Special Weekly train: ಮೈಸೂರು-ಅಜ್ಮೇರ್ ನಡುವೆ ವಿಶೇಷ ಸಾಪ್ತಾಹಿಕ ರೈಲು-ಸಮಯ, ದಿನಾಂಕಗಳನ್ನು ತಿಳಿಯಿರಿ

ಮೈಸೂರು, ಏಪ್ರಿಲ್‌, 13: ಭಾರತೀಯ ರೈಲ್ವೆಯು ಆಗಾಗ ಪ್ರಯಾಣಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಇದೀಗ ಬೇಸಿಗೆ ಹಿನ್ನೆಲೆ ಮೈಸೂರು-ಅಜ್ಮೇರ್ ನಡುವೆ ಸಾಪ್ತಾಹಿಕ ವಿಶೇಷ ರೈಲು ಬಿಡಲು ನಿರ್ಧರಿಸಿದೆ. ಹಾಗಾದರೆ ದಿನಾಂಕ, ಸಮಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ದಟ್ಟಣೆಯ ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರೈಲ್ವೇಯು ಮೈಸೂರು ಮತ್ತು ಅಜ್ಮೀರ್ ಮಾರ್ಗದಲ್ಲಿ ಸಾಪ್ತಾಹಿಕ ವಿಶೇಷ ರೈಲನ್ನು ಬಿಡಲು ಘೋಷಣೆ ಮಾಡಿದೆ. ಈ ರೈಲು ರತ್ಲಂ, ಮಂದಸೌರ್, ನೀಮಚ್ ಮತ್ತು ಚಿತ್ತೋರ್‌ಗಢದಲ್ಲಿ ನಿಲುಗಡೆ ಆಗಲಿದೆ.

Special Weekly train between Mysore-Ajmer-know timings and date details

ಸಮಯಗಳ ಮಾಹಿತಿ: ವಿಶೇಷ ರೈಲು ಸಂಖ್ಯೆ 06281 ಮೈಸೂರಿನಿಂದ ಏಪ್ರಿಲ್ 13ರಿಂದ ಮೇ 18ರವರೆಗೆ ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಗೆ ಹೊರಡಲಿದ್ದು, ಅಜ್ಮೀರ್‌ಗೆ ಪ್ರಯಾಣ ಬೆಳೆಸಲಿದೆ. ಇದು ರಾತ್ರಿ 9:05ಕ್ಕೆ (ಭಾನುವಾರ) ರತ್ಲಂ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆಯಾಗಲಿದೆ. ರಾತ್ರಿ 10:20ಕ್ಕೆ (ಭಾನುವಾರ) ಮಂದಸೌರ್, ನೀಮಚ್ 11.55ಕ್ಕೆ (ಭಾನುವಾರ), ಮತ್ತು ಚಿತ್ತೌರ್ಗಢ್ 12.30 ಕ್ಕೆ(ಸೋಮವಾರ), ಅಂತಿಮವಾಗಿ ಸೋಮವಾರ ಬೆಳಗ್ಗೆ 4 ಗಂಟೆಗೆ ಅಜ್ಮೀರ್ ತಲುಪುತ್ತದೆ.

ರೈಲು ಸಂಖ್ಯೆ 06282 ಅಜ್ಮೀರ್‌ನಿಂದ ಮೈಸೂರಿಗೆ ಕಾರ್ಯನಿರ್ವಹಿಸುತ್ತದೆ. ಇದು ಪ್ರತಿ ಮಂಗಳವಾರ ಏಪ್ರಿಲ್ 16ರಿಂದ ಮೇ 21ರವರೆಗೆ ರಾತ್ರಿ 8:10ಕ್ಕೆ ಹೊರಡುತ್ತದೆ. ಗುರುವಾರ ಸಂಜೆ 4:40ಕ್ಕೆ ಮೈಸೂರು ತಲುಪುವ ಮೊದಲು ಚಿತ್ತೋರ್‌ಗಢ, ನೀಮಚ್, ಮಂದಸೌರ್ ಮತ್ತು ರತ್ಲಂನಲ್ಲಿ ನಿಲುಗಡೆ ಆಗಲಿದೆ.

ಮಂಡ್ಯ, ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ಹಾವೇರಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮೀರಜ್, ಸಾಂಗ್ಲಿ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ಸೂರತ್, ವಡೋದರಾ, ಮಂದಸೌರ್, ನೀಮುಚ್ ಮತ್ತು ಚಿತ್ತೌರ್‌ಗಢ್ ರೈಲು ನಿಲ್ದಾಣಗಳಾಗಿವೆ.

ವಿಶೇಷ ರೈಲಿನ ವಿವರ: ಇನ್ನು ಈ ವಿಶೇಷ ರೈಲಿನಲ್ಲಿ ಎರಡು ಸೆಕೆಂಡ್ ಎಸಿ ಕೋಚ್‌ಗಳು, ಮೂರು ಥರ್ಡ್ ಎಸಿ ಕೋಚ್‌ಗಳು, 12 ಸ್ಲೀಪರ್ ಕೋಚ್‌ಗಳು ಮತ್ತು ಒಂದು ಜನರಲ್ ಕೋಚ್‌ಗಳನ್ನು ಒಳಗೊಂಡಿದ್ದು, ಹೆಚ್ಚು ಪ್ರಯಾಣಿಕರನ್ನು ಸಾಗಿಸಲು ಸಜ್ಜಾಗಿದೆ. ಈ ವಿಶೇಷ ಸೇವೆಯು ಬೇಸಿಗೆಯ ತಿಂಗಳುಗಳಲ್ಲಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+