• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಣ್ಣು ಕೊಟ್ಟು ಮಾತನಾಡುವುದು ಅಷ್ಟು ಸುಲಭವಲ್ಲ

By Staff
|

Ravi Belagere talks to Teenage Girlsಹದಿಹರೆಯದ ಮಕ್ಕಳೊಂದಿಗೆ ಮಾತಾಡುವುದಕ್ಕೆ ಬೇಕಾಗಿರುವುದು ಎರಡು. ಒಂದು ತಾಳ್ಮೆ , ಇನ್ನೊಂದು ಆ ಕ್ಷಣಕ್ಕೆ ನಿಮಗೆ ಒಲಿಯುವ ಜಾಣ್ಮೆ.

ರವಿಬೆಳಗೆರೆ

ಆ ಹುಡುಗಿಯ ಹೆಸರು ಸಂಜನಾ ಅಂತ ಇಟ್ಟುಕೊಳ್ಳಿ. ನನ್ನ ಕೊನೇ ಮಗನ ವಯಸ್ಸಿನವಳು. ಕಳೆದ ಐದು ವರ್ಷಗಳಿಂದ ನನ್ನನ್ನು ವಿಪರೀತ ಹಚ್ಚಿಕೊಂಡಿರುವವಳು. ಅವಳ ತಂಡೆ ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಾಗಿನಿಮ್ದ ಈ ಹುಡುಗಿ ನನ್ನನ್ನು ಮತ್ತೂ ಗಾಢವಾಗಿ ಹಚ್ಚಿಕೊಂಡಲು. ಅವಳಿರುವುದು ಮಂಗಳೂರಿನ ಹತ್ತಿರದ ಊರೊಂದರಲ್ಲಿ. ಅದೊಂದು ಇಳಿ ಸಂಜೆ ಬಂದವಳೆ.

" ಅಂಕಲ್ ಪ್ಲೀಸ್ ನಮ್ಮ ನೇಗೊಂದು ಫೋನ್ ಮಾಡಿ ಅಮ್ಮಂಗೆ ನಾನಿಲ್ಲಿಗೆ ಬಂದಿದೀನಿ ಅಂತ ಹೇಳಿ, ಇಲ್ದಿದ್ರೆ ಸುಮ್ನೆ ಗಾಬರಿಯಾಗ್ತಾರೆ...." ಅಂದಳು. ಮನೆಯಲ್ಲಿ ಹೇಳದ್ದೆ ಹೀಗೆಲ್ಲ ಬರಬಾರದು ಅಂತ ಗದರಿಸಿ ನನ್ನ ಮಗಳ ಜೊತೆಇರುವಂತೆ ಹೇಳಿ ಕಳಿಸಿದೆ.

"ಅವಳು ಯಾಕೊ confusion ನಲ್ಲಿದ್ದಾಳೆ. ನೀವು ಕೂಡಿಸಿ ಮಾತನಾಡಿ ಕಳಿಸಿ. ನಿಮ್ಮಲ್ಲಿಗೇ ಬಂದಿರ್ತಾಳೆ ಅಂತ ಅಂದುಕೊಂಡಿದ್ವಿ" ಅಂದರು ಅವರ ತಾಯಿ. ಮರುದಿನ ಕರೆದು ಮಾತನಾಡಿಸಿ ಕಳಿಸಿದೆ. ದೊಡ್ಡ ಸಮಸ್ಯೆಯೇನಲ್ಲ. ಮನೆಯಲ್ಲಿ ಒಂದೆರೆಡು ಪುಟ್ಟ ಸುಳ್ಳು ಹೇಳಿದ್ದಾಳೆ. ಇತ್ತೀಚೆಗೆ ತಾನು ಮಾಡಿಕೊಂಡ ಸ್ನೇಹಗಳು, ಬೆಳೆದಿರುವ ಸಲುಗೆ ತನಗೇ ಕಿರಿಕಿರಿಯುಂಟು ಮಾಡಿವೆ. ಅಗತ್ಯಕ್ಕಿಂತ ಹೆಚ್ಚು straight forward ಸ್ವಭಾವದ ಹುಡುಗಿ ಅವಳು. ಅಂಥವಳಿಗೆ, ನಾನು ದಾರಿ ತಪ್ತಾ ಇದ್ದೀನಿ ಅನ್ನಿಸಿಬಿಟ್ಟಿದೆ. ಮನೆಯಲ್ಲಿ ಹೇಳಿಕೊಳ್ಳುವುದಕ್ಕೆ ಹಿಂಜರಿಕೆ. ಬಹುಶಃ ತಂದೆ ಬದುಕಿದ್ದಿದ್ದರೆ ಅವರಿಗೆ ಹೇಳಿಕೊಳ್ಳುತ್ತಿದ್ದಳೇನೋ? ಅವರ ಗೈರು ಹಾಜರಿಯಲ್ಲಿ ನನ್ನ ನೆನಪಾಗಿದೆ.

ಇಂಥ ಮಕ್ಕಳ ಮಮತೆ, ಕರುಣೆ, ಕಾಳಜಿ ಎಲ್ಲ ಉಂಟಾಗುತ್ತವೆ. ಕೆಲ ಬಾರಿ ಅವರ ಚಿಕ್ಕಪುಟ್ಟ ಆರ್ಥಿಕ ಸಮಸ್ಯೆಗಳನ್ನೂ ಪರಿಹರಿಸುತ್ತೇನೆ. ಆದರೆ ಮಾನಸಿಕವಾಗಿ ಅವರ ಮೇಲೆ ಅತಿಯಾದ hold ಸಾಧಿಸುವುದಕ್ಕೆ ಪ್ರಯತ್ನಿಸುವುದಿಲ್ಲ. ಅವರು ಹೇಳಿದುದನ್ನೆಲ್ಲ 'ಹೌದಾ?' ಎಂಬಂತೆ ಕೇಳಿಸಿಕೊಂಡು, "ನೀನು ಮಾಡ್ತಿರೋದು ಸರಿಯಲ್ಲ ಅನ್ನಿಸಿದಾಗಲೆಲ್ಲ ಅದನ್ನು ಡೈರಿಯಲ್ಲಿ ಬರೆದಿಡು. ಅಥವಾ ನನಗೆ ಪತ್ರ ಬರೆದು ಹೇಳು. ಸಾಧ್ಯವಾದರೆ ಹೀಗೆ ಎದುರಿಗೆ ಬಂದು ಕುಳಿತು ಹೇಳು" ಅಂತ ಸಲಹೆ ಕೋಡುತ್ತೇನೆ. ಹುಡುಗ -ಹುಡುಗಿಯರು ಎಷ್ಟೂ ಪ್ರಾಮಾಣಿಕರಾಗಿರುತ್ತಾರೆಂದರೆ, ನೇರವಾಗಿ ಬಂಡು ತಾವು ಮಾಡಿದ ತಪ್ಪುಗಳನ್ನು ಹೇಳಿಕೊಳ್ಳುತ್ತಾರೆ. ಅವರ honesty ನನಗೆ ಇಷ್ಟವಾಗುತ್ತದೆ. ಒಪ್ಪಿಕೊಂಡ, ಪಶ್ಚಾತ್ತಾಪ ಪಟ್ಟ ತಪ್ಪನ್ನೇ ಮತ್ತೆ ಮಾಡುತ್ತಾ ಅಂತ ಸೂಕ್ಷ್ಮವಾಗಿ ವಾಚ್ ಮಾಡುತ್ತೇನೆ. ಮತ್ತದೇ ತಪ್ಪು ಮಾಡಲಿದ್ದಾರೆ ಅನ್ನಿಸಿದಾಗ ಗದರಿಸಿಕೊಂಡೂ ಗದರಿಸಿಕೊಳ್ಳುತ್ತೇನೆ.

ಆ ಹಂತದಲ್ಲೇ ಸಂಜನಾ ಕಣ್ಣು ತಪ್ಪಿಸಲಾರಂಭಿಸಿದ್ದು, ಮೊದಲ ಬಾರಿ ಮನೆಯಲ್ಲಿ ಹೇಳದೆ ಕೇಳದೆ ಬಂದವಳು, ಆಮೇಲೆ ಎರಡು ಸಲ ಮನೆಯಲ್ಲಿ ಹೇಳಿಯೇ ಬಂದಿದ್ದಳು. ಅವಳ ಮಾತು ಮುಕ್ತವಾಗಿದ್ದವು. ಕಾಲೇಜಿಗೆ ಬಂದ ಮೇಲೆ ಹೊಸ ಗೆಳತಿಯರು ಸಿಕ್ಕಿದ್ದಾರೆ. ಎರಡು ಸಲ ಸಿಗರೇಟು ಸೇದಿದೆ. Iam sorry. ಅಮೇಲೆ ಹುಡುಗಿಯರದೇ ಒಂದು ಪಾರ್ಟಿಯಿತ್ತು. ವೈನ್ ಕುಡಿದೆ. Iam Sorry.....! ಎಲ್ಲ ಅವಳೇ ಹೇಳುತ್ತಾ ಹೋದಲು. Fine ಅಂದೆ. ನಾವು ಮಾಡಿದ್ದು ಉಳಿದವರಿಗಿಂತ ಮೊದಲು ನಮಗೇ ತಪ್ಪು ಅನ್ನಿಸಬೇಕು. ಯಾರನ್ನು ನಾವು ತುಂಬ ಪ್ರೀತಿಸುತ್ತೇವೋ ಅವರ ಮುಂದೆಯೇ ತಪ್ಪನ್ನು ಒಪ್ಪಿಕೊಂಡು, ಅದನ್ನು ಮತ್ತೆ ಮಾಡುವುದಿಲ್ಲ ಅಂತ promise ಮಾಡಿ ನಿಚ್ಚಳವಾಗಿ ಬಿಡಬೇಕು. ಒಂದು ಹಂತದ ತನಕ ಅದೆಲ್ಲವನ್ನೂ ಸಂಜನಾ ಮಾಡಿದಳು.

ಅವಳು ಕಣ್ಣು ತಪ್ಪಿಸಿತೊಡಗಿದ್ದೇ ಅವಳಿಗೆ ಬಾಯ್ ಫ್ರೆಂಡ್ ಸಿಕ್ಕ ಮೇಲೆ. ಸಾಮಾನ್ಯವಾಗಿ ನಾವು ಕಣ್ಣು ತಪ್ಪಿಸುವುದು ನಮಗೆ ನಾವು immoral ಅನ್ನಿಸಿದಗ! ಯಾರದಾದರೂ ಹಣ ಉಪಯೋಗಿಸಿಕೊಂಡು, ಅದನ್ನು ಹಿಂತಿರಿಗಿಸಲಾಗದಾಗ ನನಗೊಂದು ಯಾತನೆಯಾಗುತ್ತದೆ; ಕೇಳಬೇಡಿ. ಎಲ್ಲಿಂದಲಾದರೂ ಅವರ ಹಣ ಒಟ್ಟು ಮಾಡಿ ವಾಪಾಸು ಕೊಟ್ಟು ಕೈ ಮುಗಿಯುವ ತನಕ ಅವರೆದುರಿಗೆ ಓಡಾಡಲಿಕ್ಕೂ ಆಗುವುದಿಲ್ಲ. ದುಡ್ಡೊಂದೇ ಅಲ್ಲ; ಮತ್ತು ಕೆಲವು ಸಂದರ್ಭಗಳಲ್ಲಿ ನಮಗೆ ನಾವು immoral ಅನ್ನಿಸಿಬಿಡುತ್ತೇವೆ.

"ನಂಗೊತ್ತು ಅವನು ನನ್ನನ್ನ ಪ್ರಾಮಾಣಿಕವಾಗಿ ಪ್ರೀತಿಸೋದಿಲ್ಲ. ಅವನಿಗೆ ಬೇಕಾಗಿರೋದು ಬರೀ ಸೆಕ್ಸು ಅಂತ. . . ಈ ಸಲ ಖಂಡಿತವಾಗ್ಯೂ ಅವನ ಮಾತಿಗೆ ಬಲಿ ಬೀಳೋದಿಲ್ಲ ಅಂಕಲ್ !" ಅಂತ ಹೇಳಿಹೋದ ಹುಡುಗಿಯೇ ಎರಡನೆಯ ಬಾರಿ ಅವನಿಂದ ಪ್ರೆಗ್ನೆಂಟ್ ಆಗಿ ಅಳುತ್ತ ಹಿಂತಿರುಗಿದ್ದಳು.

" ಅಲ್ಲಿಗೆ ನಿಂಗೂ ಬೇಕಾಗಿದ್ದುದು ಬರೀ ಸೆಕ್ಸು ಅಂತಾಯ್ತಲ್ಲ?" ಎಂದು ನಾನು ನೇರವಾಗಿ ಕೇಳಬಹುದಿತ್ತು. ಆದರೆ ಕೇಳಲಿಲ್ಲ. ಅಷ್ಟರಮಟ್ಟಿಗೆ guilt feel ಆಗಲು ಅವರಿಗೇ ಬಿಟ್ಟು ಬಿಡುತ್ತೇನೆ. ಆದರೆ ಸಂಜನಾ ಥರದವರು ಈ (ಪ್ರೆಗ್ನೆಂಟ್ ಆದ) ಹುಡುಗಿಗಿಂತ ಕೆಳದರ್ಜೆಯವರು. ಕಣ್ಣು ತಪ್ಪಿಸಿವವರು ಅವರೇ. ಮೊದಮೊದಲು ತಮ್ಮ ತಪ್ಪನ್ನು ಒಪ್ಪಿಕೊಂಡು ಹೇಳಿಕೊಳ್ಳುತ್ತಾರೆ. 'ಇದು ಸರಿಯಲ್ಲ ಮರೀ' ಅಂತ ವಿವರಿಸಿ ಹೇಳಿದಾಗ convince ಆಗುತ್ತಾರೆ. ಕೆಲವು ದಿನಗಳ ಮಟ್ಟಿಗೆ ಅವರಲ್ಲೊಂದು ರಿಗ್ರೆಟ್ ಇರುತ್ತದೆ. ಒಂದು ನಿಚ್ಚಳ ಪಶ್ಚಾತ್ತಾಪ.

ಈ ಪಶ್ಚಾತ್ತಾಪ ಕೂಡ ಅಳಿಲಿನಂತಹುದು. ನೀವು ಗಮನಿಸಿ ನೋಡಿ. ನಿಮ್ಮ ಮನೆಯ ಬಳಿ ಅಳಿಲೊಂದು ಎಲ್ಲೆಲ್ಲಿಂದಲೋ ದರ, ಹುಲ್ಲುಕಡ್ಡಿ, ಬಟ್ಟೆಯ ಚುಂಗು ಆಯ್ದು ತಂಡು ಗೂಡು ಕಟ್ಟುತ್ತಿದೆ ಅಂತಿಟ್ಟುಕೊಳ್ಳಿ. ಅದರ ಗೂಡಿನ ಬಳಿ ಅದಕ್ಕೆ ನಿಲುಕುವಂತೆ ನಾಲ್ಕು ದಿನ ಸತತವಾಗಿ ಹಣ್ಣೊ ಹಂಪಲೋ ಇಡಿ. ಅಳಿಲು ಕ್ರಮೇಣ ನಿರ್ಭಯವಾಗಿ ನಿಮ್ಮಲ್ಲಿಗೆ ಬಂದು ಹೋಗತೊಡಗುತ್ತದೆ. ಆದರೆ ಒಂದು ಸಲ ಅದರ ಗೂಡು ಕಿತ್ತು ಹಾಕಿ ಬಿಡಿ? ಅಳಿಲು ಮತ್ತೆ ಅಲ್ಲಿ ಗೂಡು ಕಟ್ಟುವುದಿಲ್ಲ.

ಒಂದು ಸಲ ವೈನ್ ಕುಡಿದಿದ್ದಕ್ಕಾಗಿ ದಟ್ಟವಾಗಿ ಪಶ್ಚ್ಚಾತ್ತಾಪಪಟ್ಟವರು ಎರಡನೆಯ ಸಲ ವೈನ್ ಮುಟ್ಟುವ ತನಕ ತೀವ್ರ ತೆರನಾದ ಪಶ್ಚಾತ್ತಾಪದಲ್ಲಿರುತ್ತಾನೆ. ಮೊದಲ ಸಲ ಕುಡಿದಿದ್ದೆ ಎಂಬ ನೆನಪೇ ಅವರನ್ನು ಬೇಸರಕ್ಕೆ, ಕ್ಷೋಭೆಗೆ ಈಡು ಮಾಡುತ್ತಿರುತ್ತದೆ. ಆದರೆ ಎರಡನೇ ಸಲ ಮತ್ತೆ ಕುಡಿದು ಬಿಟ್ಟರೆಂದಿಟ್ಟುಕೊಳ್ಳಿ; ಕಣ್ಮರೆಯಾಗುವ ಅಳಿಲಿನಂತೆ ಪಶ್ಚಾತ್ತಾಪ ಮಾಯವಾಗಿ ಬಿಡುತ್ತದೆ. ಆಮೇಲೆ ಅವರು ಕಣ್ಣು ತಪ್ಪಿಸುವ ಅನಿವಾರ್ಯತೆಗೆ, ನಿರ್ಲಜ್ಜೆಗೆ ಬೀಳುತ್ತಾರೆಯೇ ಹೊರತು ಹೀಗೆ ಕುಡಿಯೋದನ್ನ, ಸಿಗರೇಟು ಸೇದೋದನ್ನ, ಬಾಯ್ ಫ್ರೆಂಡ್ ಜೊತೆ ಬೆರೆಯೋದನ್ನ ತಪ್ಪಿಸುವುದು ಹೇಗೆ?" ಅಂತ ಯೋಚಿಸುವುದೂ ಇಲ್ಲ. ಅಷ್ಟು ಆತ್ಮೀಯನಾದ ನನ್ನಂಥವನ ಎದಿರು ಹೇಳಿಕೊಳ್ಳುವುದೂ ಇಲ್ಲ.

ಯಾವಾಗ ನಾವು moral fear ನಿಂದ ಮುಕ್ತರಾಗಿ, ನಿರ್ಲಜ್ಜರಾಗಿ ಬಿಡುತ್ತೇವೋ ,ಆಗ ದುರಭ್ಯಾಸಗಳು ಅಳತೆ ಮೀರಿ ಬಲಿತು ಬಿಡುತ್ತವೆ. ಕುಡಿತ ಚೆನ್ನಾಗಿ ಅಭ್ಯಾಸವಾದ ಮೇಲೆ ಎಂಥ ಆತ್ಮೀಯರಿಗೂ ಕಣ್ಣು ತಪ್ಪಿಸಬೇಕು ಅನ್ನಿಸುವುದಿಲ್ಲ. ಮುಖ್ಯವಾಗಿ ಒಳ ಮನಸ್ಸೇ sorry ಹೇಳುವುದನ್ನು ನಿಲ್ಲಿಸಿಬಿಡುತ್ತದೆ.

'ಇವತ್ತಿನ ಈ ಕ್ಷಣದಿಂದ ಸಿಗರೇಟು ಬಿಡ್ತೀನಿ' ಅಂತ ಹೇಳಿ ಹೋದ ಎಷ್ಟೋ ಹುಡುಗರು ಮತ್ತೆ ನನಗೆ ಸಿಕ್ಕಿಯೇ ಇಲ್ಲ .ಬಾಯ್ ಫ್ರೆಂಡ್ ನಿಂದ ದೂರವಾಗುತ್ತೇವೆಂದು ಹೇಳಿಹೋದ ಹುಡುಗಿಯರು ಬೇರೊಬ್ಬ ಬಾಯ್ ಫ್ರೆಂಡ್ ಕಚ್ಚಿಕೊಂಡ ವರ್ತಮಾನಗಳು ಬರುತ್ತಿರುತ್ತವೆ.

ಕಣ್ಣು ಕೊಟ್ಟು ಮಾತನಾಡುವುದು ಅಷ್ಟು ಸುಲಭದ ಸಂಗತಿಯಲ್ಲ, ಅಲ್ವೇ?

(ಸ್ನೇಹ ಸೇತು: ಹಾಯ್ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more