Vande Bharat Sleeper Train: ನವದೆಹಲಿ-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಯಾವಾಗಿನಿಂದ ಆರಂಭ?
ಇದೀಗ ದೇಶಾದ್ಯಂತ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಭಾರೀ ಜನಮನ್ನಣೆ ಪಡೆಯುವ ಮೂಲಕ ಇದರ ಸೇವೆ ವಿಸ್ತರಣೆಯಾಗುತ್ತಲೇ ಇದೆ. ಮತ್ತೊಂದೆಡೆ ಇದೀಗ ಭಾರತೀಯ ರೈಲ್ವೆಯು ವಂದೇ ಭಾರತ್ ಸ್ಲೀಪರ್ ಸೇವೆಯನ್ನು ಒದಗಿಸಲು ನಿರ್ಧರಿಸಿದ್ದು, ಮೂರು ತಿಂಗಳಲ್ಲಿ ಟ್ರ್ಯಾಕ್‌ಗೆ ಇಳಿಯಲಿದೆ ಎಂದು ತಿಳಿದುಬಂದಿದೆ. ಇನ್ನು ನವದೆಹಲಿ-ಮುಂಬೈ ಮಾರ್ಗದಲ್ಲಿ ಯಾವಾಗ ಇದರ ಸೇವೆ ಆರಂಭವಾಗಲಿದೆ ಎಂದು ಇಲ್ಲಿ ತಿಳಿಯಿರಿ.
ವಂದೇ ಭಾರತ್ ಎಕ್ಸ್‌ಪ್ರೆಸ್ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಹಾಗೂ ಹೈ ಸ್ಪೀಡ್ ರೈಲು ಆಗಿದ್ದು, ಈ ಮೂಲಕ ಹೆಚ್ಚೆಚ್ಚು ಪ್ರಯಾಣಿಕರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ. ಇನ್ನೂ ಮುಂದಿನ ಮೂರು ತಿಂಗಳಿನಲ್ಲಿ ಇದರ ಭಾಗವಾದ ವಂದೇ ಭಾರತ್ ಎಸಿ ಸ್ಲೀಪರ್ ಟ್ರ್ಯಾಕ್‌ಗೆ ಇಳಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನವದೆಹಲಿ ಮತ್ತು ಮುಂಬೈ ನಡುವೆ ವಂದೇ ಭಾರತ್ ಸಂಪೂರ್ಣ ಎಸಿ ಸ್ಲೀಪರ್ ರೈಲನ್ನು ಓಡಿಸಿದರೆ, ಕೇವಲ 12 ಗಂಟೆಗಳಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಆಗಮಿಸಲಿದೆ. ನವದೆಹಲಿ ಮತ್ತು ಮುಂಬೈ ನಡುವಿನ ಅಂತರ ಸುಮಾರು 1,334 ಕಿಲೋ ಮೀಟರ್ ಇದೆ. ಇದೀಗ ಈ ಎರಡು ನಿಲ್ದಾಣಗಳ ನಡುವಿನ ಸಂಚಾರ 15ರಿಂದ 20 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ. ಇನ್ನು ಈ ರೈಲು ಏನಾದರೂ ಬಂದರೆ ಸಮಯವನ್ನು ಮತ್ತಷ್ಟು ಉಳಿಸಬಹುದಾಗಿದೆ.
ವಂದೇ ಭಾರತ್ ಸ್ಲೀಪರ್‌ನ ಪರಿಚಯದಿಂದ ಪ್ರಯಾಣದ ಸಮಯ ಕಡಿಮೆಯಾಗಲಿದ್ದು, ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲ ಆದಂತಾಗಲಿದೆ. ಇನ್ನು ಈ ರೈಲು ಗಂಟೆಗೆ 160 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಓಡಲಿದೆ ಎಂದು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಚೇರ್‌ಕಾರ್ ಆವೃತ್ತಿಯು 8 ಕೋಚ್‌ಗಳನ್ನು ಹೊಂದಿದ್ದು, ಒಟ್ಟು 530 ಆಸನಗಳನ್ನು ಹೊಂದಿದೆ. ಇನ್ನು, ಹೊಸ ವಂದೇ ಭಾರತ್ ಸ್ಲೀಪರ್ ಆವೃತ್ತಿಯು 16 ಕೋಚ್‌ಗಳನ್ನು ಹೊಂದಿರುತ್ತದೆ. ಇದರಲ್ಲಿ ಸುಮಾರು 823 ಪ್ರಯಾಣಿಕರು ಪ್ರಯಾಣ ಮಾಡಬಹುದು. ಈ ರೈಲು 800-1,200 ಕಿ.ಮೀಟರ್‌ವರೆಗಿನ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತದೆ ಎನ್ನಲಾಗುತ್ತಿದೆ.
ಇನ್ನು ಈ ರೈಲು ಬರೀ ನವದೆಹಲಿ-ಮುಂಬೈ ಮಾರ್ಗ ಅಲ್ಲದೆ, ದೆಹಲಿ-ಪಾಟ್ನಾ ಮಾರ್ಗದಲ್ಲಿ ಓಡುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಈ ಮಾರ್ಗದ ರೈಲು ರಾಜಧಾನಿ ಎಕ್ಸ್‌ಪ್ರೆಸ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications