Vande Bharat Express: ಶೀಘ್ರದಲ್ಲೇ ಬೆಂಗಳೂರು, ಮುಂಬೈ, ಹೈದರಾಬಾದ್ ನಡುವೆ ಸಂಚಾರ: ವಿ.ಸೋಮಣ್ಣ
ಬೆಂಗಳೂರು, ಮಾರ್ಚ್, 31: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದಿನದಿಂದ ದಿನಕ್ಕೆ ಜನಮನ್ನಣೆಯನ್ನು ಪಡೆಯುತ್ತಲೇ ಇದೆ. ಈಗಾಗಲೇ ಈ ರೈಲು ದೇಶದ ಹಲವಾರು ಭಾಗಗಳಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯೂ ಕೂಡ ಹೆಚ್ಚುತ್ತಲೇ ಇದೆ. ಇದೀಗ ಬೆಂಗಳೂರು-ಹೈದರಾಬಾದ್ & ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಶೀಘ್ರದಲ್ಲೇ ಓಡಲಿದೆ ಎಂದು ಎಂದು ವಸತಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಮುಂಬೈ, ಹೈದರಾಬಾದ್ ನಡುವೆ ಸಂಚಾರ
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ್ದು, ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಆರಂಭವಾಗಿದೆ. ಇದೇ ರೀತಿಯಲ್ಲಿ ಬೆಂಗಳೂರು-ಮುಂಬೈ ಮತ್ತು ಹೈದರಾಬಾದ್ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.

ಮುಂಬೈ -ಹೈದರಾಬಾದ್ ನಡುವೆ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಕಾರ್ಯದರ್ಶಿಗೆ ರಾಜ್ಯ ಸರ್ಕಾರ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ರೈಲು ಸಂಚಾರದಿಂದ ಜನತೆಗೆ ತುಂಬಾ ಅನುಕೂಲ ಆಗಲಿದೆ ಎಂದರು.
ಜನಮನ್ನಣೆ ಪಡೆದ "ವಂದೇ ಭಾರತ್"
ಇನ್ನು ಇದು ಹೈಸ್ಪೀಡ್ ರೈಲಾಗಿದ್ದು, ಭಾರಿ ಜನಮನ್ನಣೆಯನ್ನೂ ಪಡೆದಿದೆ. ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ರೈಲು ವೇಗವಾಗಿ ಚಲಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲೇ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಇದು ಭಾರತೀಯ ರೈಲ್ವೇಯಿಂದ ಇದು ಪ್ರಾರಂಭವಾಗಿದೆ. ಆಗಿನಿಂದ ಈ ರೈಲು ಭಾರತದಲ್ಲಿ ಪ್ರಸಿದ್ಧಿ ಎನ್ನುವ ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದೆ. ಅದೇ ರೀತಿ ಭಾರತೀಯ ಭೂದೃಶ್ಯದ ಉದ್ದ ಮತ್ತು ಅಗಲದಲ್ಲಿ ಹಾದುಹೋಗುವ ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನೋಡಲು ಸಾಮಾನ್ಯ ಜನರು ಸಾಕಷ್ಟು ಕಾತರದಿಂದ ಕಾಯುತ್ತಿರುತ್ತಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವಿಡಿಯೋ ವೈರಲ್ ಆದ್ದರಿಂದ ಭಾರತೀಯ ರೈಲ್ವೆಯ ವಿಭಾಗವಾದ ದಕ್ಷಿಣ ರೈಲ್ವೆಯು ಚೆನ್ನೈ-ಮೈಸೂರು ಮಾರ್ಗದ ನಡುವೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸುಂದರವಾದ ವೀಡಿಯೊವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಜನರು ಇದಕ್ಕೆ ಭಾರಿ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.
ಚೆನ್ನೈ-ಮೈಸೂರು ಮಾರ್ಗದಲ್ಲಿ ಸಂಚಾರ ಚೆನ್ನೈ-ಮೈಸೂರು ಮಾರ್ಗದ ಮಧ್ಯೆ ಚಲಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಡಿಯೋವನ್ನು ದಕ್ಷಿಣ ರೈಲ್ವೆಯು ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇದು 130 kmph ವೇಗದಲ್ಲಿ ಕಾರ್ಯಾಚರಣೆ ಮಾಡುತ್ತದೆ. ಈ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಮಾಡುವ ದೃಶ್ಯವನ್ನು ನೋಡಲು ಹಲವಾರು ಜನರು ಕಾಯುತ್ತಿದ್ದರು. ಇದೀಗ ರೈಲ್ವೆ ಇಲಾಖೆ ಹಂಚಿಕೊಂಡ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯಿಂದ ಆರಂಭವಾದ ಎಲೆಕ್ಟ್ರಿಕ್ ಮಲ್ಟಿಪಲ್-ಯೂನಿಟ್, ಅರೆ-ಹೈ-ಸ್ಪೀಡ್ ಇಂಟರ್‌ಸಿಟಿ ರೈಲಾಗಿದೆ. ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯನ್ನು 220 kmph ವೇಗದಲ್ಲಿ ಭಾರತೀಯ ರೈಲ್ವೆ ಅಭಿವೃದ್ಧಿಪಡಿಸುತ್ತಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ Wi-Fi ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ಹಿಂದಿನ ಆವೃತ್ತಿಯಲ್ಲಿದ್ದ 24 ಇಂಚಿನ ಸ್ಕ್ರೀನ್‌ಗಳಿಗೆ ಹೋಲಿಸಿದರೆ, ಈಗಿನ ಪ್ರತಿ ಕೋಚ್‌ನಲ್ಲಿ 32-ಇಂಚಿನ ಸ್ಕ್ರೀನ್‌ಗಳು ಪ್ರಯಾಣಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತದೆ. ಈ ಮೂಲಕ ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ಪರಿಸರ ಸ್ನೇಹಿಯಾಗಿದೆ.












Click it and Unblock the Notifications