Vande Bharat Express: 2024ರಲ್ಲಿ ಟ್ರ್ಯಾಕ್‌ಗಿಳಿದ ಹೊಸ ವಂದೇ ಭಾರತ್ ರೈಲುಗಳಿವು, ಮಾರ್ಗಗಳು, ವೇಳಾಪಟ್ಟಿ, ದರಗಳ ವಿವರ

ವಂದೇ ಭಾರತ್‌ ರೈಲು ಪ್ರಯಾಣಿಕರಿಗೆ ಐ‍ಷಾರಾಮಿ ಸೌಲಭ್ಯಗಳನ್ನು ಒದಗಿಸುವ ಮೂಲಕ ತುಂಬಾ ಪ್ರಸಿದ್ಧಿ ಪಡೆಯುತ್ತಲೇ ಇದೆ. ಇದೀಗ ಈ ರೈಲು ಸೇವೆಗಳು ರಾಷ್ಟ್ರವ್ಯಾಪಿ ಕಾರ್ಯನಿರ್ವಹಿಸುತ್ತಿದ್ದು, ಬ್ರಾಡ್ ಗೇಜ್ ಎಲೆಕ್ಟ್ರಿಫೈಡ್ ನೆಟ್‌ವರ್ಕ್‌ಗಳೊಂದಿಗೆ ದೇಶಾದ್ಯಂತದ ಸ್ಥಳಗಳನ್ನು ಸಂಪರ್ಕಿಸುತ್ತದೆ. ಹಾಗಾದರೆ 2024ರಲ್ಲಿ ಹೊಸದಾಗಿ ಯಾವೆಲ್ಲ ಮಾರ್ಗಗಳಲ್ಲಿ ಈ ರೈಲು ಸೇವೆ ಆರಂಭವಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಫೆಬ್ರವರಿ 2019ರಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾಗಿದ್ದು, ಅವುಗಳ ಸಂಖ್ಯೆಯು ಸೆಮಿ-ಹೈ-ಸ್ಪೀಡ್ ರೈಲುಗಳು ಸೇರಿ ಸ್ಥಿರವಾಗಿ 82ಕ್ಕೆ ಏರಿದೆ. 2024ರಲ್ಲಿ ಭಾರತದಾದ್ಯಂತ ಸುಮಾರು 60 ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ಯೋಜನೆಗಳು ನಡೆಯುತ್ತಿವೆ. ಭಾರತೀಯ ರೈಲ್ವೇಯು ಸೀಮಿತ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆಗಳನ್ನು ಪರಿಚಯಿಸಲು ಮುಂದಾಗಿದೆ.

Vande Bharat Express: 2024s New Vande Bharat Trains, Know routes, schedule, fares Details

2024ರಲ್ಲಿ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ 8 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಇಲ್ಲಿಯವರೆಗೆ ಪ್ರಾರಂಭಿಸಲಾಗಿದೆ. ಹಾಗಾದರೆ ಈ ರೈಲು ಯಾವ್ಯಾವ ಮಾರ್ಗಗಳಲ್ಲಿ ಸಾಗುತ್ತವೆ, ಸಮಯಗಳು, ಕೋಚ್‌ಗಳ ಸಂಖ್ಯೆಯ ವಿವರಗಳನ್ನು ಇಲ್ಲಿ ಗಮನಿಸಿ.

1. ನಾಗರಕೋಯಿಲ್-ಚೆನ್ನೈ

ನಾಗರ್‌ಕೋಯಿಲ್-ಚೆನ್ನೈ ವಂದೇ ಭಾರತ್ ವಿಶೇಷ ರೈಲು ಜನವರಿ 4, 2024ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಇದು ಮಾರ್ಚ್ 29, 2024ರವರೆಗೆ ಚಲಿಸುತ್ತದೆ. ನಾಗರ್‌ಕೋಯಿಲ್ ಮತ್ತು ಚೆನ್ನೈ ನಡುವೆ 724 ಕಿಲೋ ಮೀಟರ್‌ ದೂರವನ್ನು ಎಂಟು ಗಂಟೆ 55 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ರೈಲು ವಾರಕ್ಕೊಮ್ಮೆ ಗುರುವಾರ ಕಾರ್ಯನಿರ್ವಹಿಸುತ್ತದೆ.

* ನಾಗರಕೋಯಿಲ್ ಜಂಕ್ಷನ್‌ನಿಂದ ನಿರ್ಗಮನ: ಮಧ್ಯಾಹ್ನ 2:50
* ಚೆನ್ನೈನ ಎಗ್ಮೋರ್‌ಗೆ ಆಗಮನ: ರಾತ್ರಿ 11:45
* ಚೆನ್ನೈ ಎಗ್ಮೋರ್‌ನಿಂದ ನಿರ್ಗಮನ: ಬೆಳಗ್ಗೆ 5:15
* ನಾಗರಕೋಯಿಲ್‌ನಿಂದ ಜಂಕ್ಷನ್‌ಗೆ ಆಗಮನ: ಮಧ್ಯಾಹ್ನ 2:10
* ನಿಲುಗಡೆ: ಮಧುರೈ, ತಿರುಚಿರಾಪಳ್ಳಿ, ದಿಂಡಿಗಲ್ ಮತ್ತು ತಿರುನೆಲ್ವೇಲಿ.
* ಟಿಕೆಟ್‌ ದರ: 1,605 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
* ಕೋಚ್‌ಗಳ ಸಂಖ್ಯೆ: 8

2. ಅಮೃತಸರ-ನವದೆಹಲಿ

ಅಮೃತಸರ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 6, 2024ರಂದು ಅಮೃತಸರ ಜಂಕ್ಷನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಮೃತಸರವನ್ನು ಹಳೆಯ ದೆಹಲಿ ಜಂಕ್ಷನ್‌ನೊಂದಿಗೆ ಸಂಪರ್ಕಿಸುತ್ತದೆ. ಇದು ಶುಕ್ರವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. 447 ಕಿ.ಮೀ ದೂರವನ್ನು ಕ್ರಮಿಸುವ ಈ ರೈಲು 5 ಗಂಟೆ 30 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

* ಅಮೃತಸರ ಜಂಕ್ಷನ್‌ನಿಂದ ನಿರ್ಗಮನ: ಬೆಳಗ್ಗೆ 8:20
* ನವದೆಹಲಿ ಜಂಕ್ಷನ್‌ಗೆ ಆಗಮನ: ಮಧ್ಯಾಹ್ನ 1:50
* ನವದೆಹಲಿ ಜಂಕ್ಷನ್‌ನಿಂದ ನಿರ್ಗಮನ: ಮಧ್ಯಾಹ್ನ 3:15
* ಅಮೃತಸರ ಜಂಕ್ಷನ್‌ಗೆ ಆಗಮನ: ರಾತ್ರಿ 8:45
* ನಿಲುಗಡೆ: ಅಂಬಾಲಾ ಕ್ಯಾಂಟ್ ಅನ್ನು ಒಳಗೊಂಡಂತೆ ಲುಧಿಯಾನ ಜಂಕ್ಷನ್, ಫಗ್ವಾರಾ ಜಂಕ್ಷನ್, ಜಲಂಧರ್ ಕಂಟೋನ್ಮೆಂಟ್‌ನಲ್ಲಿ ನಿಲುಗಡೆಯಾಲಿದೆ.
* ಟಿಕೆಟ್‌ ದರ 1,280 ರೂಪಾಯಿನಿಂದ ಪ್ರಾರಂಭವಾಗುತ್ತದೆ.
* ಕೋಚ್‌ಗಳ ಸಂಖ್ಯೆ: 8

3. ಜಲ್ನಾ-ಮುಂಬೈ CSMT

ಜಲ್ನಾ-ಮುಂಬೈ CSMT ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 2, 2024ರಂದು ಜಲ್ನಾದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಜಲ್ನಾವನ್ನು ಮುಂಬೈನೊಂದಿಗೆ ಸಂಪರ್ಕಿಸುತ್ತಿದ್ದು, ಇದು ಬುಧವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. 433 ಕಿಲೋ ಮೀಟರ್‌ ದೂರವನ್ನು ಕ್ರಮಿಸುವ ಇದು 6 ಗಂಟೆ 50 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

* ಜಲ್ನಾದಿಂದ ನಿರ್ಗಮನ: ಬೆಳಗ್ಗೆ 5:05
* ಮುಂಬೈ CSMT ಗೆ ಆಗಮನ: ಬೆಳಗ್ಗೆ 11:55
* ಮುಂಬೈ CSMT ಯಿಂದ ನಿರ್ಗಮನ: ಮಧ್ಯಾಹ್ನ 1:10
* ಜಲ್ನಾಗೆ ಆಗಮನ: ರಾತ್ರಿ 8:30
* ನಿಲುಗಡೆ: ಔರಂಗಾಬಾದ್, ನಾಸಿಕ್ ರಸ್ತೆ, ಕಲ್ಯಾಣ್ ಜಂಕ್ಷನ್ ಮತ್ತು ಥಾಣೆಗಳಲ್ಲಿ ನಿಲಿಗಡೆಯಾಗಲಿದೆ.
* ಟಿಕೆಟ್‌ ದರ 1,120 ರೂಪಾಯಿನಿಂದ ಆರಂಭವಾಗುತ್ತದೆ.
* ಕೋಚ್‌ಗಳ ಸಂಖ್ಯೆ: 8

4. ಕೊಯಮತ್ತೂರು-ಬೆಂಗಳೂರು

ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 1, 2024ರಂದು ಕೊಯಮತ್ತೂರು ಜಂಕ್ಷನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕೊಯಮತ್ತೂರು ಅನ್ನು ಬೆಂಗಳೂರು ಕ್ಯಾಂಟ್‌ನೊಂದಿಗೆ ಸಂಪರ್ಕಿಸುತ್ತದೆ. ಇದು ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. 374 ಕಿಲೋ ಮೀಟರ್‌ ದೂರವನ್ನು ಕ್ರಮಿಸುವ ಇದು 6 ಗಂಟೆ 30 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

* ಕೊಯಮತ್ತೂರು ಜಂಕ್ಷನ್‌ನಿಂದ ನಿರ್ಗಮನ: ಬೆಳಗ್ಗೆ 5:00
* ಬೆಂಗಳೂರು ಕ್ಯಾಂಟ್‌ಗೆ ಆಗಮನ: ಬೆಳಗ್ಗೆ 11:30
* ಬೆಂಗಳೂರು ಕ್ಯಾಂಟ್‌ನಿಂದ ನಿರ್ಗಮನ: ಮಧ್ಯಾಹ್ನ 1:40
* ಕೊಯಮತ್ತೂರು ಜಂಕ್ಷನ್‌ಗೆ ಆಗಮನ: ರಾತ್ರಿ 8:00
* ನಿಲುಗಡೆ: ಹೊಸೂರು, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್ ಮತ್ತು ತಿರುಪ್ಪೂರ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
* ಟಿಕೆಟ್‌ ದರ 1,025 ರೂಪಾಯಿನಿಂದ ಆರಂಭವಾಗುತ್ತದೆ.
* ಕೋಚ್‌ಗಳ ಸಂಖ್ಯೆ: 8

5. ಕತ್ರಾ-ನವದೆಹಲಿ

ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 4, 2024ರಂದು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾದಿಂದ (SMVD ಕತ್ರಾ) ಕಾರ್ಯಾಚರಣೆಯನ್ನು ಪ್ರಾರಂಭಿಸಿತು. SMVD ಕತ್ರಾವನ್ನು ನವದೆಹಲಿ ರೈಲು ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ, ಇದು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. 655 ಕಿ.ಮೀ ದೂರವನ್ನು ಕ್ರಮಿಸುವ ಇದು 8 ಗಂಟೆ 10 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ.

* SMVD ಕತ್ರಾದಿಂದ ನಿರ್ಗಮನ: ಬೆಳಗ್ಗೆ 5:50
* ನವದೆಹಲಿಗೆ ಆಗಮನ: ಮಧ್ಯಾಹ್ನ 2:00
* ನವದೆಹಲಿಯಿಂದ ನಿರ್ಗಮನ: ಮಧ್ಯಾಹ್ನ 3:00
* SMVD ಕತ್ರಾ ಆಗಮನ: ರಾತ್ರಿ 11:15
* ನಿಲುಗಡೆ: ಜಮ್ಮು, ಲುಧಿಯಾನ ಮತ್ತು ಅಂಬಾಲಾ ಕ್ಯಾಂಟ್‌ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
* ಟಿಕೆಟ್‌ಗಳ ದರ 1,610 ರೂಪಾಯಿನಿಂದ ಪ್ರಾರಂಭವಾಗಲಿದೆ.
* ಕೋಚ್‌ಗಳ ಸಂಖ್ಯೆ: 16

6. ಅಯೋಧ್ಯೆ-ಆನಂದ ವಿಹಾರ್ ಟರ್ಮಿನಲ್

ಅಯೋಧ್ಯೆ-ಆನಂದ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಜನವರಿ 4, 2024ರಂದು ಅಯೋಧ್ಯೆ ಜಂಕ್ಷನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಯೋಧ್ಯೆಯನ್ನು ನವದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನೊಂದಿಗೆ ಸಂಪರ್ಕಿಸುತ್ತದೆ. ಇದು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ರೈಲು 8 ಗಂಟೆ 20 ನಿಮಿಷಗಳಲ್ಲಿ 628 ಕಿಲೋ ಮೀಟರ್‌ ದೂರ ಕ್ರಮಿಸುತ್ತದೆ.

* ಅಯೋಧ್ಯೆ ಕ್ಯಾಂಟ್‌ನಿಂದ ನಿರ್ಗಮನ: ಮಧ್ಯಾಹ್ನ 3:20
* ಆನಂದ್ ವಿಹಾರ್ ಟರ್ಮಿನಲ್‌ಗೆ ಆಗಮನ: ರಾತ್ರಿ 11:40
* ಆನಂದ್ ವಿಹಾರ್ ಟರ್ಮಿನಲ್‌ನಿಂದ ನಿರ್ಗಮನ: ಬೆಳಗ್ಗೆ 6:10
* ಅಯೋಧ್ಯೆ ಕ್ಯಾಂಟ್‌ಗೆ ಆಗಮನ: ಮಧ್ಯಾಹ್ನ 2:30
* ನಿಲುಗಡೆ: ಚಾರ್ಬಾಗ್ ರೈಲು ನಿಲ್ದಾಣ ಮತ್ತು ಕಾನ್ಪುರ ಸೆಂಟ್ರಲ್‌ನಲ್ಲಿ ನಿಲಿಗಡೆಯಾಗಲಿದೆ.
* ಟಿಕೆಟ್‌ ದರ 1,570 ರೂಪಾಯಿನಿಂದ ಪ್ರಾರಂಭವಾಗುತ್ತದೆ.
* ಕೋಚ್‌ಗಳ ಸಂಖ್ಯೆ: 8

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+