ಅಲ್ಲಿಗೆ ಮುಗಿದಿತ್ತು ಊಟಿಯಲ್ಲಿ ನಮ್ಮ ಮಧುಚಂದ್ರ!

ಆಗಿನಿಂದ ನಾ ಬೇರೆ ಹುಡುಗಿಯರ ಹೆಸರು ಹೇಳೋದು ಇರ್ಲಿ ... ಯಾರದ್ರು ಯಾವ ಸ್ಟಾಪ್ ಸರ್ ಇದು ಅಂತಾ ಕೇಳಿದಾಗಲೆಲ್ಲ.. ಕಷ್ಟ ಆದರೂ ಹೇಳುತ್ತಿದ್ದೆ ..ಸುಜಾತ ಬದಲು ರಾಜಾಜಿನಗರ entrance ಸ್ಟಾಪ್ , ಕಾವೇರಿಗೆ ಪ್ಯಾಲೇಸು ಗುಟ್ಟಹಳ್ಳಿ ಸ್ಟಾಪ್ ಅಂತಾ...
"ಲೇ.. ಸುಮ್ಮನೆ ಯಾಕೆ ಆ ಹುಡುಗಿ ಹೆಸರಿನ ಮೇಲೆ ವಾದ ಮಾಡಕ್ಕತ್ತಿರಿ? ನನ್ನಂಗೆ ನೀವು ಹುಡುಗಿ ಹೆಸರಿಂದ ಕಷ್ಟಕ್ಕೆ ಸಿಕ್ಕು ಹಾಕ್ಕೋಬೇಡ್ರಲೇ" ಅಂತಾ ಅವರಿಗೆ ಬುದ್ದಿವಾದ ಹೇಳುವಾಗಲೇ ಆ "ತ್ರಿಪುರ ಸುಂದರಿ" ನಮ್ಮ ಪಕ್ಕದಲ್ಲೇ ಹಾಗೇ ವಯ್ಯಾರವಾಗಿ ಬಳುಕುತ್ತ ನಡೆದು ಬಂದೇಬಿಡೋದಾ? ನಾ ನೋಡಲು ಹತ್ತಿದ್ದೆ ಬಾಯ್ಬಿಟ್ಟು!
"ರ್ರೀ.. ನೀವೇನು ಮನೆಗೆ ಬರ್ತೀರೋ ಅಥ್ವಾ ನಿಮ್ಮ ಈ ಫ್ರೆಂಡ್ಸ್ ಜೊತೆ ಸೇರಿಕೊಂಡು ಹುಡುಗಿಯರನ್ನು ಬಾಯಿಬಿಟ್ಕೊಂಡು ನೋಡ್ತಾ ಕೂತಿರ್ತಿರೋ?" ಅಂತಾ ಸರಸಳ ಆವಾಜ್ ಕೇಳಿ ಬಂದಾಗ.. ಎಲ್ಲೇ ಸಹವಾಸಪ್ಪ..ಮತ್ತೆ ಇವತ್ತೂ ತಲೆದಿಂಬು ಹಿಡಿದು ಮಲಗೋ ಪರಿಸ್ಥಿತಿ ಬರೋದು ಬೇಡ ಎಂದು ಹಾಕಿದ್ದೆ ಧಾಪುಗಾಲು ಅವಳ ಜೊತೆ.
ಮದುವೆ ಆಗಿ ಈಗ 5 ವರ್ಷಗಳು ಉರುಳಿವೆ... ಯಾವಾಗಾದರೂ ಅವಳಿಗೆ ಸ್ವಲ್ಪ ಉರಿಸಲಿಕ್ಕೆ "ಸುಜಾತ, ಕಾವೇರಿ, ನರ್ತಕಿ ಹತ್ತಿರ ಸ್ವಲ್ಪ ಕೆಲಸ ಇದೆ .. ಹೋಗಿಬರ್ತಿನಿ" ಅಂತ ಅಂದಾಗ... ಅಡುಗೆ ಮನೆಯಿಂದ ಕೇಳಿಬಂದ ಅವಳ ಉತ್ತರ "ಸರಿ ..ರ್ರೀ ...ನಾನು ಸ್ವಲ್ಪ ಹಂಗ ವೀರೇಶ, ಗೋಪಾಲ, ಪ್ರಸನ್ನ, ಸಾಗರ್ ಹತ್ತಿರ ಹೋಗಿ ಬರ್ತೀನಿ" ಅಂತ ಅವಳಂದಾಗ.. ಬೆಚ್ಚಿ, ಮೈ ಉರಿಯುವ ಸ್ಥಿತಿ ನಂದಾಗಿತ್ತು!
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications