃಹಭಾವದ ವಿಚಾರಲಹರಿಗಳನ್ನು ಅಳವಡಿಸಿ ಹದವಾಗಿ ಹುರಿದು ತಯಾರಿಸಿದ ಇವತ್ತಿನ ಸಂಚಿಕೆಯಂತೆ. ಈ ಪ್ರಯೋಗಕ್ಕೆ ‘ರೂಪದರ್ಶಿ’ ಅಲ್ಲಲ್ಲ ‘ಮನದರ್ಶಿ’ ಮಗು ಬೇರಾರೂ ಅಲ್ಲ, ನನಗೆ ಅತಿಹತ್ತಿರವಾಗಿ ಗೊತ್ತಿರುವ, ಅತಿ ಆಪ್ತ ಆತ್ಮೀಯವಾಗಿರುವ ನಮ್ಮದೇ ಮಗು. ಬೇಕಿದ್ದರೆ ಇದನ್ನೊಂದು ಸೃಜನಶೀಲ ಪ್ರಯೋಗವೆನ್ನಿ - ಇವತ್ತಿನ ಚಿಲ್ಡ್ರನ್ಸ್‌ ಡೇ ಸ್ಪೆಷಲ್‌ ಎಪಿಸೋಡ್‌ ನಮ್ಮ ಮಗ ‘ಸೃಜನ್‌’ನ ವಿಚಾರಲಹರಿ, ಟಿಪಿಕಲ್‌ ವಿಚಿತ್ರಾನ್ನ ಇಸ್ಟೈಲ್‌ನಲ್ಲಿ.

*

If you think that I was born in US, you are wrong! I was born in India‘‘ಅಂಕಲ್‌, ಆಂಟಿ, ಅಜ್ಜಿ, ತಾತ... ಎಲ್ಲರಿಗೂ ನಮಸ್ತೆ. ವಿಚಿತ್ರಾನ್ನ ಓದ್ತಾ ಇರೋ ನೀವೆಲ್ಲರೂ ನನಗಿಂತ ತುಂಬಾ ದೊಡ್ಡವರಲ್ವಾ, ಅದ್ಕೇ ಹಾಗೆ ಎಡ್ರೆಸ್‌ ಮಾಡ್ದೆ. ಹೌ ಆರ್‌ ಯೂ? ಫ‚ೈನ್‌, ನೀನ್‌ ಹೇಗಿದ್ದೀ ಮರೀ ಅಂದ್ರಾ? ಐ ಆ್ಯಮ್‌ ಡುಯಿಂಗ್‌ ಗುಡ್‌!

ನಾನೀಗ ಅಮೆರಿಕದಲ್ಲಿರೋದ್ರಿಂದ, ನೀವೆಲ್ಲ ಈತ ಇಲ್ಲೇ ಹುಟ್ಟಿಬೆಳೆದವನಿರಬಹುದು ಅಂದ್ಕೊಂಡಿರ್ಬಹುದು ಅಲ್ವಾ? ಅಂಥ ಮಕ್ಕಳಿಗೆ ಎಬಿಸಿಡಿ (american born confused desi...) ಅಂತ ನೀವುಗಳು ತಮಾಷೆ ಮಾಡ್ತೀರಂತೆ? ಸದ್ಯ ಅದರಿಂದ ನಾನು ಬಚಾವ್‌. ಯಾಕಂದ್ರೆ ನಾನು ಹುಟ್ಟಿದ್ದು ಇಂಡಿಯಾದಲ್ಲೇ. ಬೆಂಗಳೂರಲ್ಲಿ ನನ್ನ ಅಜ್ಜನ ಮನೆಯಿರೋ ಪದ್ಮನಾಭನಗರದಲ್ಲಿ ಡಿ.ಜಿ.ಹಾಸ್ಪಿಟಲ್‌ ಇದೆಯಲ್ಲಾ ಅಲ್ಲಿ. ಮತ್ತೆ, ನಾನು ಹುಟ್ಟಿದ ತಾರೀಕು 2000 ಇಸವಿಯ ಜನವರಿ 25 ಯಾವ ವಾರ ಗೊತ್ತಾ? ಸರ್ಪೈಸಿಂಗ್ಲಿ ಮತ್ತು ಇಂಟೆರೆಸ್ಟಿಂಗ್ಲಿ ‘ಮಂಗಳವಾರ’!

ನಾನು ಡಿಜಿ ಹಾಸ್ಪಿಟಲ್‌ನಲ್ಲಿ ಹುಟ್ಟಿದ್ದು ಎಂದೆನಲ್ಲಾ, ಒಂದು ಮಜಾ ಇದೆ ಅದ್ರಲ್ಲಿ. ಚಿಕ್ಕಮಗುವಾಗಿದ್ದಾಗ ಅಂದರೆ ಸುಮಾರು 1 ವರ್ಷ ತುಂಬುವವರೆಗೆ ನಾನು ತುಂಬಾ ನಿದ್ದೆ ಮಾಡ್ತಿದ್ದೆ. ಮತ್ತಿನ್ನೇನು, ದೇವೇಗೌಡ ಆಸ್ಪತ್ರೆಯಲ್ಲಿ ಹುಟ್ಟಿದ ಮಗು ಜಾಸ್ತಿ ನಿದ್ದೆ ಮಾಡೋದು ಏನೂ ಆಶ್ಚರ್ಯದ ಮಾತಲ್ಲ, ಅಲ್ವೇ? ಆದರೆ ಈಗ ಅಷ್ಟು ನಿದ್ದೆ ಮಾಡೋದಿಲ್ಲ ಬಿಡಿ. ರಾತ್ರೆ ಬೇಗ ಮಲಗಲಿಕ್ಕೆ ಒಪ್ಪೋದಿಲ್ಲ; ಬೆಳಿಗ್ಗೆ ಎಷ್ಟಕ್ಕೆ ಏಳೋದು (ಸ್ಕೂಲ್‌ ಇಲ್ಲದ ದಿನಗಳಲ್ಲಿ) ಅಂತಾ ಮಾತ್ರ ಕೇಳಬೇಡಿ!

ನಾನು ತುಂಬ ತುಂಟ/ಚೂಟಿ/ಪೋಕ್ರಿ ಹುಡುಗ ಅಂತ ನೀವಂದುಕೊಂಡಿದ್ರೆ ಅದು ತಪ್ಪು. ಹಾಗೆಂದು ತೀರಾ ಸಾಧುಸ್ವಭಾವದವನು ಅಂತನೂ ಎಣಿಸ್ಬೇಡಿ. ಎಲ್ಲಿ ತುಂಟಾಟ ಓಕೆನೊ ಅಲ್ಲಿ ತುಂಟ. ಎಲ್ಲಿ ತುಟಿಪಿಟಿಕ್ಕೆನ್ನದೆ ಇರಬೇಕೊ ಅಲ್ಲಿ ಶ್ರೀಮದ್ಗಾಂಭೀರ್ಯ. ನಟರಾಜ್‌ ಅಂಕಲ್‌ ನನ್ನನ್ನು ತುಂಟ ಅಂತಲೇ ಕರೀತಾರೆ. ಒಂದೇ ಸ್ಟ್ರೆಚ್‌ನಲ್ಲಿ ವನ್‌ ಟು ಫ‚ೈವ್‌ಥೌಸಂಡ್‌ ಕೌಂಟ್‌ ಒಪ್ಪಿಸುತ್ತೇನೆ ಎಂದು ಅವರಬಳಿ ಚಾಲೆಂಜ್‌ ಹಾಕಿದ್ದೇನೆ. ಥೌಸಂಡ್‌ ಬಿಡಿ, ಹಂಡ್ರೆಡ್‌ವರೆಗೆ ಮುಟ್ಟುವಷ್ಟು ವ್ಯವಧಾನ ನನ್ನಲ್ಲಿರಲಿಕ್ಕಿಲ್ಲ ಎಂದು ಅವರ ಚಾಲೆಂಜು. ಮೊನ್ನೆ ಕನ್ನಡಸಿನೆಮಾಪ್ರದರ್ಶನದ ದಿನವೂ ಸಿಕ್ಕಿದ್ರು, ಕೌಂಟ್‌ ಎಷ್ಟಾಯಿತು ಎಂದು ಕೇಳಿದ್ರು!

ನನ್ನ ಮಮ್ಮಿ-ಡ್ಯಾಡಿಯ ಫ‚ೆ್ರಂಡ್ಸ್‌ ಸರ್ಕಲ್‌ನಿಂದಾಗಿ ನನಗೂ ಫ‚ೆ್ರಂಡ್ಸ್‌ ಇದ್ದಾರೆ. ಕಾವೇರಿ ಸಂಘದ ಫ‚ಂಕ್ಷನ್ಸ್‌ ಆದಾಗೆಲ್ಲ ಅಲ್ಲಿ ರೋಹಿತ್‌ ಸಿಗ್ತಾನೆ ಅಂತ ಖುಶಿಯಲ್ಲಿರ್ತೇನೆ (ರೋಹಿತ್‌ನ ಮಮ್ಮಿ ಡ್ಯಾಡಿ ಇಬ್ರೂ ಇದೇ ದಟ್ಸ್‌ಕನ್ನಡದಲ್ಲಿ ಒಳ್ಳೊಳ್ಳೆ ಪೊಯಮ್ಸ್‌ ಬರೀತಾರೆ). ರೋಹಿತ್‌ ಮತ್ತು ನಾನು ಸೇರಿ ಸಕ್ಕತ್‌ ಮಜಾ ಮಾಡ್ತೇವೆ. ಮೂರು ವರ್ಷಗಳ ಕೆಳಗೆ ಸಮ್ಮರ್‌ಟೈಮಲ್ಲಿ ಆರೇಳು ಕನ್ನಡಿಗಕುಟುಂಬಗಳು ಇಲ್ಲಿನ ಶೆನಾಂಡೋವ್ಯಾಲಿಯಲ್ಲಿ ಕ್ಯಾಂಪಿಂಗ್‌ ಹೋಗಿದ್ದಾಗ ಅಲ್ಲಿ ನಾನು ಮತ್ತು ರೋಹಿತ್‌ well behaved kids ಎಂದು ಅಪ್ರೀಸಿಯೇಶನ್‌ ಪಡೆದಿದ್ದೆವು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+