ಕುಂಭ ಮತ್ತು ಮೀನ ರಾಶಿ ಗುಣಸ್ವಭಾವಗಳು

* ಧವಳ
ಕುಂಭ ರಾಶಿ (Aquarius) ಜನವರಿ 21 - ಫೆಬ್ರವರಿ 19 : ಸದಾ ಕನಸುಗಳ ರೆಕ್ಕೆಯ ಮೂಲಕ ಕಲ್ಪನೆಯ ಲೋಕದಲ್ಲಿ ಹಾರಾಡ್ತಾ ಇರ್ತಾರೆ. ಕನಸು ಕಟ್ಟಿ ಅದರ ನನಸಿಗೆ ಪ್ರಯತ್ನಿಸುವ ಸ್ವಲ್ಪ ವಿಚಿತ್ರವೇ ಎನ್ನಬಹುದಾದ ಸ್ವಭಾವ ಹೊಂದಿದ ವ್ಯಕ್ತಿತ್ವ. ಇವರ ಆಸಕ್ತಿಯ ಕೇಂದ್ರ ಬಿಂದು ಸದಾ ಹುಡುಕಾಟ. ಇಡೀ ಜೀವನವೇ ಇವರಿಗೆ ಗೂಗಲ್ ಸರ್ಚ್ ಇಂಜಿನ್ ಥರ ಕಾಣಿಸತ್ತೆ.
ಎಲೆ ಬಣ್ಣ ಹಸಿರು, ಆದರೆ ಕೆಲವಕ್ಕೆ ಕೆಂಪು, ಒಂದಷ್ಟಕ್ಕೆ ಹಳದಿ, ಒಟ್ಟಾರೆ ಯಾಕಿ ಬದಲಾವಣೆ? ಏನೆ ಆಗ್ಲಿ ಇದನ್ನು ಕಂಡು ಹಿಡಿಯಲೇಬೇಕು ಅನ್ನುವ ಸಣ್ಣ ಮಟ್ಟದ, ಕೆಲವು ಬಾರಿ ಅತಿ ದೊಡ್ಡ ಮಟ್ಟದ ಹುಡುಕಾಟ. ವಿಜ್ಞಾನ -ತ೦ತ್ರಜ್ಞಾನದ ಸಂಗತಿಗಳ ವಿಷಯಕ್ಕೆ ಬಂದ್ರೆ ಇವರ ಕಲ್ಪನೆಗಳು ನ್ಯೂಟನ್ ಹಾಗೂ ಡಾರ್ವಿನ್ ಗೂ ಹೊಳೆಯೋದಿಲ್ಲ ಅಷ್ಟು ಟಿಪಿಕಲ್, ಕೆಲವು ಸರ್ತಿಯಂತೂ ಯುನೀಕ್.
ತಾವು ಏನಾದ್ರೂ ಹೊಸದನ್ನು ಕಂಡು ಹಿಡಿಯಬೇಕೆಂಬ ಹುಮ್ಮಸ್ಸು. ಇಂತಹವರು ಕಂಪ್ಯೂಟರ್ ರಂಗದ ಸಾಫ್ಟೂ ಹಾರ್ಡೂ ಒಟ್ಟಿನಲ್ಲಿ ಅತ್ಯಂತ ಸೂಕ್ತವಾದ ಕ್ಷೇತ್ರ. ಅಲ್ಲದೆ ಜ್ಯೋತಿಷ್ಯ, ರೇಡಿಯೋ, ಎಲೆಕ್ಟ್ರಾನಿಕ್ ಉದ್ಯಮ, ಏರೋಪ್ಲೇನ್ ಚಾಲಕರು ಆದರೆ ಯಶಸ್ಸು ನಿಮ್ಮ ಸೇವೆಯಲ್ಲಿ ಸದಾ ಸಂಗಾತಿ.
ಇನ್ನೊದು ಗುಣವೆಂದರೆ, ಎಲ್ಲ ವಿಷಯದಲ್ಲೂ ಸತ್ಯವನ್ನು ಕಂಡುಹಿಡಿಯುವ ತವಕ, ಆಸಕ್ತಿ, ಒಂದಷ್ಟು ಕುತೂಹಲ, ಸಂದರ್ಭಕ್ಕೆ ತಕ್ಕಂತೆ ಅವರ ಈ ಗುಣ ಪ್ರಕಟವಾಗುತ್ತದೆ. ಮನಸ್ಸು ಸ್ಥಿರವಾಗಿರಲ್ಲ. ಕ್ಷಣ ಚಿತ್ತ ಕ್ಷಣ ಪಿತ್ತ. ಇದರಿಂದ ನರಗಳು ತೊಂದರೆ ಅನುಭವಿಸಿ ಈ ವ್ಯಕ್ತಿತ್ವದವರು ಸುಲಭವಾಗಿ ನರಕ್ಕೆ ಸಂಬಂಧಿತ ಕಾಯಿಲೆಗೆ ಒಳಗಾಗುತ್ತಾರೆ. ಏನೆ ಇರಲಿ ಇವರು ತಾವಿರುವ ವಾತಾವರಣವನ್ನು ಆಹ್ಲಾದಕರವಾಗಿ ಇಟ್ಟಿರುತ್ತಾರೆ. ಇದರಿಂದ ಇವರ ಎಷ್ಟೋ ತಪ್ಪುಗಳು ಮುಚ್ಚಿ ಹೋಗುತ್ತದೆ.
ಕುಭರಾಶಿಯವರು ಇವರು ನೇರ, ನಿಷ್ಠುರವಾದಿ, ವಾಸ್ತವವಾದಿಗಳು. ಯಾವುದನ್ನೇ ನೇರವಾಗಿ ಹೇಳಬೇಕಾದರೂ ವೇದಾಂತ-ಭಗವಂತನ ಸಹಾಯ ಪಡೆದು ಕೊಳ್ತಾರೆ. ಸ್ನೇಹದ ವಿಷಯದಲ್ಲಿ ಉತ್ತಮ ಸ್ನೇಹಿತರಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ. ಇವರು ಅತ್ಯುತ್ತಮ ರೊಮ್ಯಾಂಟಿಕ್ ಸಂಗಾತಿಯಾಗಿರುತ್ತಾರೆ. ವೈವಾಹಿಕ ಬದುಕು ಒಟ್ಟಾರೆಯಾಗಿ ಪ್ರಸನ್ನವಾಗಿರುತ್ತದೆ.
ಮೀನ ರಾಶಿ (Pisces) ಫೆಬ್ರವರಿ 19 - ಮಾರ್ಚ್ 20 : 'ಪರೋಪಕಾರ್ಥಂ ಇದಂ ಶರೀರಂ' ಎನ್ನುವ ಸ್ವಭಾವ ಇವರ ಜನ್ಮಕ್ಕೆ ಅಂಟಿದ ಗುಣ. ತಮಗೆ ಏನೆ ತೊಂದ್ರೆ ಆದ್ರೂ ಚಿಂತಿಸದೆ ಬೇರೆಯವರ ಸಹಾಯಕ್ಕೆ ನಿಂತು ಬಿಡ್ತಾರೆ. ಸಾಕಷ್ಟು ಸರ್ತಿ ಇವರ ಈ ಗುಣ ಅವರ ಪರ್ಸನಲ್ ಬದುಕಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.
'ಮನೆಗೆ ಮಾರಿ ಪರರಿಗೆ ಉಪಕಾರಿ'ಯಾಗಿ ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಸಹನೆ, ಕಾಳಜಿ, ಸಮಚಿತ್ತ ಇವರ ವಿಶೇಷ ಗುಣ. ಇವರ ಇನ್ನೊಂದು ಗುಣ ಅಂದ್ರೆ ಸಲಹೆ ಕೊಡೋದು. ಸರಳ ಭಾಷೆಯಲ್ಲಿ ಹೇಳೋದಾದ್ರೆ ಬಿಟ್ಟಿ ಸಲಹೆ ನೀಡುವುದಕ್ಕೆ ಪ್ರಖ್ಯಾತರು. ಎಷ್ಟೋ ಸರ್ತಿ ಸತ್ಯ ಅಪಥ್ಯ ಆಗಿರುತ್ತದೆ, ಆದರೆ ಇವರು ಅದರ ಕಡೆ ಗಮನ ಕೊಡದೆ ನೇರವಾಗಿ ಹೇಳಿ ಬಿಡ್ತಾರೆ.
ಸಂತೋಷವನ್ನು ಹಂಚಿಕೊಂಡು ಬದುಕುವ ಗುಣ ಇವರದು ಹಾಗೂ ಬೇರೆಯವರಿಗೆ ಇಷ್ಟ ಇರ್ಲಿ ಬಿಡಲಿ ತಮ್ಮ ದುಃಖವನ್ನು ಹಂಚದೆ ಬಿಡರು. ಏಕಾಗ್ರತೆ, ಗ್ರಹಣ ಶಕ್ತಿ ಇವರ ಪ್ಲಸ್ ಪಾಯಿಂಟ್ ಗಳಲ್ಲಿ ಒಂದಾಗಿದೆ. ಯಾವುದೇ ಸಂಗತಿಯನ್ನಾಗಲಿ ಕೂಲಂಕಷವಾಗಿ ಗಮನಿಸುತ್ತಾರೆ. ಮೀನರಾಶಿಯವರು ಸೌಂದರ್ಯ ಸವಿಯುವುದರಲ್ಲಿ ಮೊದಲಿಗರು. ಆ ಸೌಂದರ್ಯ- ಪ್ರಕೃತಿ, ಆಕೃತಿ, ಏನೆ ಆಗಿರಬಹುದು, ಜೀವನವನ್ನು ಸವಿದು ಬದುಕುತ್ತಾರೆ.
ಪ್ರವಾಸ ಮಾಡುವುದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಇವರಿಗೆ. ಐಷಾರಾಮ ಜೀವನದತ್ತ ಹೆಚ್ಚು ಒಲವು. ಇವರು ತಮ್ಮ ಕೈಕೆಳಗೆ ಕೆಲಸ ಮಾಡುವವರಿಗೆ ಅತ್ಯುತ್ತಮ ಸರ್ ಆಗಿರುತ್ತಾರೆ. ದೈವ ಭಕ್ತಿಯಲ್ಲೂ ಒಂದು ಕೈ ಮುಂದೆ. ಇವರಿಗೆ ಕುಂಭ ರಾಶಿಯವರು ಸಂಗಾತಿ ಆದ್ರೆ ನೋಡಿ ಆಗ ಬದುಕು ಎಷ್ಟು ಬೊಂಬಾಟ್ ಆಗಿರುತ್ತದೆ! ಪ್ರಣಯ ಪಕ್ಷಿಗಳಂತೆ ಜೀವನ ನಡೆಸುವ ಇವರು ಇತರರಿಗೆ ಮಾದರಿ(ಹೊಟ್ಟೆಉರಿ)ಆಗ್ತಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications