Vande Metro: ವಂದೇ ಮೆಟ್ರೋ ಸೇವೆ ಯಾವಾಗಿನಿಂದ ಆರಂಭ? ವಿಶೇಷತೆಗಳೇನು?-ಅಪ್ಡೇಟ್‌ ಮಾಹಿತಿ ಇಲ್ಲಿದೆ

Vande Metro: ಈಗಾಗಲೇ ಐ‍ಷಾರಾಮಿ ವಂದೇ ಭಾರತ್ ರೈಲುಗಳು ದೇಶಾದ್ಯಂತ ಸಂಚಾರಿಸುತ್ತಿವೆ. ಅಲ್ಲದೆ, ಜನಮನ್ನಣೆಯನ್ನು ಪಡೆಯುತ್ತಲೇ ಇವೆ. ಉತ್ತಮ ದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುವುದರಿಂದ ಈ ರೈಲಿನಲ್ಲಿ ಪ್ರಯಾಣ ಮಾಡಲು ಹೆಚ್ಚು ಜನರು ಇಷ್ಟಪಡುತ್ತಾರೆ. ಹಾಗೆಯೇ ಇದೀಗ ಇದೇ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ಇದೇ ಜುಲೈನಲ್ಲಿ ಸಂಚಾರ ಶುರು ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಏನೆಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲು ಜುಲೈನಲ್ಲಿ ಸಂಚಾರ ಶುರು ಮಾಡಲಿದೆ ಎಂದು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಇದು ಮೆಟ್ರೋ ಮಾದರಿಯ ಸೀಟುಗಳನ್ನು ಹೊಂದಿರುವ ರೈಲಾಗಿದ್ದು, 250 ಕಿಲೋ ಮೀಟರ್‌ ಅಂತರದಲ್ಲಿರುವ ನಗರಗಳಿಗೂ ಸಂಚಾರ ಮಾಡಲಿದೆ.

Vande Metro service start on July at India know speciality details

"ಈ ಮೆಟ್ರೋ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತ ಆಗಿದ್ದು, ಗರಿಷ್ಠ 130 ಕಿಲೋ ಮೀಟರ್‌ ವೇಗದಲ್ಲಿ ಸಂಚಾರಚ ಮಾಡಲಿದೆ. ಬೆಂಚ್‌ ಮಾದರಿಯ ಸೀಟಿಂಗ್‌ ಹೊಂದಿರುವ ಇದು ಸ್ವಲ್ಪ ದೂರದ ನಗರಗಳ ನಡುವೆ ಸಂಚರಿಸಲು ತುಂಬಾ ಸಹಾಯಕವಾಗಲಿದೆ. ಮುಂದಿನ 2 ತಿಂಗಳ ಕಾಲ ವಂದೇ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ರೈಲಿನ ಬೋಗೊಗಳು ಪಂಜಾಬ್‌ನ ಕಪುರ್ತಲ ರೈಲ್ವೇ ಕೋಚ್‌ ಕಾರ್ಖಾನೆಯಲ್ಲಿ ನಿರ್ಮಾಣ ಆಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ, ಇದು ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದ್ದು, ಪ್ರತೀ ಬೋಗಿಯಲ್ಲಿ ಬೆಂಕಿಯನ್ನು ಗುರುತಿಸುವ ಸೆನ್ಸರ್‌ಗಳಿವೆ. ಸ್ವಯಂಚಾಲಿತ ಬಾಗಿಲುಗಳು, ಗಾಲಿ ಕುರ್ಚಿ ವ್ಯವಸ್ಥೆ, ಪ್ರತೀ ರೈಲಿನಲ್ಲಿ ಕನಿಷ್ಠ 12 ಬೋಗಿಗಳು, ಗರಿಷ್ಠ 16 ಇರಲಿವೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಯಾಣಿಕರಿಗೆ 500ml ಮಾತ್ರ ಉಚಿತ ನೀರು: ಐಷಾರಾಮಿ, ಹೈಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಮೊದಲಿಗೆ ಭಾರತೀಯ ರೈಲ್ವೆಯಿಂದ 1 ಲೀಟರ್‌ ನೀರಿನ ಬಾಟಲಿಯನ್ನು ಕೊಡಲಾಗುತ್ತಿತ್ತು. ಇದೀಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ನೀರಿನ ಹಾಹಾಕಾರವೂ ಶುರುವಾಗಿದೆ. ಆದ್ದರಿಂದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಹಾಗಾದರೆ ಮಾಹಿತಿ ಇಲ್ಲಿದೆ.

ರಾಜಧಾನಿ, ಶತಾಬ್ದಿ, ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸಿದರೆ, ಪ್ರಯಾಣದ ಸಮಯದಲ್ಲಿ ರೈಲ್ವೆಯು ಪ್ರಯಾಣಿಕರಿಗೆ 1 ಲೀಟರ್ ನೀರಿನ ಬಾಟಲಿ ನೀಡಲಾಗುತ್ತಿತ್ತು. ಇದೀಗ ರೈಲ್ವೇ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ 500 ಮಿಲಿ ಬಾಟಲಿಯನ್ನು ನೀಡಲು ನಿರ್ಧರಿಸಿದೆ.

ರೈಲುಗಳಲ್ಲಿ ಕುಡಿಯುವ ನೀರು ವ್ಯರ್ಥವಾಗುವುದನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಪ್ರತಿ ಪ್ರಯಾಣಿಕರಿಗೆ 500 ಮಿಲಿಯ ಒಂದು ರೈಲ್ ನೀರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಯನ್ನು ನೀಡಲಾಗುವುದು ಎಂದು ರೈಲ್ವೆ ನಿರ್ಧಾರ ಮಾಡಿದೆ.

ಇದೇ ವೇಳೆ ಪ್ರಯಾಣಿಕರಿಗೆ ಬೇಡಿಕೆಯ ಮೇರೆಗೆ 500 ಎಂಎಲ್‌ನ ಮತ್ತೊಂದು ಬಾಟಲ್ ರೈಲ್ ನೀರ್ ಲಭ್ಯ ಇರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದ್ದು, ಇದಕ್ಕೆ ಪ್ರಯಾಣಿಕರಿಂದ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಶುಲ್ಕವಿಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 500 ಮಿಲಿ ಬಾಟಲಿಯನ್ನು ನೀವು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದಾಗಿದೆ.

ವಂದೇ ಭಾರತ್ ಪ್ರಾರಂಭವಾಗಿದ್ದು ಯಾವಾಗ?: 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದು, ಪ್ರಸ್ತುತ ದೇಶದ 40ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 15, 2019ರಂದು, ನವದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಪ್ರಧಾನಿ ಮೋದಿ ಅವರು ಮೊದಲ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು. ಈ ರೈಲುಗಳು ಅತೀ ವೇಗದಲ್ಲಿ ಚಲಿಸುತ್ತವೆ ಮತ್ತು ವೈಫೈ ಸಂಪರ್ಕ ಸೇರಿದಂತೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+