Daily Horoscope May 8: ಈ ರಾಶಿಯವರಿಗೆ ದಿಢೀರ್ ಆರ್ಥಿಕ ಲಾಭ: ಹೇಗಿದೆ ನೋಡಿ 12 ರಾಶಿಗಳ ದಿನ ಭವಿಷ್ಯ

Daily Horoscope May 8: ಮೇ 8ರ ಶುಕ್ರವಾರ ದ್ವಾದಶ ರಾಶಿಗಳ ಗೋಚರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮೇ 8ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ

ಕೆಲಸದ ಜವಾಬ್ದಾರಿಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕೆಲಸದ ಹೊರೆ ಗಣನೀಯವಾಗಿ ಕಡಿಮೆಯಾಗುತ್ತದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗುತ್ತವೆ.

ವೃಷಭ ರಾಶಿ

ಆದಾಯ ಹೆಚ್ಚಾಗುವುದರ ಜೊತೆಗೆ ಖರ್ಚು ಕೂಡಾ ಹೆಚ್ಚಳವಾಗುವುದು. ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಒಳ್ಳೆಯದು. ವೃತ್ತಿ ಮತ್ತು ಉದ್ಯೋಗಗಳಲ್ಲಿ ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ ಇದೆ.

Daily Horoscope May 8

ಮಿಥುನ ರಾಶಿ

ಕೆಲಸದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಹೆಚ್ಚುವರಿ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು. ಮಕ್ಕಳ ಬಗ್ಗೆ ನಿರೀಕ್ಷಿತ ಶುಭ ಸುದ್ದಿ ಸಿಗುತ್ತದೆ.

ಕರ್ಕಾಟಕ ರಾಶಿ

ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಹಣಕಾಸಿನ ಸಮಸ್ಯೆ ನೀಗುವುದು. ಹತ್ತಿರದ ಸಂಬಂಧಿಗಳೊಂದಿಗೆ ವಿವಾದಗಳಾಗುವ ಸಾಧ್ಯತೆ ಇದೆ. ಕುಟುಂಬ ಜೀವನವು ತುಂಬಾ ತೃಪ್ತಿಕರವಾಗಿರುತ್ತದೆ.

ಸಿಂಹ ರಾಶಿ

ಆದಾಯ ಸ್ಥಿರವಾಗಿರುತ್ತದೆ. ಆದರೆ ವೆಚ್ಚಗಳು ಹೆಚ್ಚಾಗುತ್ತವೆ.ಇದರಿಂದ ಸ್ವಲ್ಪ ತೊಂದರೆ ಉಂಟುಮಾಡುತ್ತವೆ. ಕೆಲಸದಲ್ಲಿ ಕೆಲವು ಪ್ರಮುಖ ಜವಾಬ್ದಾರಿಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.

ಕನ್ಯಾ ರಾಶಿ

ಹಣಕಾಸು ಮತ್ತು ಆಸ್ತಿ ವಿಷಯಗಳಲ್ಲಿ ನಿರೀಕ್ಷಿತ ಶುಭ ಸುದ್ದಿ ಸಿಗಲಿದೆ. ಆಸ್ತಿ ವಿವಾದಗಳು ಬಗೆಹರಿಯುವುದು. ಹಣದ ವಿಷಯಗಳಲ್ಲಿ ಜಾಗರೂಕರಾಗಿರುವುದು ಸೂಕ್ತ.

ತುಲಾ ರಾಶಿ

ಆದಾಯದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗುವ ಸಾಧ್ಯತೆಯಿದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಮಾನಸಿಕ ಒತ್ತಡವು ಕಡಿಮೆಯಾಗುವುದರಿಂದ ನಿರಾಳರಾಗಿರುವಿರಿ. ವೈಯಕ್ತಿಕ ಸಮಸ್ಯೆಗಳು ಕಡಿಮೆಯಾಗುತ್ತವೆ.

ವೃಶ್ಚಿಕ ರಾಶಿ

ವೃತ್ತಿ ಮತ್ತು ವ್ಯವಹಾರದಲ್ಲಿ ಒತ್ತಡ ಹೆಚ್ಚಿದ್ದರೂ, ಆದಾಯದ ಕೊರತೆ ಇರುವುದಿಲ್ಲ. ಕೆಲಸದ ಮಹತ್ವ ಹೆಚ್ಚಾಗುತ್ತದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಆದಾಯ ಸ್ಥಿರವಾಗಿರುತ್ತದೆ.

ಧನು ರಾಶಿ

ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುವಿರಿ. ವ್ಯವಹಾರದಲ್ಲಿ ಲಾಭವಾಗುವುದು. ಆರೋಗ್ಯವು ಉತ್ತಮವಾಗಿರುತ್ತದೆ.

ಮಕರ ರಾಶಿ

ವೃತ್ತಿ ಮತ್ತು ಉದ್ಯೋಗಗಳಲ್ಲಿ ಕೆಲಸದ ಹೊರೆ ಹೆಚ್ಚಾಗುವುದು. ವಿಶ್ರಾಂತಿಯಿಲ್ಲದೆ ಕೆಲಸ ಮಾಡುವ ಪರಿಸ್ಥಿತಿ ಇರುತ್ತದೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದಾಯ ಮತ್ತು ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

ಕುಂಭ ರಾಶಿ

ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿನ ಸಣ್ಣಪುಟ್ಟ ತೊಂದರೆಗಳು ಬಗೆಹರಿಯುವುದು. ಆದಾಯ ಗಣನೀಯವಾಗಿ ಏರಿಕೆಯಾಗುವುದು. ಸಣ್ಣಪುಟ್ಟ ಅನಾರೋಗ್ಯ ಎದುರಾಗುವ ಸಾಧ್ಯತೆಯಿದೆ.

ಮೀನ ರಾಶಿ

ಸಹೋದರರೊಂದಿಗಿನ ಆಸ್ತಿ ವಿವಾದಕ್ಕೆ ತೆರೆ ಬೀಳುವುದು. ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನಗಳಲ್ಲಿ ಯಶಸ್ಸು ಸಿಗುವುದು. ವೃತ್ತಿ ಮತ್ತು ಉದ್ಯೋಗಗಳಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+