ಗಡ್ಡಧಾರಿ ಮಹಿಳೆಯರಿಂದ ಸಂಸ್ಕೃತಿ ನಾಶ ಇಲ್ಲ

Subscribe to Oneindia Kannada

ಮಂಗಳೂರು ಫೆ. 1:ಗಡ್ಡಧಾರಿ ಮಹಿಳೆಯರಿಂದ ಭಾರತೀಯ ಸಂಸ್ಕೃತಿಯ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅಲ್ಲಗೆಳೆದಿದ್ದಾರೆ.

ಮಂಗಳೂರಿನಲ್ಲಿ ಪೋಲಿಸ್ ಕಸ್ಟಡಿಯಿಂದ ಜಾಮೀನು ಪಡೆದು ಹೊರಬಂದ ನಂತರ ಮಜಾವಾಣಿ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಅವರು, ಗಡ್ಡವಿರುವ ಹೆಂಗಸರು ಪಬ್‌ಗಳಿಗೆ ಹೋಗಬಹುದಾದ ಸಾಧ್ಯತೆಯ ಕುರಿತು ನಮ್ಮ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ , "ಗಡ್ಡಧಾರಿ ಮಹಿಳೆಯರು ಪಬ್‌ಗಳಲ್ಲಿ ಕುಡಿದು, ಕುಣಿದು, ಕುಪ್ಪಳಿಸಿದರೆ ನಮಗೆ ಯಾವ ಅಭ್ಯಂತರವೂ ಇಲ್ಲ. ಅವರಿಂದ ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗುವ ಸಾಧ್ಯತೆ ಬಹಳ ಕಡಿಮೆ. ಆದರೆ, ಗಡ್ಡವಿರದ ತರುಣಿಯರ ವಿಷಯ ಸಂಪೂರ್ಣ ಬೇರೆ" ಎಂದರು.

ಇತ್ತೀಚೆಗೆ ಸೌದಿ ಅರೇಬಿಯಾ ಸಹ ಗಡ್ಡವಿರುವ ಹೆಂಗಸರಿಗೆ ಪುರುಷ ಸಮಾನ ಹಕ್ಕುಗಳನ್ನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
(ಮಜಾವಾಣಿ ವಾರ್ತೆ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...