Suburban train: ಬೆಂಗಳೂರಿನಲ್ಲಿ ಶೀಘ್ರವೇ ಟ್ರ್ಯಾಕ್‌ಗೆ ಇಳಿಯಲಿದೆ ಈ ಟ್ರೈನ್‌, ಯಾವ್ಯಾವ ಮಾರ್ಗಗಳಲ್ಲಿ?-ಮಾಹಿತಿ

ಬೆಂಗಳೂರು, ನವೆಂಬರ್‌, 16: ನಮ್ಮ ಮೆಟ್ರೋ ಸೇವೆ ಆರಂಭ ಆದಾಗಿನಿಂದ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳು ಸೇರಿದಂತೆ ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಿದೆ. ಹಾಗೆಯೇ ಸಂಚಾರ ದಟ್ಟಣೆಯು ಕೂಡ ಕಡಿಯಾಗಿದೆ. ಮತ್ತೊಂದೆಡೆ ಇದೀಗ ನಗರದಲ್ಲಿ ಸಬರ್ಬನ್‌ ರೈಲು ಸೇವೆ ಆರಂಭ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ರೈಲಿನ ಸೇವೆ ಯಾರಿಗೆಲ್ಲಾ ಉಪಯೋಗ ಆಗಲಿದೆ ಮತ್ತು ಎಲ್ಲೆಲ್ಲಿ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ನೈಋತ್ಯ ರೈಲ್ವೆಯು ಸಿಲಿಕಾನ್‌ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಸುತ್ತುವ ವರ್ತುಲಾಕಾರದ ಈ ರೈಲು ಜಾಲದ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವ ಕಾರ್ಯಾಚರಣೆ ಆರಂಭ ಆಗಲಿದೆ. ಒಟ್ಟು 287 ಕಿಲೋ ಮೀಟರ್‌ ಉದ್ದದ ವೃತ್ತಾಕಾರದ ಈ ರೈಲು ಮಾರ್ಗ ಬೆಂಗಳೂರಿನ ಪಾಲಿಗೆ ಲೋಕಲ್‌ ರೈಲು ಸೇವೆ ಆಗಲಿದೆ. ಅಲ್ಲದೆ ಇದರಿಂದ ಸಂಚಾರ ದಟ್ಟಣೆಯು ಮತ್ತಷ್ಟು ಕಡಿಮೆಯಾದಂತಾಗುತ್ತದೆ.

Suburban train service will start soon in Bengaluru, know routes details

ಈ ರೈಲು ಯೋಜನೆ ನಮ್ಮ ಮೆಟ್ರೋ ಮತ್ತು ಬೆಂಗಳೂರು ಸಬರ್ಬನ್‌ ರೈಲು ಸೇವೆಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ. ವೃತ್ತಾಕಾರದ ರೈಲು ಜಾಲವು ಮೆಟ್ರೋ ನಿಲ್ದಾಣಗಳನ್ನು ಕೂಡಾ ಹಾದುಹೋಗಲಿದೆ ಎಂದು ತಿಳಿದುಬಂದಿದೆ. ಒಂದು ಮೆಟ್ರೋ ನಿಲ್ದಾಣದಿಂದ ಸಮೀಪವಿರುವ ಬೇರೆ ಪ್ರದೇಶಗಳಿಗೆ ಹೋಗಲು ಇದು ಸಹಾಯಕವಾಗಲಿದೆ. ಮತ್ತು ವೃತ್ತಾಕಾರದ ಪಥದಲ್ಲಿ ಬರುವ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕ ಸಾಧ್ಯ ಆಗಲಿದೆ ಎನ್ನಲಾಗಿದೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಸಂಸದರಾಗಿರುವ ಪಿ.ಸಿ. ಮೋಹನ್‌ ಅವರು ಈ ಕುರಿತ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನ ಲೋಕಲ್‌ ರೈಲು ಸೇವೆಯಲ್ಲಿ ಕ್ರಾಂತಿಯೇ ಉಂಟಾಲಿದೆ ಎಂದು ತಿಳಿಸಿದ್ದಾರೆ.

ವೃತ್ತಾಕಾರದ ರೈಲು ಹಾಸನ ರಸ್ತೆಯ ಸೋಲೂರು, ತುಮಕೂರು ರಸ್ತೆಯ ನಿಡುವಂಡ, ಗೌರಿಬಿದನೂರಿಗೆ ಹೋಗುವ ರಸ್ತೆಯಲ್ಲಿ ಬರುವ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ರಸ್ತೆಯ ದೇವನಹಳ್ಳಿ, ಬಂಗಾರ್‌ ಪೇಟೆಗೆ ಹೋಗುವ ರಸ್ತೆಯಲ್ಲಿ ಬರುವ ಮಾಲೂರು, ಆನೇಕಲ್‌ ರಸ್ತೆಯ ಹೀಲಾಳಿಗೆ, ರಾಮನಗರ ರಸ್ತೆಯ ಹೆಜ್ಜಾಲ, ಅಲ್ಲಿಂದ ಮತ್ತೆ ಹಾಸನ ರಸ್ತೆಯ ಸೋಲೂರಿಗೆ ಸಂಪರ್ಕಿಸಿ ತನ್ನ ವೃತ್ತಾಕಾರದ ಪಥವನ್ನು ಪೂರ್ಣಗೊಳಿಸಲಿದೆ.

ರೈಲ್ವೇ ಇಲಾಖೆಯು ಈ ಯೋಜನೆ ಸಾಗಬೇಕಾದ ದಾರಿಯನ್ನು ಗುರುತಿಸಲು ಸ್ಥಳ ಪರಿಶೀಲನೆಗಾಗಿ 72 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಎಲ್ಲೆಲ್ಲಿ ನಿಲ್ದಾಣಗಳಿರಬೇಕು, ಟರ್ಮಿನಲ್ ಸೌಲಭ್ಯ, ಭೂಮಿ ಅವಶ್ಯಕತೆ ಸೇರಿದಂತೆ ಸೇತುವೆ ಮತ್ತಿತರ ಕಾಮಗಾರಿಗಳನ್ನು ಕುರಿತು ಸಮೀಕ್ಷೆ ನಡೆಯಲಿದೆ.

ಈ ಸರ್ಕ್ಯುಲರ್‌ ರೈಲು ಮಾರ್ಗವು ಸಬ್ ಅರ್ಬನ್ ಮತ್ತು ಮೆಟ್ರೋ ರೈಲಿಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ನೆಟ್‌ವರ್ಕ್ ಮಾರ್ಗವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ದೇವನಹಳ್ಳಿ, ಕೈಗಾರಿಕಾ ಪ್ರದೇಶಗಳು ಮತ್ತು ಉಪನಗರಗಳಿಗೆ ಸಮೀಪವಿರುವ ಹೀಲಳಿಗೆ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ಇತರ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ.

ಈ ಸೇವೆಯಿಂದ ಉಪನಗರಗಳಲ್ಲಿ ವಾಸವಿದ್ದು ಬೆಂಗಳೂರಿಗೆ ಹೋಗಿ ಬರುವವರಿಗೆ ಸಹಾಯ ಆಗಲಿದೆ. ಈ ಮಾರ್ಗದಲ್ಲಿ ಮೆಮು ಮತ್ತು ಡೆಮು ರೈಲುಗಳನ್ನು ಓಡಿಸುವುದರಿಂದ ದೂರ ದೂರಕ್ಕೆ ಸಂಚರಿಸುವ ರೈಲುಗಳ ಸಮಯ ಉಳಿತಾಯ ಆಗಲಿದೆ.

ಎಲ್ಲೆಲ್ಲಿ ರೈಲು ಸಂಚಾರ?

1. ನಿಡುವಂಡ-ದೊಡ್ಡಬಳ್ಳಾಪುರ: 40.9 ಕಿಲೋ ಮೀಟರ್‌

2. ದೊಡ್ಡಬಳ್ಳಾಪುರ - ದೇವನಹಳ್ಳಿ: 28.5 ಕಿಲೋ ಮೀಟರ್‌

3. ದೇವನಹಳ್ಳಿ - ಮಾಲೂರು: 46.5 ಕಿಲೋ ಮೀಟರ್‌

4. ಮಾಲೂರು- ಹೀಲಾಳಿ: 52 ಕಿಲೋ ಮೀಟರ್‌

5. ಹೀಲಾಳಿಗೆ - ಹೆಜ್ಜಾಲ: 42 ಕಿಲೋ ಮೀಟರ್‌

6. ಹೆಜ್ಜಾಲ-ಸೋಲೂರು: 43.5 ಕಿಲೋ ಮೀಟರ್‌

7. ಸೋಲೂರು-ನಿಡುವಂಡ: 34.2 ಕಿಲೋ ಮೀಟರ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+