ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9/11 ದಾಳಿಯ ನೆನಪಿಗಾಗಿ ಅಮೆರಿಕದ ಯುದ್ಧ ನೌಕೆ

By ಎಮ್ ಎಸ್ ಎನ್
|
Google Oneindia Kannada News

2001ರ ಸೆಪ್ಟೆಂಬರ್ 11ರಂದು ಇಡೀ ಜಗತ್ತೇ ಗರಬಡಿದವರಂತೆ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕದತ್ತ ಕಣ್ಣು ಕೀಳದೆ ನೋಡುತ್ತಿತ್ತು. ತಾಲಿಬಾನ್ ಭಯೋತ್ಪಾದಕರಿಂದ ಆಕ್ರಮಣಕ್ಕೊಳಗಾಗಿದ್ದ 1362 ಅಡಿಗಳೆತ್ತರದ 110 ಮಹಡಿಗಳಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಸಮವಾಗಿದ್ದವು. ಈಗ ಅಲ್ಲಿ ಕಟ್ಟಡದ ಅವಶೇಷವೂ ಉಳಿದಿಲ್ಲ. ಕಳೆದ ಏಳು ವರ್ಷಗಳಲ್ಲಿ ಸೆಪ್ಟೆಂಬರ್ 11ರಂದು ಆದಂತಹ ಅವಘಡವೂ ಸಂಭವಿಸಿಲ್ಲ. ವಿಶ್ವದ ಜನತೆಯೂ ಅದನ್ನು ಮರೆತಿರಬಹುದು. ಆದರೆ ಅಮೆರಿಕ ಮರೆತಿಲ್ಲ! ಅಮೆರಿಕಕ್ಕೆ ಮರೆಯಲು ಸಾಧ್ಯವೂ ಇಲ್ಲ.

"ಭಯೋತ್ಪಾದಕರು ನಮ್ಮನ್ನು ಮಣಿಸಿರಬಹುದು. ಆದರೆ, ಕಾಲ ಹೀಗೇ ಇರುವುದಿಲ್ಲ. ನಾವು ತಿರುಗೇಟು ನೀಡಿಯೇ ನೀಡುತ್ತೇವೆ" ಎಂಬ ಛಲದೊಂದಿಗೆ ಗ್ರೌಂಡ್ ಜೀರೋದಿಂದ ಸಂಗ್ರಹಿಸಿದ 24 ಟನ್ ಕಬ್ಬಿಣವನ್ನು ಸಂಗ್ರಹಿಸಿ ಅದರಿಂದಲೇ ಜಾಗತಿಕ ಭಯೋತ್ಪಾದನೆಯನ್ನು ಮಟ್ಟಹಾಕುವ ಉದ್ದೇಶದಿಂದ ಯುದ್ಧ ಹಡಗನ್ನು ಅಮೆರಿಕ ತಯಾರಿಸಿದೆ. ಯುದ್ಧ ನೌಕೆಯನ್ನು '9/11 ಸ್ಟೀಲ್ ವಾರ್ ಶಿಪ್' ಅಂತಲೇ ಅಮೆರಿಕ ನಾಮಕರಣ ಮಾಡಿದೆ.

ಆ 24 ಟನ್ ಕಬ್ಬಿಣವನ್ನು ಲಾಸ್ ಏಂಜಲೀಸ್ ನ ಅಮಿಟೆ ಎಂಬಲ್ಲಿ ಕರಗಿಸಿ ಯುದ್ಧ ಹಡಗಿನ ತಯಾರಿಕೆಯಲ್ಲಿ ಬಳಸಲಾಗಿದೆ. ಭಯೋತ್ಪಾದಕರ ದಾಳಿಯಲ್ಲಿ ಮಡಿದವರ ನೆನಪಿನ ಕುರುಹಾಗಿ ಯುದ್ಧ ನೌಕೆ ರಚಿಸಲಾಗಿದೆ. "ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟಡಗಳಿಂದ ಸಂಗ್ರಹಿಸಿದ ಕಬ್ಬಿಣ ಕುಲುಮೆಗೆ ಬಂದಾಗ ನನ್ನ ರೋಮಗಳೆಲ್ಲ ನಿಮಿರಿ ನಿಂತವೆಂದು" ಅಲ್ಲಿಯ ಮ್ಯಾನೇಜರ್ ಒಬ್ಬರು ಉದ್ಗರಿಸಿದ್ದಾರೆ. ಈ ಬೃಹತ್ ಹಡಗಿನಲ್ಲಿ 360 ನಾವಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂದ ಹಾಗೆ, ಈ ಯುದ್ಧ ನೌಕೆಯ ಧ್ಯೇಯ ವಾಕ್ಯವೇನೆಂದರೆ, "ಎಂದೂ ಮರೆಯಬೇಡ"!

ಪೂರಕ ಓದಿಗೆ
ಒಂಬತ್ತು ಹನ್ನೊಂದರ ಒಂದು ಸ್ಮರಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X