ಎರ್ನಾಕುಲಂ-ಬೆಂಗಳೂರು ನಡುವೆ ವಿಶೇಷ ರೈಲು ಸೇವೆ-ಸಮಯ, ದಿನಾಂಕಗಳ ವಿವರ ತಿಳಿಯಿರಿ

Special Train: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ವಿಶೇಷ ರೈಲು ಸೇವೆಯನ್ನು ಅನಿರೀಕ್ಷಿತವಾಗಿ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಈ ಭಾಗದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಇಂದಿನಿಂದ ಈ ಮಾರ್ಗದಲ್ಲಿ ವಿಷೇಶ ರೈಲುಗಳನ್ನು ಒಡಿಲಿಸಲು ಭಾರತೀಯ ರೈಲ್ವೆ ನಿರ್ಧಾರ ಮಾಡಿದೆ. ಮಾಹಿತಿ ಇಲ್ಲಿ ತಿಳಿಯಿರಿ.

ರೈಲು ಸೇವೆಯ ದಿನಾಂಕಗಳ ವಿವರ: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸಿದ ಬಳಿಕ ಈ ಭಾಗದ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸಿದ್ದರು. ಇದೀಗ ಪ್ರಯಾಣಿಕರ ಪರದಾಟ ಗಮನಿಸಿದ ರೈಲ್ವೇಯು, ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 7ರ ವರೆಗೆ ಎರ್ನಾಕುಲಂ ಜಂಕ್ಷನ್-ಯಲಹಂಕ ಕಾರಿಡಾರ್‌ನಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಸಮಯಗಳ ವಿವರ ಇಲ್ಲಿದೆ ಗಮನಿಸಿ.

Special train service between Ernakulam-Bengaluru know details

ಸಮಯಗಳ ವಿವರ: ಎರ್ನಾಕುಲಂನಿಂದ ಭಾನುವಾರ (ಸೆಪ್ಟೆಂಬರ್‌ 1) 13 ಬೋಗಿಗಳ ಸೇವೆಗಳ ರೈಲು ಸೇವೆಯನ್ನು ಒದಗಿಸಲಾಗುತ್ತಿದ್ದು, ಇದು ಬುಧವಾರ ಮತ್ತು ಶುಕ್ರವಾರ ಮಧ್ಯಾಹ್ನ 12.40ಕ್ಕೆ ಹೊರಡಲಿದೆ. ಇನ್ನು ಯಲಹಂಕದಿಂದ ಹಿಂದಿರುಗುವ ರೈಲು ಸೋಮವಾರ, ಗುರುವಾರ ಮತ್ತು ಶನಿವಾರದಂದು ಬೆಳಗ್ಗೆ 5 ಗಂಟೆಗೆ ಪ್ರಯಾಣ ಪ್ರಾರಂಭಿಸಲಿದೆ ಎಂದು ತಿಳಿಸಿದೆ.

ಬೆಂಗಳೂರು-ಮಧುರೈ ರೈಲು ಟಿಕೆಟ್‌ ದರ ಎಷ್ಟು?: ದೇಶಾದ್ಯಂತ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಗಳಿಸುತ್ತಲೇ ಬಂದಿದೆ. ಇದೀಗ ಮೂರು ಮಾರ್ಗಗಳಿಗೆ ಹೊಸ ವಂದೇ ಭಾರತ್‌ ರೈಲು ಸೇವೆಗೆ ಇಂದು (ಆಗಸ್ಟ್‌ 31) ನವದೆಹಲಿಯಲ್ಲಿ ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಟಿಕೆಟ್‌ ದರ ಎಷ್ಟೆಂದು ಇಲ್ಲಿ ತಿಳಿಯಿರಿ.

ಈ ಹೊಸ ವಂದೇ ಭಾರತ್‌ ರೈಲು ಸೇವೆ ಬೆಂಗಳೂರು-ತಮಿಳುನಾಡಿನ ಮಧುರೈ ನಡುವೆ ಓಡಲಿದೆ. ಕೇಸರಿ ಬಣ್ಣದ ಬಣ್ಣದ ಈ ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಮಧುರೈ-ಬೆಂಗಳೂರು, ಬೆಂಗಳೂರು-ಮಧುರೈ ನಡುವೆ ಓಡಲಿದೆ.

ಬೆಳಗ್ಗೆ 5:15ಕ್ಕೆ ಮಧುರೈ ಜಂಕ್ಷನ್‌ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 20671 ದಿಂಡಿಗಲ್‌-ತಿರುಚ್ಚಿ-ಕರೂರು-ನಾಮಕ್ಕಲ್‌ ಸೇಲಂ-ಕೆ.ಆರ್.ಪುರಂ ಮಾರ್ಗವಾಗಿ ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಅದೇ ದಿನ ಮಧ್ಯಾಹ್ನ 1 ಗಂಟೆಗೆ ತಲುಪಲಿದ್ದು, ಪ್ರಯಾಣದ ಅವದೀ 8 ಗಂಟೆ ಆಗಿರುತ್ತದೆ. ಇನ್ನು ಮಧುರೈ-ಬೆಂಗಳೂರು ಟಿಕೆಟ್ ನಡುವೆ ರೈಲು ಟಿಕೆಟ್‌ ದರ 1,575 ರೂಪಾಯಿ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಂಗಳವಾರ ಹಿರತುಪಡಿಸಿ ವಾರದ 6 ದಿನ ಮಧ್ಯಾಹ್ನ 1:30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 20672 ಕೆ.ಆರ್‌.ಪುರಂ-ಸೇಲಂ-ನಾಮಕ್ಕಲ್‌-ತಿರುಚ್ಚಿ-ದಿಂಡಿಗಲ್‌ ಮಾರ್ಗವಾಗಿ ಮಧುರೈ ಜಂಕ್ಷನ್‌ಗೆ ಅದೇ ದಿನ ರಾತ್ರಿ 9:45ಕ್ಕೆ ತಲುಪಲಿದೆ. ಪ್ರಯಾಣದ ಅವಧಿ 8 ಗಂಟೆ ಆಗಲಿದ್ದು, ಬೆಂಗಳೂರು-ಮಧುರೈ ನಡುವಿನ ಪ್ರಯಾಣದ ಟಿಕೆಟ್‌ ದರ 1,575 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+