Summer tour: ಬೇಸಿಗೆಯಲ್ಲಿ ಕಾಶ್ಮೀರಕ್ಕೆ ಪ್ರವಾಸ ಬೆಳೆಸುವವರಿಗೆ ಸಿಹಿಸುದ್ದಿ ನೀಡಿದ IRCTC, ದಿನಾಂಕ, ದರಗಳನ್ನು ತಿಳಿಯಿರಿ
ನವದೆಹಲಿ, ಏಪ್ರಿಲ್, 23: ಭಾರತೀಯ ರೈಲ್ವೆಯ ವಿಭಾಗವಾದ ಐಆರ್‌ಸಿಟಿಸಿಯು ನಿಮ್ಮ ಬೇಸಿಗೆ ರಜೆಯನ್ನು ಆನಂದಿಸಲು ಹಾಗೂ ತಂಪಾದ ವಾತವರಣವುಳ್ಳ ತಾಣಗಳಿಗೆ ಪ್ರವಾಸ ಕೈಗೊಳ್ಳುವವರಿಗೆ ಉತ್ತಮ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಹಾಗಾದರೆ ಈ ಪ್ರವಾಸ ಎಷ್ಟು ದಿನ, ಎಲ್ಲಿಗೆ ಎನ್ನುವ ಮಾಹಿತಿಯ ಜೊತೆಗೆ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದರಿಂದ ಜನರು ಸೂಕ್ತ ತಂಪಾದ ತಾಣಗಳಿಗೆ ಹೋಗಲು ಬಯಸಿರುತ್ತಾರೆ. ಆದ್ದರಿಂದ ಕೈಗೆಟುಕುವ ದರದಲ್ಲಿ ಅದರಲ್ಲೂ ಬೇಸಿಗೆಯಲ್ಲಿ ಮೈಮನ ತಣಿಸಿಕೊಳ್ಳಲು ಐಆರ್‌ಸಿಟಿಸಿಯು (IRCTC) ಕಾಶ್ಮೀರ ಟೂರ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.

ಇಲ್ಲಿನ ಪ್ರವಾಸಿ ತಾಣಗಳು ಸ್ವಿಡ್ಜರ್ಲೆಂಡ್‌ನಂತಹ ಅನುಭವ ನೀಡಲಿದ್ದು, ಹಾಗೆಯೆ ಇಲ್ಲಿನ ಅದ್ಭುತ ಭೂದೃಶ್ಯಗಳು ಅಸಾಧಾರಣ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಮೇ ಬೇಸಿಗೆಯ ಅಂತ್ಯದ ತಿಂಗಳಾದ್ದರಿಂದ ಪ್ರವಾಸ ಕೈಗೊಳ್ಳಲು ಇದು ಉತ್ತಮ ಸಮಯವಾಗಿದೆ. ಈ ಪ್ರವಾಸ ಮೇ ತಿಂಗಳಿನಲ್ಲಿಯೇ ಆರಂಭವಾಗಲಿದ್ದು, ಕಾಶ್ಮೀರದಲ್ಲಿನ ಸುಂದರವಾದ ಪ್ರಕೃತಿ ಸೊಬಗನ್ನು ಸವಿಯಲು ಇದು ಉತ್ತಮ ಅವಕಾಶವಾಗಿದೆ.
ಪ್ರವಾಸವು ಮೇ 5, 20, 27, ಮತ್ತು 28 ರಂದು ಮತ್ತು ಜೂನ್ 3, 10, 11 ಮತ್ತು 17 ರಂದು ನಡೆಯಲಿದೆ. ನೀವು ಶ್ರೀನಗರ, ಸೋನಾಮಾರ್ಗ್, ಪಹಲ್ಗಾಮ್, ಗುಲ್ಮಾರ್ಗ್ ಮತ್ತು ಇತರ ನಿಲ್ದಾಣಗಳನ್ನು ಒಳಗೊಂಡಿದೆ. ಪ್ಯಾಕೇಜ್‌ನ ಹೆಸರೇ ಸೂಚಿಸುವಂತೆ ಈ ಪ್ರವಾಸವು ಪ್ರಯಾಣಿಕರಿಗೆ ಗ್ಯಾರಂಟಿ ಮೋಡಿ ಮಾಡಲಿದೆ.
ಪ್ರವಾಸ ಪ್ಯಾಕೇಜ್‌ನ ಸೌಕರ್ಯಗಳು
1. ದೆಹಲಿ ಮತ್ತು ಶ್ರೀನಗರ ನಡುವೆ ಗೋ ಏರ್‌ನಲ್ಲಿ ರೌಂಡ್-ಟ್ರಿಪ್ ಟಿಕೆಟ್‌ಗಳು.
2. ಪ್ರಯಾಣದಲ್ಲಿ ನಿರ್ದಿಷ್ಟಪಡಿಸಿದಂತೆ ದೃಶ್ಯ ವೀಕ್ಷಣೆಗೆ AC ವಾಹನದ ವ್ಯವಸ್ಥೆ ಇರುತ್ತದೆ.
3. ಪಹಲ್ಗಾಮ್ ಮತ್ತು ಶ್ರೀನಗರದಲ್ಲಿ ಆರಾಮದಾಯಕ ವಸತಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗುತ್ತದೆ.

4. ದಾಲ್ ಸರೋವರದ ಮೇಲೆ ಸವಾರಿ ಮಾಡಬಹುದಾಗಿದೆ.
5. ಒಂದು ರಾತ್ರಿ ದೋಣಿಯಲ್ಲಿ ವಿಹಾರ ಮಾಡಬಹುದಾಗಿದೆ.
6. ಐದು ಉಪಹಾರಗಳು ಮತ್ತು ಐದು ಭೋಜನಗಳ ವ್ಯವಸ್ಥೆ ಇರಲಿದೆ.
ಈ ಪ್ರವಾಸವು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಪ್ರಾರಂಭವಾಗಲಿದ್ದು, ಅಲ್ಲಿಂದ ಪ್ರಯಾಣಿಕರು ಶ್ರೀನಗರಕ್ಕೆ ಪ್ರಯಾಣಿಸಬಹುದಾಗಿದೆ. ಶ್ರೀನಗರದಲ್ಲಿ ವಿಮಾನ ಇಳಿದ ನಂತರ ಪ್ರವಾಸಿಗರನ್ನು ಹೋಟೆಲ್‌ಗೆ ಕರೆದೊಯ್ಯಲಾಗುತ್ತದೆ. ಸಂಜೆ ಮೊಘಲ್ ಗಾರ್ಡನ್ಸ್ ಪ್ರವಾಸವನ್ನು ಯೋಜಿಸಲಾಗಿದೆ. ಹೋಟೆಲ್‌ಗೆ ಹಿಂತಿರುಗುವಾಗ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ನಂತರ ಮರುದಿನ ಶ್ರೀನಗರದಿಂದ ಸೋನಾಮಾರ್ಗ್‌ಗೆ ಕಳುಹಿಸಲಾಗುತ್ತದೆ. ಸಮುದ್ರ ಮಟ್ಟದಿಂದ 2,800 ಮೀಟರ್ ಎತ್ತರದಲ್ಲಿ ಸೋನಾಮಾರ್ಗ್ ಇದೆ. ಪ್ರವಾಸಿಗರು ಇಲ್ಲಿ ತಾಜ್ವಾಸ್ ಗ್ಲೇಸಿಯರ್ ಅನ್ನು ಸಹ ಭೇಟಿ ಮಾಡಬಹುದು.
ಪ್ರವಾಸ ಪ್ಯಾಕೇಜ್‌ನ ದರಗಳು
1. ಒಬ್ಬರು ಪ್ರಯಾಣಿಸಿದರೆ ಪ್ರತಿ ವ್ಯಕ್ತಿಗೆ- 48,740 ರೂಪಾಯಿ ವೆಚ್ಚ ಆಗುತ್ತದೆ.
2. ಇಬ್ಬರು ಪ್ರಯಾಣಿಸಿದರೆ, ಪ್ರತಿಯೊಬ್ಬರಿಗೆ- 32,030 ರೂಪಾಯಿ
3. ಮೂವರು ಪ್ರಯಾಣಿಸಿದರೆ ಪ್ರತಿಯೊಬ್ಬರಿಗೆ 31,010 ರೂಪಾಯಿ ಪಾವತಿಸಬೇಕಾಗುತ್ತದೆ.
4. ಮಗುವಿಗೆ ಹಾಸಿಗೆ ಸಹಿತ (5-11 ವರ್ಷ)- 28,010 ರೂಪಾಯಿ
6. ಮಗುವಿಗೆ ಹಾಸಿಗೆ ರಹಿತ (2-4 ವರ್ಷ)- 14,960 ರೂಪಾಯಿ ಪಾವತಿಸಬೇಕಾಗುತ್ತದೆ.
ಹೀಗೆ ಇದೇ ಮೊದಲೇನಲ್ಲ, ಮೊದಲಿನಿಂದಲೂ ಸಹ ಐಆರ್‌ಸಿಟಿಸಿಯು ಪ್ರಯಾಣಿಕರ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡುತ್ತಲೇ ಬಂದಿದೆ. ಪ್ರಯಾಣಿಕರು ಕೂಡ ಉತ್ತಮ ಸ್ಪಂದನೆಯನ್ನು ನೀಡುತ್ತಲೇ ಬಂದಿದ್ದಾರೆ.












Click it and Unblock the Notifications