Kalaburagi-Mangaluru Flight: ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭ ಯಾವಾಗ?-ಇಲ್ಲಿದೆ ಮಾಹಿತಿ

ಮಂಗಳೂರು, ಫೆಬ್ರವರಿ, 22: ಹೊಸ ಮಾರ್ಗಗಳಿಗೆ ವಿಮಾನ ಸೇವೆಗಳು ಆರಂಭವಾಗುತ್ತಲೇ ಇವೆ. ಇದೀಗ ಶೀಘ್ರದಲ್ಲೇ ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸಂಚಾರ ಆರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಅಧಿಕಾರಿಗಳು ಚರ್ಚೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶೀಘ್ರದಲ್ಲಿ ಕಲಬುರಗಿಯಿಂದ ಮಂಗಳೂರಿಗೆ ವಿಮಾನ ಸೇವೆ ಪ್ರಾರಂಭಗೊಳ್ಳುವುದಾಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ತಿಳಿಸಿದರು. ನವದೆಹಲಿಯಲ್ಲಿ ಫೆಬ್ರವರಿ 20ರಂದು ಲೋಕಸಭಾ ಸದಸ್ಯರ ಕಚೇರಿಯಲ್ಲಿ ಕಲಬುರಗಿ ಜಿಲ್ಲಾ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ.ಸದಾನಂದ ಪೆರ್ಲ ಅವರು ಸಲ್ಲಿಸಿದ ಮನವಿ ಪತ್ರಕ್ಕೆ ಸ್ಪಂದನೆ ನೀಡಿ ಈ ವಿಷಯ ತಿಳಿಸಿದರು.

 When will the flight service start from Kalaburagi to Mangaluru?, know details

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸೌಲಭ್ಯ ಆರಂಭವಾಗಿರುವುದರಿಂದ ಮಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಸೌಲಭ್ಯವನ್ನು ಪ್ರಾರಂಭಿಸಲು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಇಂಡಿಗೋ ಸೇರಿದಂತೆ ಖಾಸಗಿ ವಿಮಾನ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ನಾಗರಿಕ ವಿಮಾನಯಾನ ಖಾತೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ.

ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯಡಿಯಲ್ಲಿ ಪ್ರಾರಂಭಿಸಿದ ವಿಮಾನ ನಿಲ್ದಾಣಗಳಿಗೆ ಹೆಚ್ಚು ಹೆಚ್ಚು ವಿಮಾನಗಳ ಸಂಪರ್ಕ ಸೇವೆ ಹೊಂದಿ ಆ ಭಾಗದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ನಾಗರಿಕ ವಿಮಾನ ಯಾನ ಖಾತೆಯ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಕೂಡ ಆಸಕ್ತರಾಗಿರುವುದು ಉತ್ತಮ ಬೆಳವಣಿಗೆ ಎಂದು ಡಾ.ಜಾಧವ್ ತಿಳಿಸಿದರು.

ತಮ್ಮ 5 ವರ್ಷಗಳ ಅವಧಿಯಲ್ಲಿ ವಿಮಾನ ನಿಲ್ದಾಣದ ಪ್ರಗತಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು, ರಾತ್ರಿ ವಿಮಾನಗಳು ಇಳಿಯುವ ಸೌಲಭ್ಯ ಉತ್ತಮ ಹೆಜ್ಜೆ, ಬೆಂಗಳೂರು -ಕಲಬುರಗಿ ಮಧ್ಯೆ ವಿಮಾನ ಸೇವೆ ಈಗಾಗಲೇ ಆಗಿದ್ದು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ನಗರಗಳಿಗೆ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಉಡಾನ್ ಯೋಜನೆಯಡಿ ಪ್ರಧಾನಮಂತ್ರಿಯವರು ಸಣ್ಣ ಸಣ್ಣ ನಗರಗಳಿಗೂ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯಿಂದ ಸಾಮಾನ್ಯ ಜನರು ಕೂಡ ವಿಮಾನ ಸಂಚಾರದ ಲಾಭವನ್ನು ಪಡೆಯುತ್ತಿರುವುದು ಸಂತಸದ ಸಂಗತಿ. ದೇಶದ ಸಾಮಾನ್ಯ ಜನರು ಕೂಡ ವಿಮಾನದಲ್ಲಿ ಸಂಚರಿಸುವ ಕನಸು ಸಾಕಾರಗೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ತಿಳಿಸಿದರು.

ಇಂದು (ಫೆಬ್ರವರಿ 22) ರಾತ್ರಿ 8 ಗಂಟೆಗೆ ಮೊದಲ ವಿಮಾನ ಬೆಂಗಳೂರಿನಿಂದ ಕಲಬುರಗಿಯಲ್ಲಿ ಬಂದು ಇಳಿಯುವ ಸಂದರ್ಭದಲ್ಲಿ ತಾನು ಖುದ್ದಾಗಿ ಹಾಜರಿದ್ದು, ಶುಭಕೋರುವವನಿದ್ದೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+