ವಿಡಿಯೋ: ಮುಂಗಾರು ಮಳೆ ಸ್ಟೈಲಲ್ಲಿ ನೋಟುಗಳ ಬ್ಯಾನ್ ಕಾಮಿಡಿ

Posted By:
Subscribe to Oneindia Kannada

ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ತಡೆಯಲು ನೋಟುಗಳ ಬ್ಯಾನ್ ಮಾಡಿದ್ದಕ್ಕೆ ಬಾಯಿಗೆ ಬಂದಂತೆ ಕೆಲವರು ಬೈದರೆ, ಮತ್ತೆ ಕೆಲವರು ಇದನ್ನೇ ಹಾಸ್ಯ ಮಾಡಿದ್ದಾರೆ. ಆದರೆ, ಎಲ್ಲೂ ಅಪಹಾಸ್ಯ ಆಗದಂತೆ ನಮ್ಮ ನಾಟಿ ಫ್ಯಾಕ್ಟರಿ ತಂಡದವರು ಎಂದಿನಂತೆ ಕನ್ನಡ ಸಿನಿಮಾದ ಜನಪ್ರಿಯ ಡೈಲಾಗ್/ ಸನ್ನಿವೇಶಗಳನ್ನು ಬಳಸಿಕೊಂಡು ನೋಟುಗಳ ಬ್ಯಾನ್ ಬಗ್ಗೆ ಅಣಕು ವಿಡಿಯೋ ಮಾಡಿದ್ದಾರೆ.

ಮುಂಗಾರು ಮಳೆ ಚಿತ್ರದಲ್ಲಿ ಮಳೆಯಲ್ಲಿ ನೆನೆಯುತ್ತಾ ಕುಳಿತ ಗಣೇಶ್(ಪ್ರೀತಮ್) ಅವರ ಬಳಿ ಪೂಜಾ ಗಾಂಧಿ(ನಂದಿನಿ) ಬರುತ್ತಾರೆ. ಆಗ ಮಾತಿನ ಮಳೆ ಸುರಿಸುವ ಗಣೇಶ್ ಅವರು ನೋಟುಗಳ ಬ್ಯಾನ್ ಬೇನೆಯಲ್ಲಿ ಏನೇನು ಹೇಳುತ್ತಾರೆ ನೀವೇ ನೋಡಿ ಆನಂದಿಸಿ

Currency Note Exchange Spoof Golden Star Ganesh Mungaru Male Dialogue


ನೀವು 500 ರು ನೋಟಿಗೆ ಚೇಂಜ್ ಕೇಳೋಕೆ ಬಂದಿದ್ದೀರಿ ಎಂದು ಆರಂಭವಾಗುವ ಈ ಅಣಕು ವಿಡಿಯೋದಲ್ಲಿ 500 ರುಪಾಯಿ ನೋಟು ಹೊಂದಿರುವ ಗಣೇಶ್ ಗೆ ಎಟಿಎಂಗೆ ಹೋಗೋಣ ಬನ್ನಿ ಎಂದು ಪೂಜಾ ಕರೆಯುತ್ತಾರೆ.

ಈ ತಂಪು ಹೊತ್ತಲ್ಲಿ ಎಟಿಎಂ ಬಗ್ಗೆ ಯಾಕ್ರಿ ಮಾತಾಡ್ತೀರಾ? ಎಂದು ಗಣೇಶ್ ಪ್ರಶ್ನಿಸುತ್ತಾರೆ.

Currency Note Exchange Spoof Golden Star Ganesh Mungaru Male Dialogue

'ಎಟಿಎಂನಲ್ಲಿ ಕಾರ್ಡ್ ಹಾಕಿ ಪರಪರ ಉಜ್ಜಾಡಿದ್ದು, '
'ನೀವು ಕೊಟ್ಟ 40 ರುಪಾಯಿ ಅಷ್ಟ್ ಸಾಕ್, '
'ಮೋದಿ ಸಿಸ್ಟರ್ ರೀ ನೀವು '
'ಈ 7 ರುಪಾಯಿ ಮಸಾಲಾ ಮಜ್ಜಿಗೆ ಶೇರ್ ಕೇಳ್ಬೇಡ್ರಿ 'ಹೀಗೆ ಪಂಚಿಂಗ್ ಡೈಲಾಗ್ ಗಳು ಸಕತ್ ಆಗಿ ಸಿಂಕ್ ಆಗಿವೆ.

ಕೊನೆಯಲ್ಲಿ ಮುಂಗಾರುಮಳೆ ಥೀಮ್ ಪ್ರೀತಿ ಮಧುರ ತ್ಯಾಗ ಅಮರ ಬದಲಿಗೆ 100 ಮಧುರ , 100 ಅಮರ ಎಂದು ಘೋಷಿಸಲಾಗಿದೆ. ಈ ಸಮಯಕ್ಕೆ ಈ ವಿಡಿಯೋ 14 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Currency Note Exchange gets Spoofed by Naati Factory. Watch how Golden Star Ganesh in Mungaru Male movie suffers for getting 100 rs note after banning 500 and 1000.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ