ಜೆಡಿಎಸ್-ಕಾಂಗ್ರೆಸ್ ಗೆಲುವಿನ ಆಟ, ಬಿಜೆಪಿಗೆ ಸೋಲಿನ ಚೆಲ್ಲಾಟ!
'ವಿಶ್ವಾಸ ಮತ ಯಾಚನೆಗೆ ಮುಂದಾಗುವುದು ಬೇಡ. ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ' ಎಂದು ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ವಿಧಾನಸಭೆಯಲ್ಲಿ ಘೋಷಣೆ ಮಾಡಿದರು. ಕೆಲವೇ ಕ್ಷಣಗಳಲ್ಲಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿತ್ತು. ಮೇ 17ರಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಮೇ 19ರಂದು ಅವರು ರಾಜೀನಾಮೆ ನೀಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಪತನಗೊಂಡಿತು.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಕಾಫಿ, ಟೀ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುತ್ತಾರೆ ಅವರು.

ಶನಿವಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನಗೊಂಡಾಗ ಶಂಕರ್ ಅವರು ಬರೆದ ವ್ಯಂಗ್ಯಚಿತ್ರ ಇಲ್ಲಿದೆ ನೋಡಿ, ಎಂಜಾಯ್ ಮಾಡಿ.












Click it and Unblock the Notifications