Daily Horoscope Aug 19: ಎರಡು ರಾಶಿಯವರಿಗೆ ಅದೃಷ್ಟದ ದಿನ; ಇನ್ನೆರಡು ರಾಶಿಯವರು ಎಚ್ಚರಿಕೆಯಿಂದ ಇರಬೇಕು!
Daily Horoscope: ಎರಡು ರಾಶಿಯವರಿಗೆ ಈ ದಿನ ಅದೃಷ್ಟ ತಂದರೆ ಇನ್ನೆರಡು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ನೋಡೊಣ.
ಮೇಷ ರಾಶಿ (Aries)
ಕುಟುಂಬ ಸದಸ್ಯರು ನಿಮ್ಮ ಜೊತೆ ನಿಲ್ಲುವರಿದಿಂದ, ವಿಶೇಷವಾಗಿ ನಿಮ್ಮ ಹಿರಿಯರಿಂದ ನಿಮಗೆ ಅಪಾರ ಬೆಂಬಲ ಸಿಗುತ್ತದೆ. ಇಂದು ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ಯಾವುದೇ ಅವಕಾಶಗಳು ಕೈ ತಪ್ಪಲು ಬಿಡಬೇಡಿ. ಸಣ್ಣ ಪ್ರಯತ್ನ ದೊಡ್ಡ ಮಟ್ಟದ ಲಾಭವನ್ನು ನೀಡಬಹುದು.
ವೃಷಭ ರಾಶಿ (Taurus)
ಇಂದಿನ ದಿನ ಉತ್ತಮವಾಗಿರಲಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಸಂತೋಷಗೊಳ್ಳುವರು.ಕಚೇರಿ ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲವೂ ಇರುವುದು. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುವುದು.

ಮಿಥುನ ರಾಶಿ (Gemini)
ವ್ಯಾಪಾರದಲ್ಲಿ ಹೆಚ್ಚು ಲಾಭವಾಗುವುದು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗೆ ದಿನ ಉತ್ತಮವಾಗಿರುವುದು. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಹಿರಿಯರ ಆಶೀರ್ವಾದ ಪಡೆಯುವುದು ಮುಖ್ಯವಾಗಿರುತ್ತದೆ. ನಿಮ್ಮ ಪ್ರಯತ್ನಗಳಲ್ಲಿ ಸಫಲರಾಗುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.
ಕರ್ಕಾಟಕ ರಾಶಿ (Cancer)
ಹೊಸ ಯೋಜನೆಯಲ್ಲಿ ಕೆಲಸ ಪ್ರಾರಂಭಿಸಬಹುದು. ಭವಿಷ್ಯದಲ್ ಹೆಚ್ಚು ಪ್ರಯೋಜನವಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಎರಡು ಪಟ್ಟು ಹೆಚ್ಚು ಶ್ರಮಿಸಬೇಕಾಗುವುದು. ಸಂಗಾತಿಯಿಂದ ಉಡುಗೊರೆ ಸಿಗುವುದು. ಸ್ನೇಹಿತರಿಂದ ಸಹಾಯ ಸಿಗುವುದು.
ಸಿಂಹ ರಾಶಿ (Leo)
ಇಂದು ಸಂತೋಷದ ದಿನವಾಗಿರುವುದು. ಕಚೇರಿಯಲ್ಲಿ ಎಲ್ಲರೂ ನಿಮ್ಮ ಕೆಲಸದಿಂದ ಸಂತೋಷಪಡುವರು. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಕನ್ಯಾ ರಾಶಿ (Virgo)
ಹೊಸ ಕೆಲಸಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು.ವ್ಯಾಪಾರ ವಹಿವಾಟುಗಳಲ್ಲಿ ಆರ್ಥಿಕ ಲಾಭವಾಗುವುದು. ಆದರೂ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ. ವಹಿಸಿರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ತಿಗೊಳಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ.
ತುಲಾ ರಾಶಿ (Libra)
ಹಳೆಯ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವ್ಯವಹಾರ ವಹಿವಾಟುಗಳ ಬಗ್ಗೆ ಜಾಗರೂಕರಾಗಿರಿ. ಮಹಿಳೆಯರು ಮನೆ ಆಧಾರಿತ ವ್ಯವಹಾರವನ್ನು ಪ್ರಾರಂಭಿಸಬಹುದು. ಮಾಡುವ ಕೆಲಸ ಕಾರ್ಯಗಳಲ್ಲಿ ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುವುದು. ತಾಯಿಯ ಆರೋಗ್ಯ ಅತ್ಯುತ್ತಮವಾಗಿರುವುದು.
ವೃಶ್ಚಿಕ ರಾಶಿ (Scorpio)
ಇಂದು ನಿಮ್ಮ ಪಾಲಿನ ಅನುಕೂಲಕರ ದಿನವಾಗಿರುವುದು. ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ಮಾತಿನಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಬಹುದು. ಸ್ನೇಹಿತರೊಂದಿಗೆ ಯಾವುದೇ ವಿಷಯವನ್ನು ಮುಕ್ತವಾಗಿ ಚರ್ಚಿಸಿ.
ಧನು ರಾಶಿ (sagitarius)
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ವಿಶೇಷ ಪೂಜೆಯಲ್ಲಿ ಭಾಗವಹಿಸುವಿರಿ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಹಣ ವಾಪಸ್ ಸಿಗುವುದು. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಬೆಂಬಲ ಸಿಗುವುದು.
ಮಕರ ರಾಶಿ (Capricorn)
ಜೀವನದಲ್ಲಿ ಕೆಲವು ಬದಲಾವಣೆಗಳಾಗಬಹುದು. ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸ್ವಲ್ಪ ಹೆಚ್ಚು ಶ್ರಮಿಸಬೇಕಾಗಬಹುದು. ಅಂತಿಮವಾಗಿ, ಉತ್ತಮ ಫಲಿತಾಂಶ ಸಿಗುವುದು. ಸಂಗಾತಿಯೊಂದಿಗೆ ಹೊಸ ಉದ್ಯಮ ಆರಂಭಿಸಬಹುದು. ನಿಮ್ಮ ಹೊಸ ಯೋಜನೆಗೆ ತಂದೆಯ ಆಶೀರ್ವಾದ ಸಿಗುವುದು.
ಕುಂಭ ರಾಶಿ (Aquarius)
ಈ ದಿನ ಹೆಚ್ಚು ಲಾಭದಾಯಕವಾಗಿರುವುದು. ದೀರ್ಘಕಾಲದ ಯೋಜನೆ ಪೂರ್ಣಗೊಳ್ಳುವುದು. ಹೊಸ ಯೋಜನೆಯನ್ನು ಪ್ರಾರಂಭಿಸುವಿರಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಕಲೆ ಅಥವಾ ಸಂಗೀತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ದಿನ ಉತ್ತಮವಾಗಿರುವುದು.
ಮೀನ ರಾಶಿ (Pisces)
ತಾಳ್ಮೆಯಿದ್ದರೆ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವಿರಿ. ಅನಗತ್ಯ ವಿಷಯಗಳಿಂದ ದೂರವಿರಿ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಸ್ನೇಹಿತರೊಂದಿಗೆ ಮುಖ್ಯವಾದ ವಿಷಯವನ್ನು ಚರ್ಚಿಸಬಹುದು.


Click it and Unblock the Notifications
