Daily Horoscope October 15: ಸೌಭಾಗ್ಯ ಯೋಗದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್, ಸಾಲದ ಹೊರೆ ಇಳಿಕೆ!
Daily Horoscope October 15: ಅಶ್ವಿನಿ ಮಾಸದ ಶುಕ್ಲ ಪಕ್ಷದ ಐದನೇ ದಿನ. ಜ್ಯೇಷ್ಠ ನಕ್ಷತ್ರದ ಪರಿಣಾಮ ಇಡೀ ದಿನ ಇರುವುದು. ಚಂದ್ರನು ದಿನವಿಡೀ ಮಂಗಳನ ಅಧಿಪತ್ಯದ ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಾನೆ.ಗ್ರಹಗಳ ಶುಭ ಸಂಗಮದಿಂದಾಗಿ, ಸೌಭಾಗ್ಯ ಯೋಗ, ಲಕ್ಷ್ಮೀನಾರಾಯಣ ಯೋಗ, ಪಾರಿಜಾತ ಯೋಗ, ವಾಶಿ ಯೋಗ, ಆನಂದದಿ ಯೋಗ, ಸುನ್ಫಾ ಯೋಗ ಮತ್ತು ಮಾಳವ್ಯ ಯೋಗಗಳು ರೂಪುಗೊಳ್ಳುವುದು.
ಮೇಷ ರಾಶಿ (Aries)
ವ್ಯವಹಾರದಲ್ಲಿ ಸ್ಪರ್ಧೆ ಹೆಚ್ಚಾಗುವುದು. ಮಾರುಕಟ್ಟೆ ವಿವಾದಗಳನ್ನು ಶಾಂತವಾಗಿ ಮತ್ತು ತಾಳ್ಮೆಯಿಂದ ಬಗೆಹರಿಸಿ.ಕೆಲಸದಲ್ಲಿ ಸೋಮಾರಿತನ ಮಾಡುವಿರಿ. ಸಾರ್ವಜನಿಕ ವ್ಯವಹಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಕೆಲಸದ ಒತ್ತಡ ಹೆಚ್ಚಗುವುದು. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಮನಸ್ಸಿನ ಕಿರಿ ಕಿರಿ ಬಗ್ಗೆ ಸ್ನೇಹಿತರ ಬಳಿ ಶೇರ್ ಮಾಡಿಕೊಳ್ಳಿ. ಕುಟುಂಬ ವಾತಾವರಣ ಸಹಜವಾಗಿರುತ್ತದೆ.

ವೃಷಭ ರಾಶಿ (Taurus)
ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ. ಸಿಬ್ಬಂದಿಯ ಸಲಹೆಗೆ ಗಮನ ನೀಡಿ. ಕೆಲಸದ ಹೊರೆ ಕಡಿಮೆ ಮಾಡಲು ಜವಾಬ್ದಾರಿ ಹಂಚಿಕೊಳ್ಳಿ. ವಿಶ್ವಾಸಾರ್ಹ ವ್ಯಕ್ತಿಯೇ ಮೋಸ ಮಾಡಬಹುದು. ದೀರ್ಘಕಾಲದಿಂದ ಬರುತ್ತಿರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗಸ್ಥರಿಗೆ ಉತ್ತಮ ಅವಕಾಶ ಸಿಗುತ್ತವೆ.ವ್ಯವಹಾರದಲ್ಲಿ ಮಾಡಿದ ಕಠಿಣ ಪರಿಶ್ರಮ ಫಲ ನೀಡುತ್ತದೆ.
ಮಿಥುನ ರಾಶಿ (Gemini)
ಸೌಭಾಗ್ಯ ಯೋಗದ ಪರಿಣಾಮದಿಂದಾಗಿ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮತ್ತು ಒಳ್ಳೆಯ ಸುದ್ದಿ ಕೇಳುವಿರಿ. ಹಣದ ಸಮಸ್ಯೆ ನಿವಾರಣೆಯಾಗುವುದು. ದಿನ ಉತ್ಸಾಹದಿಂದ ಕಳೆಯುವುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ವೃತ್ತಿಜೀವನದಲ್ಲಿ ಉತ್ತಮ ಅವಕಾಶ ಸಿಗುವುದು. ಸಂಗಾತಿಯ ಸಲಹೆಯೊಂದಿಗೆ ಆರ್ಥಿಕ ಲಾಭ ಸಿಗುತ್ತದೆ.
ಕಟಕ ರಾಶಿ (Cancer)
ಇವತ್ತು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ದೊಡ್ಡ ಲಾಭ ತರುವುದು. ಪ್ರವಾಸಕ್ಕೆ ಹೋಗುವಿರಿ. ವಂಚನೆಯ ಬಗ್ಗೆ ಎಚ್ಚರ ವಹಿಸಿ. ಕೆಲಸದಲ್ಲಿ ಎದುರಾದ ಅಡೆತಡೆ ನಿವಾರಣೆಯಾಗುವುದು. ಕೆಲಸದ ಹೊರೆ ಕಡಿಮೆಯಾಗುತ್ತದೆ. ಮಾನಸಿಕ ಶಾಂತಿ ಇರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಸಿಂಹ ರಾಶಿ (Leo)
ವ್ಯಾಪಾರ ಪ್ರವಾಸಗಳನ್ನು ಸದ್ಯಕ್ಕೆ ಮುಂದೂಡಿ. ಕೆಲಸ ಮತ್ತು ಹಣದ ವಿಚಾರದಲ್ಲಿ ಕೆಲವು ಅಡೆತಡೆ ಎದುರಾಗಬಹುದು. ವೈಯಕ್ತಿಕ ಸಮಸ್ಯೆ ವ್ಯವಹಾರದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಆಡಳಿತ ಅಧಿಕಾರಿಗಳಿಗೆ ಈ ದಿನ ಸ್ವಲ್ಪ ಸವಾಲಿನಿಂದ ಕೂಡಿರಬಹುದು. ಕುಟುಂಬದಲ್ಲಿ ಶಾಂತಿ ಕಾಪಾಡಲು ಮೌನವಾಗಿರುವುದೇ ಉತ್ತಮ.
ಕನ್ಯಾರಾಶಿ (Virgo)
ಗ್ರಹಗಳ ಅನುಕೂಲಕರ ಸ್ಥಾನಗಳು ದೊಡ್ಡ ಮತ್ತು ಲಾಭದಾಯಕ ಕ್ರಮಗಳಿಗೆ ಕಾರಣವಾಗುತ್ತವೆ. ಬೆಳಿಗ್ಗೆ 7 ರಿಂದ 8 ರವರೆಗೆ ಅಥವಾ ಸಂಜೆ 5 ರಿಂದ 6 ರವರೆಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯವಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಷಣದ ಪ್ರತಿಫಲ ಸಿಗುವುದು. ಧರ್ಮ ಮತ್ತು ಆರಾಧನೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮನೆಯ ವಾತಾವರಣ ಉತ್ತಮವಾಗಿರುವುದು.
ತುಲಾ ರಾಶಿ (libra)
ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಗೆ ಕಾರಣವಾಗುತ್ತದೆ. ಜೀವನ ಸಂಗಾತಿ ನಿಮ್ಮ ವ್ಯವಹಾರದ ಪಾಲುದಾರರಾಗಿದ್ದರೆ, ದೊಡ್ಡ ಲಾಭ ಸಿಗುವುದು. ಅದೃಷ್ಟದ ಕಾರಣದಿಂದ ಉದ್ಯೋಗದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವುದು. ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಿ. ಮನೆಯಲ್ಲಿ ಪ್ರೀತಿ, ಸಾಮರಸ್ಯ ಮತ್ತು ನಗುವಿನ ವಾತಾವರಣವಿರುತ್ತದೆ. ಆದಾಯ ಹೆಚ್ಚಾಗುವುದು.
ವೃಶ್ಚಿಕ ರಾಶಿ (Scorpio)
ಹಣ ಹೂಡಿಕೆಯಿಂದ ಲಾಭವಾಗುವುದು. ಕಚೇರಿಯಲ್ಲಿ ಹೊಸ ಜವಾಬ್ದಾರಿ ಸಿಗುವುದು. ಉದ್ಯೋಗದಲ್ಲಿ ಕೆಲವು ಸಕಾರಾತ್ಮಕ ಸುದ್ದಿ ಸಿಗುವುದು. ಪ್ರೀತಿಯ ಜೀವನ ಮತ್ತು ಕುಟುಂಬ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಮನೆಯಲ್ಲಿ ಶಾಂತಿಯುತ ವಾತಾವರಣದಲ್ಲಿ ಚೆನ್ನಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಧನು ರಾಶಿ (Sagittarius)
ಉತ್ತಮ ಲಾಭಕ್ಕಾಗಿ ಶ್ರಮ ವಹಿಸಬೇಕಾಗುವುದು. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುವುದು. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ. ದಿನವಿಡೀ ಮಾನಸಿಕ ಒತ್ತಡ ಮತ್ತು ಆತಂಕ ಇರಬಹುದು. ಯಾವುದೇ ರೀತಿಯ ಹೊಸ ಅಥವಾ ಅಪಾಯಕಾರಿ ವ್ಯವಹಾರಗಳಿಂದ ದೂರವಿರಿ. ಮಾನಸಿಕ ಒತ್ತಡ ತಲೆನೋವು ಅಥವಾ ಆಯಾಸಕ್ಕೆ ಕಾರಣವಾಗಬಹುದು.
ಮಕರ ರಾಶಿ (Capricorn)
ವ್ಯವಹಾರದಲ್ಲಿ ಪರಿಸ್ಥಿತಿ ಸಹಜವಾಗಿರುತ್ತದೆ. ಅಧಿಕಾರಿಗಳೊಂದಿಗಿನ ಸಭೆ ತುಂಬಾ ಯಶಸ್ವಿಯಾಗಲಿದೆ. ಕುಟುಂಬ ಮತ್ತು ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದು. ಕೌಟುಂಬಿಕ ವಾತಾವರಣ ಶಾಂತ ಮತ್ತು ಆಹ್ಲಾದಕರವಾಗಿರುತ್ತದೆ. ಹಣಕಾಸಿನ ಲಾಭ ಹೆಚ್ಚಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ.
ಕುಂಭ ರಾಶಿ (Aquarius)
ಆರ್ಥಿಕ ಸಮತೋಲನ ಕಾಯ್ದುಕೊಳ್ಳಲು ಅನಗತ್ಯ ಖರ್ಚನ್ನು ನಿಲ್ಲಿಸಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವುದು. ಹಳೆಯ ಸಮಸ್ಯೆ ಕೊನೆಯಾಗುವುದು. ಹೊಸ ಯೋಜನೆಯಲ್ಲಿ ಕೆಲಸ ಮಾಡುವ ಅನುಭವ ಅದ್ಭುತವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಆರ್ಥಿಕ ಪ್ರಯೋಜನ ಸಿಗುವುದು.
ಮೀನ ರಾಶಿ (Pisces)
ಆದಾಯದ ಮೂಲಗಳು ಹೆಚ್ಚಾಗುತ್ತವೆ. ಸೌಭಾಗ್ಯ ಯೋಗದ ರಚನೆಯಿಂದಾಗಿ ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗುವುದು. ಮಕ್ಕಳ ವರ್ತನೆ ಕಿರಿ ಕಿರಿ ಉಂಟು ಮಾಡುವುದು. ಇದರ ನಡುವೆಯೂ ಕೆಲವು ಒಳ್ಳೆಯ ಸುದ್ದಿ ಕೇಳುವಿರಿ. ಮನಸ್ಸಿನ ಶಾಂತಿ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಸದೃಢವಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.


Click it and Unblock the Notifications
