ಜಮ್ಮು ಮತ್ತು ಕಾಶ್ಮೀರ: ಶೀಘ್ರದಲ್ಲೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಮೇಲೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ
ನವದೆಹಲಿ, ಮಾರ್ಚ್, 27: ಭಾರತೀಯ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದ ಹೊಸ ರೈಲು ಮಾರ್ಗದಲ್ಲಿ ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ವಂದೇ ಮೆಟ್ರೋವನ್ನು ಓಡಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ ಸಂಪೂರ್ಣವಾಗಿ ಮುಗಿದ ನಂತರ ಜಮ್ಮು ಮತ್ತು ಶ್ರೀನಗರದಲ್ಲಿ ವಂದೇ ಮೆಟ್ರೋ ಸೇವೆಯನ್ನು ಆರಂಭಿಸಲಾಗುತ್ತದೆ. ನಂತರ ಚೆನಾಬ್ ನದಿ ಸೇತುವೆಯ ನಿರ್ಮಾಣದ ಸ್ಥಳದಿಂದ ಸಂರ್ಪರ್ಕ ಕಲ್ಪಿಸಲಾಗುತ್ತದೆ. ಈ ಯೋಜನೆಯು ಡಿಸೆಂಬರ್ 2023 ಅಥವಾ ಜನವರಿ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ ಅಂತಾ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಅಲ್ಲದೆ, ಈ ರೈಲು ಮಾರ್ಗವು ಕಾರ್ಯರೂಪಕ್ಕೆ ಬಂದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಓಡಿಸಲಾಗುತ್ತದೆ. ವಂದೇ ಭಾರತ್ ರೈಲುಗಳ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ನಲ್ಲಿ ನಿರ್ವಹಣಾ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತದೆ. ಹೆಚ್ಚುವರಿಯಾಗಿ ಶೀಘ್ರದಲ್ಲೇ ಚೆನಾಬ್ ಸೇತುವೆಯ ವಿದ್ಯುದ್ದೀಕರಣ ಮಾಡಲಾಗುತ್ತದೆ. ಮತ್ತು ಇದು ಸ್ಥಳೀಯ ಕವಾಚ್ ವಿರೋಧಿ ಘರ್ಷಣೆ ವ್ಯವಸ್ಥೆಯನ್ನು ಸಹ ಹೊಂದಿದೆ.
ರೈಲು ಹಳಿಗಳ ಪರಿಶೀಲನೆ
ಚೆನಾಬ್ ನದಿ ಸೇತುವೆಯು ಜಾಗತಿಕವಾಗಿ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದು ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿದೆ. ಇತ್ತೀಚೆಗೆ ಸೇತುವೆಯ ಮೇಲೆ ಟ್ರ್ಯಾಕ್ ಹಾಕುವ ಪ್ರಕ್ರಿಯೆಯು ಯಶಸ್ವಿಯಾಗಿ ನೆರವೇರಿದ್ದು, ರೈಲ್ವೇ ಸಚಿವರು ರೈಲು ಹಳಿಗಳನ್ನು ಟ್ರ್ಯಾಕ್ ಮೌಂಟೆಡ್ ವಾಹನದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಕತ್ರಾದಿಂದ ಬನಿಹಾಲ್‌ವರೆಗಿನ 111 ಕಿಮೀ ದೂರದಲ್ಲಿ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ 1.3 ಕಿಲೋಮೀಟರ್ ಉದ್ದದ ಸೇತುವೆಯು ಅಪಾರ ಮಹತ್ವವನ್ನು ಪಡೆದುಕೊಂಡಿದೆ. ಚೆನಾಬ್ ಸೇತುವೆ ಯೋಜನೆಗಳನ್ನು ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಅಂದಾಜು 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಮತ್ತು 266 ಕಿಮೀ ವೇಗದ ಗಾಳಿಯ ವೇಗವನ್ನು ತಡೆದುಕೊಳ್ಳಲು ಸ್ಫೋಟ-ನಿರೋಧಕವನ್ನು ನಿರ್ಮಿಸಲಾಗಿದೆ.
ವಂದೇ ಭಾರತ್ ರೈಲು ಸಂಚಾರದ ವಿಡಿಯೋ ವೈರಲ್
ಹಾಗೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಿನದಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಲೇ ಇದೆ. ಇದು ಹೈಸ್ಪೀಡ್ ರೈಲಾಗಿದ್ದು, ಭಾರಿ ಜನಮನ್ನಣೆಯನ್ನೂ ಪಡೆದಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲು ವೇಗವಾಗಿ ಚಲಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲೇ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಇದು ಭಾರತೀಯ ರೈಲ್ವೇಯಿಂದ ಇದು ಪ್ರಾರಂಭವಾಗಿದೆ. ಆಗಿನಿಂದ ಈ ರೈಲು ಭಾರತದಲ್ಲಿ ಪ್ರಸಿದ್ಧಿ ಎನ್ನುವ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ. ಅದೇ ರೀತಿ ಭಾರತೀಯ ಭೂದೃಶ್ಯದ ಉದ್ದ ಮತ್ತು ಅಗಲದಲ್ಲಿ ಹಾದುಹೋಗುವ ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನೋಡಲು ಸಾಮಾನ್ಯ ಜನರು ಸಾಕಷ್ಟು ಕಾತರದಿಂದ ಕಾಯುತ್ತಿರುತ್ತಾರೆ.
ಆದ್ದರಿಂದ ಭಾರತೀಯ ರೈಲ್ವೆಯ ವಿಭಾಗವಾದ ದಕ್ಷಿಣ ರೈಲ್ವೆಯು ಚೆನ್ನೈ-ಮೈಸೂರು ಮಾರ್ಗದ ನಡುವೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸುಂದರವಾದ ವೀಡಿಯೊವನ್ನು ಹಂಚಿಕೊಂಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಜನರು ಇದಕ್ಕೆ ಭಾರಿ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.
ಚೆನ್ನೈ-ಮೈಸೂರು ಮಾರ್ಗದ ಮಧ್ಯೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಡಿಯೋವನ್ನು ದಕ್ಷಿಣ ರೈಲ್ವೆಯು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇದು 130 kmph ವೇಗದಲ್ಲಿ ಕಾರ್ಯಾಚರಣೆ ಮಾಡುತ್ತದೆ. ಈ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುವ ದೃಶ್ಯವನ್ನು ನೋಡಲು ಹಲವಾರು ಜನರು ಕಾಯುತ್ತಿದ್ದರು. ಇದೀಗ ರೈಲ್ವೆ ಇಲಾಖೆ ಹಂಚಿಕೊಂಡ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications