Special train: ಮಂಗಳೂರು- ಅಹಮದಾಬಾದ್ ನಡುವೆ ವಿಶೇಷ ರೈಲು, ಯಾವಾಗ?, ಇಲ್ಲಿದೆ ಮಾಹಿತಿ
ಮಂಗಳೂರು, ಜೂನ್, 07: ಭಾರತೀಯ ರೈಲ್ವೆಯು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ ರೈಲುಗಳನ್ನು ಬಿಡುತ್ತಲೇ ಇದೆ. ಹಾಗೆಯೆ ಮತ್ತೊಂದೆ ಹಬ್ಬ, ಹರಿದಿನಗಳ ಸಂದರ್ಭದಲ್ಲೂ ಸಹ ವಿಶೇಷ ರೈಲುಗಳ ವ್ಯವಸ್ಥೆಯನ್ನು ಸಹ ಕಲ್ಪಿಸುತ್ತಲೇ ಬಂದಿದೆ. ಹಾಗೆಯೆ ಇದೀಗ ಮಂಗಳೂರು-ಅಹಮದಾಬಾದ್ ನಡುವೆ ವಿಶೇಷ ರೈಲು ಬಿಡಲು ನಿರ್ಧರಿಸಿದೆ. ಹಾಗಾದರೆ ಈ ರೈಲು ಪ್ರಾರಂಭ ಆಗುವ ದಿನಾಂಕಗಳು ಮತ್ತು ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಸುವ ಸಲುವಾಗಿ ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ಜೂನ್ 9ರಿಂದ ಅಹಮದಾಬಾದ್ ಮತ್ತು ಮಂಗಳೂರು ನಡುವೆ ವಿಶೇಷ ಸಾಪ್ತಾಹಿಕ ರೈಲು ಬಿಡಲು ಭಾರತೀಯ ರೈಲ್ವೆ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 09424 ಮತ್ತು 09423 ಸಂಖ್ಯೆಯ ರೈಲು ಅಹಮದಾಬಾದ್ ಮತ್ತು ಮಂಗಳೂರು ನಡುವೆ ಸಂಚಾರ ಆಂರಂಭಿಸಲಿದೆ. ಅಲ್ಲದೆ ವಿಶೇಷ ರೈಲು ದರ ಪಾವತಿಸಿ ಈ ರೈಲಿನಲ್ಲಿ ಸಂಚಾರ ಮಾಡಬಹುದಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ಒಡಿಶಾದ ಬಾಲಸೋರ್‌ನಲ್ಲಿ ನಡೆದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಈ ಹಿನ್ನೆ ರೈಲುಗಳಲ್ಲಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳು ದೃಷ್ಟಿಯಿಂದ ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ಈ ವಿಶೇಷ ರೈಲು ಸಂಚಾರ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು 09424 ಸಂಖ್ಯೆಯ ರೈಲು ಶುಕ್ರವಾರ ಸಂಜೆ 4 ಗಂಟೆಗೆ ಅಂದರೆ ಜೂನ್ 9ರಿಂದ ಆರಂಭವಾಗಲಿದೆ. ಅಹಮದಾಬಾದ್‌ನಿಂದ ಆರಂಭವಾಗುವ ಈ ರೈಲು ಜೂನ್ 9, 16 ಮತ್ತು 23 ಮೂರು ದಿನಗಳ ಕಾಲ ಸಂಚಾರ ಮಾಡಲಿದೆ. ನಂತರ ಶನಿವಾರ ಸಂಜೆ 7:40ಕ್ಕೆ ಮಂಗಳೂರು ತಲುಪಲಿದೆ.
ಹಾಗೆಯೆ 09423 ಸಂಖ್ಯೆಯ ರೈಲು ಜೂನ್ 10, 17 ಮತ್ತು 24 ರಂದು ಶನಿವಾರ ರಾತ್ರಿ 9:10ಕ್ಕೆ ಮಂಗಳೂರಿನ ಜಂಕ್ಷನ್‌ನಿಂದ ಹೊರಟು, ಸೋಮವಾರದಂದು (ಜೂನ್ 25) ಮುಂಜಾನೆ 1:15ಕ್ಕೆ ಅಹಮದಾಬಾದ್ ಜಂಕ್ಷನ್‌ಗೆ ತಲುಪುತ್ತದೆ ಎಂದು ತಿಳಿಸಿದೆ.
ಈ ರೈಲು ನಾಡಿಯಾಡ್, ಆನಂದ್, ವಡೋದರಾ, ಭರೂಚ್, ಸೂರತ್, ವಾಪಿ, ವಸಾಯಿ ರಸ್ತೆ, ಪನ್ವೇಲ್, ರೋಹಾ, ರತ್ನಗಿರಿ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್, ಕರ್ಮಾಲಿ, ಮಡಗಾಂವ್ ಜೆಎನ್, ಕಾರವಾರ, ಉಡುಪಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ ಅಂತಾ ದಿ ಹಿಂದು ವರದಿ ಮಾಡಿದೆ. ಈಗಾಗಲೇ ಅನೇಕ ಜನರು ಈ ರೈಲು ಸೇವೆಯನ್ನು ಬುಕ್ ಮಾಡಿದ್ದು, ಇದು ಮಂಗಳೂರಿನಿಂದ-ಅಹಮದಾಬಾದ್ಗೆ ಹೋಗುವವರಿಗೆ ಹೆಚ್ಚು ಅನುಕೂಲವಾಗಿದೆ.
ಇನ್ನು ಈ ರೈಲಿನಲ್ಲಿ 22 ಎಲ್‌ಎಚ್‌ಬಿ ಕೋಚ್‌ಗಳಿದ್ದು, ಇದರಲ್ಲಿ ಒಂದು ಎಸಿ 2-ಟೈರ್, 8 ಎಸಿ 3-ಟೈರ್, 5 ಸೆಕೆಂಡ್ ಕ್ಲಾಸ್ ಸ್ಲೀಪರ್, 6 ಸಾಮಾನ್ಯ ದರ್ಜೆಯ ಕೋಚ್, ಒಂದು ಜನರೇಟರ್ ಮತ್ತು ಇನ್ನೊಂದು ಲಗೇಜ್ ಕೋಚ್‌ಗಳಿವೆ.
ಈ ಹಿಂದೆಯೂ ವಿಶೇಷ ರೈಲು ಸಂಚಾರ
ಹಾಗೆಯೆ ಇತ್ತೀಚೆಗಷ್ಟೇ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಅಹಮದಾಬಾದ್‌ನಿಂದ ಮಂಗಳೂರು ಜಂಕ್ಷನ್‌ಗೆ ಏಕಮುಖ ವಿಶೇಷ ರೈಲು ಬಿಟ್ಟಿತ್ತು. ನಂಬರ್ 06072ರ ಈ ರೈಲು ಅಹಮದಾಬಾದ್ ಜಂಕ್ಷನ್‌ನಿಂದ ಜನವರಿ 6ರಂದು ಶುಕ್ರವಾರ ಸಂಜೆ 4ಕ್ಕೆ ಹೊರಡಲಿದ್ದು, ಮರುದಿನ ಅಂದರೆ ಶನಿವಾರ (ಜನವರಿ 07ರ) ಸಂಜೆ 6:30ಕ್ಕೆ ಮಂಗಳೂರು ಜಂಕ್ಷನ್ ತಲಪಲಿದೆ ಎಂದು ತಿಳಿಸಿತ್ತು.
ಹಾಗೆಯೇ ಈ ರೈಲು ವಡೋದರ, ಸೂರತ್, ವಾಪಿ, ವಸಾೖರೋಡ್, ಪನ್ವೇಲ್, ರೋಹ, ಖೇಡ್, ಚಿಪ್ಳೂಣ್, ಸಂಗಮೇಶ್ವರ ರೋಡ್, ರತ್ನಾಗಿರಿ, ಸಿಂಧುದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ, ಮಡಗಾಂವ್, ಕಾಣಕೋಣ, ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗಳಲ್ಲಿ ನಿಲುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ಕೂಡ ನೀಡಿತ್ತು.












Click it and Unblock the Notifications