Vande Bharat Express: ಭಾರದಲ್ಲಿ ಶೀಘ್ರವೇ ಸಂಚರಿಸಲಿದೆ "ವಂದೇ ಮೆಟ್ರೋ", ವೇಗದ ವಿವರ ಇಲ್ಲಿದೆ

ನವದೆಹಲಿ, ಏಪ್ರಿಲ್‌, 30: ಈಗಾಗಲೇ ದೇಶದ ಹಲವೆಡೆ ವಂದೇ ಭಾರತ್‌ ರೈಲಿನ ಸಂಚಾರ ಆರಂಭವಾಗಿದ್ದು, ಇದು ದಿನದಿಂದ ದಿನಕ್ಕೆ ಜನಮನ್ನಣೆಯನ್ನು ಪಡೆಯುತ್ತಲೇ ಇದೆ. ಮತ್ತೊಂದೆಡೆ ಇದೀಗ ವಂದೇ ಭಾರತೀಯ ರೈಲ್ವೆಯು ಶೀಘ್ರದಲ್ಲೇ ವಂದೇ ಮೆಟ್ರೋವನ್ನು ಪ್ರಾರಂಭಿಸಲಿದೆ. ಈ "ವಂದೇ ಮೆಟ್ರೋ" 100 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಎರಡು ನಗರಗಳನ್ನು ಸಂಪರ್ಕಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತೀಯ ರೈಲ್ವೆಯ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, 2023ರ ಡಿಸೆಂಬರ್‌ ವೇಳೆಗೆ ಈ "ವಂದೇ ಮೆಟ್ರೋ" ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಇದು ಒಂದು ನಗರದಿಂದ ಮತ್ತೊಂದು ನಗರಕ್ಕೆ ಹೋಗುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ.
ಈ ಮೆಟ್ರೋ ಪ್ರಯಾಣಿಕರಿಗೆ ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ನೀಡಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

Vande Bharat Express: Vande Metro will be run in India soon, Know speed details

ವಂದೇ ಮೆಟ್ರೋ ವೇಗದ ವಿವರ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೆಲವು ದಿನಗಳ ಹಿಂದೆ ಈ ರೈಲಿನ ಬಗ್ಗೆ ಮಾಹಿತಿ ನೀಡಿದ್ದು, 100 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ನಗರಗಳ ನಡುವೆ ಈ ರೈಲು ಸೇವೆ ಆರಂಭಿಸಲಿದೆ. ಒಂದು ದಿನದಲ್ಲಿ ನಾಲ್ಕರಿಂದ ಐದು ಟ್ರಿಪ್‌ಗಳ ಮೂಲಕ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ.

ಅಷ್ಟೇ ಅಲ್ಲದೆ ಇದರ ವೇಗವು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಹೆಚ್ಚಾಗಿರುತ್ತದೆ. ಹಾಗೆಯೆ ಇದರ ಟಿಕೆಟ್ ದರಗಳು ಇತರ ರೈಲುಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಇದರಿಂದ ಪ್ರಯಾಣಿಕರು ವೇಗವಾಗಿ ಮತ್ತು ಅಗ್ಗದ ದರದಲ್ಲಿ ಪ್ರಯಾಣ ಮಾಡಬಹುದಾಗಿರುತ್ತದೆ.
ವಂದೇ ಮೆಟ್ರೋ ಎಂಟು ಬೋಗಿಗಳನ್ನು ಹೊಂದಿರಲಿದ್ದು, ಇದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಚಿಕ್ಕದಾಗಿರಲಿದೆ.

ಇನ್ನು "ನಾವು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ದೊಡ್ಡ ನಗರಗಳ ಸುತ್ತಲೂ ಪ್ರಯಾಣ ಬೆಳೆಸುವವರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಅದಕ್ಕಾಗಿ ನಾವು ವಂದೇ ಭಾರತ್‌ ರೈಲಿಗೆ ಸಮಾನವಾದ ವಂದೇ ಮೆಟ್ರೋವನ್ನು ತರುತ್ತಿದ್ದೇವೆ. ಈ ವರ್ಷ ವಿನ್ಯಾಸ ಮತ್ತು ಉತ್ಪಾದನೆ ಪೂರ್ಣಗೊಳ್ಳಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ರೈಲಿನ ಉತ್ಪಾದನೆಯ ವೇಗವನ್ನು ಹೆಚ್ಚಿಸಲಾಗುವುದು," ಎಂದು ಇತ್ತೀಚೆಗಷ್ಟೆ ರೈಲ್ವೆ ಸಚಿವರು ಮಾಹಿತಿ ನೀಡಿದ್ದರು.

"ವಂದೇ ಮೆಟ್ರೋ"ದ ವಿಶೇಷತೆಗಳೇನು?

1. ಹಾಗೆಯೇ ವೇಗದ ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.

2. ಈ ರೈಲುಗಳು ಎಂಟು ಕೋಚ್‌ಗಳನ್ನು ಹೊಂದಿದ್ದು, ಮೆಟ್ರೋ ರೈಲಿನಂತೆ ಇರಲಿವೆ.

3. ವಂದೇ ಭಾರತ್ ಮೆಟ್ರೋ ಪ್ರಯಾಣಿಕರು ಇದರಲ್ಲಿ ಸುಖಕರ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿದೆ.

4. ಜನರು ತಮ್ಮ ಊರುಗಳಿಂದ ದೊಡ್ಡ ನಗರಗಳಲ್ಲಿನ ಕಚೇರಿಗಳಿಗೆ ಆರಾಮವಾಗಿ ಪ್ರಯಾಣಿಸಲು ಸಹಾಯ ಮಾಡಲು ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

5. ರೈಲ್ವೇ ಸಚಿವಾಲಯವು ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಲಕ್ನೋ ಮೂಲದ ಆರ್‌ಡಿಎಸ್‌ಒ ಜನರಲ್ ಮ್ಯಾನೇಜರ್‌ಗಳಿಗೆ ಎಂಟು ಬೋಗಿಗಳ ವಂದೇ ಭಾರತ್ ರೈಲುಗಳನ್ನು ಶೀಘ್ರವಾಗಿ ಹೊರತರುವಂತೆ ನಿರ್ದೇಶಿಸಿದೆ.

ಒಟ್ಟಾರೆಯಾಗಿ ಈಗಾಗಲೇ ದೇಶದಲ್ಲಿ ವಂದೇ ಭಾರತ್‌ ರೈಲಿನ ಸದ್ದು ಜೋರಾಗಿಯೇ ಇದೆ. ಇದೀಗ ರೈಲ್ವೇ ಇಲಾಖೆ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ದೊಡ್ಡ ನಗರಗಳ ಸುತ್ತಮುತ್ತ ಜನರ ಅನೂಕೂಲಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಿನಿ ಆವೃತ್ತಿಯಾದ "ವಂದೇ ಮೆಟ್ರೋ"ವನ್ನು ಬಿಡಲು ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+