ಬೆಂಗಳೂರು-ಕೊಚುವೇಲಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಸಂಚಾರ-ಸಮಯ, ದಿನಾಂಕಗಳ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್, 9: ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲತೆಗೆ ತಕ್ಕಂತೆ ಹಬ್ಬ, ವಿಶೇಷ ದಿನಗಳ ಸಂರ್ಭಗಳಲ್ಲಿ ವಿಶೇಷ ರೈಲುಗಳನ್ನು ಮೊದಲಿನಿಂದಲೂ ಬಿಡುತ್ತಲೇ ಬಂದಿದೆ. ಇನ್ನು ಇದೀಗ ಋತ್ಯ ರೈಲ್ವೆಯು ಬೆಂಗಳೂರಿನಿಂದ ಈ ಮಾರ್ಗಗಳಲ್ಲಿ ವಿಶೇಷ ರೈಲುಗಳ್ನು ಬಿಡಲು ರೈಲ್ವೆ ಮುಂದಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಯಾವಾಗ ಈ ರೈಲು ಸಂಚಾರ ಮಾಡಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಬೇಸಿಗೆ ಮತ್ತು ವಿಷು ಹಬ್ಬ ರಜೆ ಹಿನ್ನೆಲೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕೊಚುವೇಲಿ- ಬೆಂಗಳೂರು-ಕೊಚುವೇಲಿ ಎಕ್ಸ್‌ಪ್ರೆಸ್ ರೈಲಿನ 8 ಟ್ರಿಪ್‌ಗಳನ್ನು ನೈಋತ್ಯ ರೈಲ್ವೆ ಘೋಷಣೆ ಮಾಡಿದೆ. ಕೊಚುವೇಲಿ-ಸರ್‌ಎಂವಿ ಟರ್ಮಿನಲ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 06083) ಕೊಚುವೇಲಿಯಿಂದ ಪ್ರತಿ ಮಂಗಳವಾರ ಸಂಜೆ 6.05ಕ್ಕೆ ಹೊರಡಲಿದ್ದು, ಮಾರನೇ ದಿನ (ಬುಧವಾರ) ಬೆಳಗ್ಗೆ ಬೆಂಗಳೂರು ತಲುಪುತ್ತದೆ. ಈ ರೈಲು ಏಪ್ರಿಲ್ 8ರಿಂದ ಆರಂಭವಾಗಿದ್ದು, ಮೇ 28ರ ತನಕ ಸಂಚಾರ ಮಾಡಲಿದೆ.

ಸರ್‌ಎಂವಿ ಟರ್ಮಿನಲ್ ಬೆಂಗಳೂರು-ಕೊಚುವೇಲಿ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ (ರೈಲು ಸಂಖ್ಯೆ 06084) ಬೆಂಗಳೂರಿನಿಂದ ಬೆಳಗ್ಗೆ 10:55ಕ್ಕೆ ಮತ್ತೆ ಹೊರಟು ಮಾರನೆ ದಿನ ಬೆಳಗ್ಗೆ 6:45ಕ್ಕೆ ಕೊಚುವೇಲಿ ತಲುಪುತ್ತದೆ. ಈ ರೈಲು ಏಪ್ರಿಲ್ ಏಪ್ರಿಲ್ 10ರಿಂದ ಮೇ 29ರವರರಗೂ ಸಂಚಾರ ಮಾಡಲಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ನಿಲುಗಡೆ?: ಈ ರೈಲುಗಳು ಕೊಲ್ಲಂ, ಕಾಯಂಕುಳಂ, ಮಾವೇಲಿಕರ, ಚೆಂಗನ್ನೂರು, ತಿರುವಲ್ಲಾ, ಚಂಗನಾಶ್ಶೇರಿ, ಕೊಟ್ಟಾಯಂ, ಎರ್ನಾಕುಲಂ ಟೌನ್, ಅಲುವಾ, ತ್ರಿಶ್ಶೂರ್, ಪಾಲಕ್ಕಾಡ್, ಪೊದನೂರ್, ತಿರುಪ್ಪೂರು, ಈರೋಡ್, ಸೇಲಂ, ಬಂಗಾರಪೇಟೆ, ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿವೆ. ಇನ್ನು ಈ ರೈಲಿನಲ್ಲಿ 21 ಬೋಗಿಗಳಿದ್ದು, ತ್ರಿ ಟೈರ್ ಎಸಿ 16 ಬೋಗಿ, ಸ್ಲೀಪರ್ ಕ್ಲಾಸ್ 3 ಬೋಗಿ, ಒಂದು ಲಗೇಜ್ ವ್ಯಾನ್, ಜನರೇಟರ್ ಬೋಗಿ ಇದೆ ಎಂದು ಮಾಹಿತಿ ನೀಡಿದೆ.
ವಿಶೇಷ ರೈಲುಗಳ ವಿವರ: ವಿಜಯವಾಡ -ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯವಾಡ ವಿಶೇಷ ರೈಲು (ರೈಲು ಸಂಖ್ಯೆ 07001/07002)ಏಪ್ರಿಲ್ 10ರಂದು ಮಧ್ಯಾಹ್ನ 2:30ಕ್ಕೆ ವಿಜಯವಾಡದಿಂದ ಹೊರಡಲಿದ್ದು, ಮಾರನೇ ದಿನ ಅಂದರೆ ಏಪ್ರಿಲ್ 11ರ ಬೆಳಗ್ಗೆ 7:10ಕ್ಕೆ ಹುಬ್ಬಳ್ಳಿ ತಲುಪಲಿದೆ. ಬಳಿಕ ಹುಬ್ಬಳ್ಳಿಯಿಂದ ಬೆಳಗ್ಗೆ 9:25ಕ್ಕೆ ಹೊರಟು ಏಪ್ರಿಲ್ 12ರ ಮಧ್ಯಾಹ್ನ 1 ಗಂಟೆಗೆ ವಿಜಯವಾಡ ತಲುಪಲಿದೆ.
ಈ ರೈಲು ಗುಂಟೂರು, ನರಸರಾವ್‌ಪೇಟ್, ವಿನುಕೊಂಡ, ದೋನಕೊಂಡ, ಮರ್ಕಾಪುರ ರೋಡ್, ಗಿಡ್ಡಲೂರು, ನಂದ್ಯಾಲ, ಧೋನೆ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ ಮತ್ತು ಅಣ್ಣಿಗೇರಿ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ. ಇನ್ನು ಈ ರೈಲಿನಲ್ಲಿ 21 ಬೋಗಿಗಳಿದ್ದು, 8 ಸ್ಲೀಪರ್, 10 ಸೆಕೆಂಡ್ ಕ್ಲಾಸ್, ಎಸ್‌ಎಲ್‌ಆರ್ 2, ಎಸಿ ತ್ರೀ ಟೈರ್ 1 ಬೋಗಿಗಳಿವೆ.
ಯಶವಂತಪುರದಿಂದ ಸೋಮವಾರ (ಏಪ್ರಿಲ್ 8) ಹೊರಟ ಯಶವಂತಪುರ-ಕಲಬುರಗಿ ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06505/06506) ಇಂದು (ಏಪ್ರಿಲ್ 09) ಬೆಳಗ್ಗೆ 10:30ಕ್ಕೆ ಕಲಬುರಗಿಗೆ ಆಗಮಿಸಿದ್ದು, ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ಹೊರಟು ಇಂದು ರಾತ್ರಿ 11 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು ಯಲಹಂಕ, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್‌ಗಳಲ್ಲಿ ನಿಲುಗಡೆ ಆಗಲಿದೆ.












Click it and Unblock the Notifications