ಊರ್ವಶಿ ಅಪ್ಸರಾ ಮೇನಕೆ, ಈ ಹೆಸರೆಲ್ಲ ಏನಕೆ?

Humor by Nagaraja Maheswarappa
ಮೊನ್ನೆ ಹೋಗಿದ್ದ ಯಾವುದೋ ಒಂದು ಪಾರ್ಟಿಯಲ್ಲಿ ಹಾಗೇ ಒಂದು ಕಿರು ಸಂವಾದ ನಡೆದಿತ್ತು ನನ್ನ ಇಬ್ಬರು ದೋಸ್ತ್ ಗಳ ಮಧ್ಯೆ. ವಿಷ್ಯ "ಹೆಸರಲ್ಲಿ ಏನಿದೆ ಅಂತಾ?" ಅದೇ ಪಾರ್ಟಿಗೆ ಬಂದಿದ್ದ ಒಂದು ಹುಡುಗಿಯ ಹೆಸರ ಬಗ್ಗೆ. ಆಕೆಯ ಹೆಸರು "ತ್ರಿಪುರ ಸುಂದರಿ" ಅಂತ. ಆದರೆ ಆ ಹುಡುಗಿ ಹೆಸರಿಗೆ ತಕ್ಕಂತೆ ಇಲ್ಲ ಅಂತ ಅವರಲ್ಲೊಬ್ಬ. ಮತ್ತೊಬ್ಬ ನೀನು ಹೇಳ್ತಿಯಾ ಅಂತ ನನ್ನನ್ನೂ ತಮ್ಮ ಸಂವಾದದಲ್ಲಿ ಎಳೆಯಲು ನೋಡಿದ. ಆಗಲೇ ಅವರಿಬ್ಬರ ಹೊಟ್ಟೆಯಲ್ಲಿ ಸೇರಿದ್ದ ಮಲ್ಯನ ರಮ್ ತೋರಿಸಹತ್ತಿತ್ತು ಅದರ ಪ್ರಭಾವ! ಅವರ ಜೊತೆ ವಾದ ಮಾಡೋದು ಇರಲಿ... ಅದು ಒಂದು ಹುಡುಗಿ ಹೆಸರ ಮೇಲೆ... ಅಬ್ಬಬ್ಬ ..! ಅದರ ಬಗ್ಗೆ ಯೋಚಿಸಿನೇ ನನ್ನ ಮನ ಭರ್ರಂತ ಹಿಂದೆ ಓಡಿತ್ತು.

ಬೆಂಗಳೂರಲ್ಲಿ ಯಾವೋದು ಒಂದು ಕಂಪನಿಯಲ್ಲಿ ಮಾರ್ಕೆಟಿಂಗ್ ಆಫೀಸರ್ ಆಗಿ ಸೇರಿದ್ದೆ. ದಿನಾ ಒಂದು ಕಡೆ ಆ ಕಂಪನಿ, ಈ ಕಂಪನಿ, ಅಲ್ಲಿ ಮೀಟಿಂಗ್ ಇಲ್ಲಿ ಮೀಟಿಂಗ್, ಅವರು-ಇವರನ್ನು ಮೀಟ್ ಮಾಡೋದು... ಹೀಗೆ ಬರೇ ಅಡ್ಡಾಡೋ ಕೆಲಸ ಮಾಡಿ ಸಾಕಾಗಿತ್ತು... ಅದರಲ್ಲಿ ಕೈಯಲ್ಲಿ ಗಾಡಿ ಇರದೇ ಇದ್ದಿದ್ದರಿಂದ ನಮ್ಮ 'ಬಿಟ್ರೆ ತಿರುಗಿ ಸಿಗದ'(BTS)ನಲ್ಲೇ ಅಡ್ಡಾಡುತ್ತಿದ್ದೆ. ಹಾಗಾಗಿ ಬೇರೆ ಊರಿನಿಂದ ಬಂದ ನಂಗೆ ಸ್ವಲ್ಪ ಬೆಂಗಳೂರಿನ ಎಲ್ಲ ಜಾಗ, ಬಸ್ ಸ್ಟಾಪ್ ಗಳ ಬಗ್ಗೆ ಗೊತ್ತಾಗಿತ್ತು.

ಹೀಗೆ ಒಂದೆರಡು ವರ್ಷ ನಡೆದಿರುವಾಗ... ಮಗ ಮತ್ತೆ ಯಾದಾದ್ರು ಬೆಂಗಳೂರು ಹುಡುಗಿನಾ ಕಟ್ಕೊಂಡು ಬಿಟ್ಟಾನು ಅನ್ನೋ ಕಾರಣಕ್ಕೋ? ಅಥವಾ ಪಾಪ ಒಬ್ನೇ ಅಡುಗೆ ಮಾಡಿಕೊಂಡು ಕಷ್ಟಪಡ್ತಾ ಇದಾನೆ ಅನ್ನೋ ಕಾರಣಕ್ಕೋ? ಗೊತ್ತಿಲ್ಲ, ಅಪ್ಪ ಅಮ್ಮ ಒಂದು ಹುಡುಗಿ ನೋಡಿ ಮದುವೆಗೆ ಜೈ ಅನ್ನಿಸಿ ಕಟ್ಟಿ ಹಾಕಿದ್ರು... :-(

ಹುಡುಗಿ (ಸಾರೀ ಮಡದಿ.. ಸರಸ) ಗುಲ್ಬರ್ಗ ಕಡೆಯಾಕಿ. ಒಮ್ಮೆಯೂ ಬೆಂಗಳೂರು ನೋಡೋದಿರ್ಲಿ.. ಬೆಂಗಳೂರು ಕಡೆ ತಲೆಹಾಕಿ ಸಹಾ ಮಲಗದವಳು. ನೋಡಕ್ಕೆ ಚೆನ್ನಾಗಿ ಸುಂದರಿಯಾಗಿದ್ದಳು. ಸರಿ ಮದುವೆ ಆದ ಮೇಲೆ ನಮ್ಮ ಎಲ್ಲ ಸೌತ್ ಇಂಡಿಯನ್ನರ ಫೇವರಿಟ್ ಹನಿಮೂನ್ ಸ್ಪಾಟ್ ಆದ "ಊಟಿ" ಗೆ ಹೋಗಿದ್ದೆವು. ಬೊಟಾನಿಕಲ್ ಗಾರ್ಡನ್, ಬೋಟಿಂಗ್, ಹೀಗೆ ಎಲ್ಲ ಕಡೆ ಭೇಟಿ ಕೊಟ್ಟ ಮೇಲೆ ಒಳ್ಳೆ ಸವಿ ಭೋಜನ ಮಾಡಿ ಮಧುಮಂಚಕ್ಕೆ ಬಂದಾಗ ಆ ಚಂದ್ರ ಕಿಟಕಿಯಲ್ಲಿ ಇಣುಕಿ ನೋಡಿ ನಾಚಿ ಮೋಡದ ಮಧ್ಯೆ ಮರೆಯಾಗಿ ಹೋಗಿದ್ದ :)

ಹಾಗೇ ಸರಸಳ ಬಿಸಿಯಪ್ಪುಗೆಯಲ್ಲಿ ಬಂಧಿತನಾಗಿದ್ದಾಗ. ಟೇಬಲ್ ಮೇಲೆ ಇದ್ದ ಮೊಬೈಲ್ ಕರ್ಕಶವಾಗಿ ಸೌಂಡ್ ಮಾಡತೊಡಗಿತ್ತು. ಒಳ್ಳೆ ಶಿವಪೂಜೆ ಮಧ್ಯೆ ಕರಡಿ ಬಿಟ್ಟ ಹಾಗೆ. ಕೇಳಿದರೂ ಕೇಳದ ಹಾಗೆ ಮಲಗಿದ್ದ ನನಗೆ ಮತ್ತೆ ಎರಡು ಬಾರಿ ಕಾಲ್ ಬಂದಾಗ ಯಾರಪ್ಪ ಇದು, ಡಿಸ್ಟರ್ಬ್ ಮಾಡ್ತಿರೋದು ಅಂತ ಒಲ್ಲದ ಮನಸ್ಸಿಂದ ಎದ್ದು ಬಂದು ಹಲೋ ಎಂದಿದ್ದೆ. ನೋಡಿದರೆ ಅತ್ತ ಕಡೆಯಿಂದ ನಮ್ಮ ಆಫೀಸಿಗೆ ಹೊಸದಾಗಿ ಸೇರಿದ್ದ ಅಸಿಸ್ಟಂಟ್‌ನ ವಾಯ್ಸ್. ಏನೋ ಅರ್ಜೆಂಟಾಗಿ ಮಾತಾಡಬೇಕು ಅಂದಾಗ ತಿರುಗಿ ನೋಡಿದೆ ಮಲಗಿದ್ದಳು ಸರಸ ಹಾಯಾಗಿ.

ಕಾಶ್ಮೀರದ ಸೇಬನ್ನು ಮೀರಿಸುವ..
ಅವಳ ಆ ಕೆಂಪು ರಂಗಿನ ಕೆನ್ನೆಗಳು!
ಜೇನಿನ ಸಿಹಿಯನ್ನೇ ಮೀರಿಸುವ..
ಅವಳ ಆ ಗುಲಾಬಿ ರಂಗಿನ ತುಟಿಗಳು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+