ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಪಿ ಸ್ಕಿನ್ ರೋಗದಿಂದ ದೇಶದಲ್ಲಿ 7,300 ಜಾನುವಾರು ಸಾವು: ಸೋಂಕು ತಡೆಗೆ ಲಸಿಕಾ ಅಭಿಯಾನ

|
Google Oneindia Kannada News

ನವದೆಹಲಿ, ಆಗಸ್ಟ್ 21: ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಂಟು ರಾಜ್ಯಗಳಲ್ಲಿ ಇದುವರೆಗೆ 7,300 ಕ್ಕೂ ಹೆಚ್ಚು ಜಾನುವಾರುಗಳು 'ಲಂಪಿ ಸ್ಕಿನ್ ರೋಗ'ದಿಂದ ಸಾವನ್ನಪ್ಪಿವೆ ಮತ್ತು ಸೋಂಕನ್ನು ತಡೆಗಟ್ಟಲು ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ಜಾನುವಾರುಗಳನ್ನು ಬಾಧಿಸುವ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದೆ. ಇದು ಕೆಲವು ಜಾತಿಯ ನೊಣಗಳು ಮತ್ತು ಸೊಳ್ಳೆಗಳು ಅಥವಾ ಉಣ್ಣಿಗಳಂತಹ ರಕ್ತ ಹೀರುವ ಕೀಟಗಳಿಂದ ಹರಡುತ್ತದೆ. ಇದು ಜ್ವರವನ್ನು ಉಂಟುಮಾಡುತ್ತದೆ, ಚರ್ಮದ ಮೇಲೆ ಗಂಟುಗಳು ಮತ್ತು ಜಾನುವಾರುಗಳ ಸಾವಿಗೆ ಕಾರಣವಾಗಬಹುದು.

ಲಂಪಿ ಸ್ಕಿನ್ ರೋಗ: ಪ್ರಾಣಿಗಳಿಗೆ ಲಸಿಕೆ ಹಾಕಲು ಆರಂಭಿಸಿದ ಪಂಜಾಬ್ಲಂಪಿ ಸ್ಕಿನ್ ರೋಗ: ಪ್ರಾಣಿಗಳಿಗೆ ಲಸಿಕೆ ಹಾಕಲು ಆರಂಭಿಸಿದ ಪಂಜಾಬ್

ಎಲ್‌ಎಸ್‌ಡಿ ಇತ್ತೀಚೆಗೆ ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ನಂತರ ಏಷ್ಯಾದಲ್ಲಿ ಹರಡಿತು. ಜುಲೈ 2019 ರಲ್ಲಿ ಬಾಂಗ್ಲಾದೇಶದಲ್ಲಿ ಈ ರೋಗ ಕಾಣಿಸಿಕೊಂಡಿತು.

ಅಧಿಕಾರಿಯ ಪ್ರಕಾರ, ಭಾರತದಲ್ಲೂ ಅದೇ ವರ್ಷ ಪೂರ್ವ ರಾಜ್ಯಗಳಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಎಲ್ಎಸ್‌ಡಿ ಮೊದಲ ಪ್ರಕರಣ ಕಂಡು ಬಂತು. ಆದರೆ ಈ ವರ್ಷ ಪಶ್ಚಿಮ ಮತ್ತು ಉತ್ತರ ರಾಜ್ಯಗಳಲ್ಲಿ ಹಾಗೂ ಅಂಡಮಾನ್ ನಿಕೋಬಾರ್‌ನಲ್ಲಿ ಈ ರೋಗ ವರದಿಯಾಗಿದೆ.

ಪಂಜಾಬ್, ಗುಜರಾತ್‌ ರಾಜ್ಯಗಳಲ್ಲಿ ಸೋಂಕು ಹೆಚ್ಚಳ

ಪಂಜಾಬ್, ಗುಜರಾತ್‌ ರಾಜ್ಯಗಳಲ್ಲಿ ಸೋಂಕು ಹೆಚ್ಚಳ

"ಮೊದಲನೆಯದಾಗಿ, ಗುಜರಾತ್‌ನಲ್ಲಿ ಎಲ್‌ಎಸ್‌ಡಿ ವರದಿಯಾಗಿದೆ ಮತ್ತು ಇದು ಈಗ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹರಡಿದೆ. ಇದುವರೆಗೆ 1.85 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಬಾಧಿತವಾಗಿವೆ ಮತ್ತು ಜುಲೈನಲ್ಲಿ ರೋಗ ಹರಡಿದ ನಂತರ 7,300 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ" ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಇದುವರೆಗೆ ಸುಮಾರು 74,325 ಜಾನುವಾರುಗಳು ರೋಗಕ್ಕೆ ತುತ್ತಾಗಿದ್ದರೆ, ಗುಜರಾತ್‌ನಲ್ಲಿ 58,546, ರಾಜಸ್ಥಾನದಲ್ಲಿ 43,962, ಜಮ್ಮು ಮತ್ತು ಕಾಶ್ಮೀರದಲ್ಲಿ 6,385, ಉತ್ತರಾಖಂಡದಲ್ಲಿ 1,300, ಹಿಮಾಚಲ ಪ್ರದೇಶದಲ್ಲಿ 532, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ 260 ಜಾನುವಾರುಗಳು ಎಲ್‌ಎಸ್‌ಡಿ ಸೋಂಕಿಗೆ ತುತ್ತಾಗಿವೆ ಎಂದು ಅವರು ಹೇಳಿದರು.

ಎಲ್‌ಎಸ್‌ಡಿಯಿಂದ 7300 ಜಾನುವಾರುಗಳು ಸಾವು

ಎಲ್‌ಎಸ್‌ಡಿಯಿಂದ 7300 ಜಾನುವಾರುಗಳು ಸಾವು

ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗೆ 7,300 ಜಾನುವಾರುಗಳು ಸಾವನ್ನಪ್ಪಿದ್ದು, ಪಂಜಾಬ್‌ನಲ್ಲಿ 3,359, ರಾಜಸ್ಥಾನದಲ್ಲಿ 2,111, ಗುಜರಾತ್‌ನಲ್ಲಿ 1,679, ಜಮ್ಮು ಮತ್ತು ಕಾಶ್ಮೀರದಲ್ಲಿ 62, ಹಿಮಾಚಲ ಪ್ರದೇಶದಲ್ಲಿ 38, ಉತ್ತರಾಖಂಡದಲ್ಲಿ 36 ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ 29 ಪ್ರಾಣಿಗಳು ಸಾವನ್ನಪ್ಪಿವೆ.

ಹರಿಯಾಣದಲ್ಲೂ ಎಲ್‌ಎಸ್‌ಡಿ ಸೋಂಕಿನ ವರದಿಗಳಿವೆ. ಎಲ್‌ಎಸ್‌ಡಿಯ ಮರಣ ಪ್ರಮಾಣವು 1 ರಿಂದ 2 ಪ್ರತಿಶತ ಮತ್ತು ಮನುಷ್ಯರಿಗೆ ಈ ಸೋಂಕು ತಗುಲುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಇದುವರೆಗೂ 17.92 ಲಕ್ಷ ಜಾನುವಾರುಗಳಿಗೆ ಲಸಿಕೆ

ಇದುವರೆಗೂ 17.92 ಲಕ್ಷ ಜಾನುವಾರುಗಳಿಗೆ ಲಸಿಕೆ

ಪ್ರಸ್ತುತ, ಲಸಿಕೆ ಅಭಿಯಾನ ನಡೆಯುತ್ತಿದೆ ಮತ್ತು ಈ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ 17.92 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

ಮೊದಲ ಹಂತದ ಲಸಿಕೆ ನೀಡಲು ಪಂಜಾಬ್ ಮತ್ತು ಗುಜರಾತ್‌ಗೆ ಕೇಂದ್ರ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಸಲಹೆಗಳು ಮತ್ತು ಜೈವಿಕ ಸುರಕ್ಷತಾ ಕ್ರಮಗಳು, ಚಲನವಲನದ ನಿರ್ಬಂಧ ಮತ್ತು ಸೋಂಕಿತ ಪ್ರಾಣಿಗಳ ಪ್ರತ್ಯೇಕತೆ, ಮೇಲ್ವಿಚಾರಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯಗಳನ್ನು ಕೇಳಲಾಗಿದೆ ಎಂದು ಅಧಿಕಾರಿ ಹೇಳಿದರು.

ಮುದ್ದೆ ಚರ್ಮ ರೋಗದಿಂದ ಪಶುಗಳನ್ನು ರಕ್ಷಿಸಲು ಸಲಹೆಗಳುಮುದ್ದೆ ಚರ್ಮ ರೋಗದಿಂದ ಪಶುಗಳನ್ನು ರಕ್ಷಿಸಲು ಸಲಹೆಗಳು

ರೈತರ ಸಹಾಯಕ್ಕೆ ಟೋಲ್‌ ಫ್ರೀ ಸಂಖ್ಯೆ ಸ್ಥಾಪನೆ

ರೈತರ ಸಹಾಯಕ್ಕೆ ಟೋಲ್‌ ಫ್ರೀ ಸಂಖ್ಯೆ ಸ್ಥಾಪನೆ

ಪ್ರಾಣಿಗಳ ಮಾಲೀಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಜಾಗೃತಿ ಮೂಡಿಸಲು ಸಹಾಯ ಮಾಡಲು ರಾಜ್ಯ ಸರ್ಕಾರಗಳು ನಿಯಂತ್ರಣ ಕೊಠಡಿಗಳನ್ನು, ಟೋಲ್-ಫ್ರೀ ಸಂಖ್ಯೆಗಳನ್ನು ಸ್ಥಾಪಿಸಿವೆ.

ರಾಜ್ಯ ಸರ್ಕಾರಗಳ ಕಳವಳಗಳನ್ನು ಪರಿಹರಿಸಲು ಸಚಿವಾಲಯದಲ್ಲಿ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 19 ನೇ ಜಾನುವಾರು ಗಣತಿಯ ಪ್ರಕಾರ, ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ಭಾರತವು 2019 ರಲ್ಲಿ 192.5 ಮಿಲಿಯನ್ ಜಾನುವಾರು ಜನಸಂಖ್ಯೆಯನ್ನು ಹೊಂದಿತ್ತು.

English summary
Lumpy skin disease (LSD) is a contagious viral disease that affects cattle. Over 1.85 cattle have been affected so far and 7,300 cattle have died due to 'lumpy skin disease' in eight states including one union territory. vaccination drive has been stepped up to contain the infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X