New year 2024: ಬೆಂಗಳೂರಿನಿಂದ ರಾಜಸ್ಥಾನಕ್ಕೆ ಕಡಿಮೆ ದರದಲ್ಲಿ ಪ್ರವಾಸ ಕೈಗೊಳ್ಳಬೇಕೆ?-ಇಲ್ಲಿದೆ ಸೂಕ್ತ ಪ್ಯಾಕೇಜ್‌ ಟೂರ್‌ ವಿವರ

ರಾಜಸ್ಥಾನ, ಡಿಸೆಂಬರ್‌, 18: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಟೂರ್‌ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಾಗೆಯೇ 2023 ಇನ್ನೂ ಕೆಲವೇ ದಿನಗಳಲ್ಲೇ ಮುಗಿಯಲಿದ್ದು, 2024ಕ್ಕೆ ದಾಪುಗಲಿಡಲಿದ್ದೇವೆ. ಈ ವೇಳೆ ತುಂಬಾ ಜನ ಪ್ರವಾಸ ಕೈಗೊಳ್ಳಲು ಯೋಜನೆ ಮಾಡಿಕೊಂಡಿರುತ್ತಾರೆ. ಹಾಗಾದರೆ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಕಡಿಮೆ ದರದಲ್ಲಿ ಪ್ರವಾಸ ಬೆಳೆಸಲು ಸೂಕ್ತ ಪ್ಯಾಕೇಜ್‌ ಇಲ್ಲಿದೆ ನೋಡಿ.

ಅರಮನೆ, ಕೋಟೆ, ಮರಳು ದಿಬ್ಬಗಳು, ಸೊಗಸಾದ ಸರೋವರ, ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ರಾಜಸ್ಥಾನಕ್ಕೆ ದೇಶದ ಮೂಲೆ ಮೂಲೆಗಳಿಂದ ಅಲ್ಲದೆ, ವಿದೇಶಗಳಿಂದಲೂ ಪ್ರವಾಸ ಕೈಗೊಳ್ಳುವವರಿದ್ದಾರೆ. ಇನ್ನು ಇಲ್ಲಿ ಒಂಟೆಗಳ ಮೇಲೆ ಕುಳಿತು ಸವಾರಿ ಮಾಡುವುದಂತೂ ಮಜಾನೆ ಮಜಾ.

New year 2024: IRCTC has Tour package announced from Bengaluru to Rajasthan

ಹಾಗಾದರೆ 2024ರ ಹೊಸವರ್ಷಕ್ಕೆ ರಾಜಸ್ಥಾನದ ಪ್ರವಾಸೋದ್ಯಮವನ್ನು ಆನಂದಿಸಲು ಬಯಸಿದರೆ ಕೈಗೆಟುಕುವ ದರದಲ್ಲಿ ಘೋಷಣೆ ಮಾಡಿರುವ ಐಆರ್‌ಸಿಟಿಸಿ ಪ್ಯಾಕೇಜ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಪ್ಯಾಕೇಜ್‌ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಪ್ರೇಕ್ಷಣೀಯ ಸ್ಥಳಗಳು, ವಸತಿ, ಆಹಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಬೆಂಗಳೂರಿನಿಂದ ರಾಜಸ್ಥಾನದ ಈ ಪ್ಯಾಕೇಜ್‌ನ ಟಿಕೆಟ್‌ ದರಗಳ ಮಾಹಿತಿಯನ್ನು ಇಲ್ಲಿ ಗಮನಿಸಿ.

ಪ್ಯಾಕೇಜ್‌ನ ಹೆಸರೇನು ಗೊತ್ತಾ?

ಪ್ಯಾಕೇಜ್ - Royal Rajasthan Ex Bengaluru ಆಗಿದ್ದು, ಇದು ಗಮ್ಯಸ್ಥಾನವನ್ನು ಒಳಗೊಂಡಿದೆ. ಇದರಲ್ಲಿ ಜೈಪುರ, ಅಜ್ಮೀರ್, ಪುಷ್ಕರ್, ಜೋಧಪುರ್, ಜೈಸಲ್ಮೇರ್ ಮತ್ತು ಬಿಕಾನೇರ್ ತಾಣಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಈ ಪ್ರಯಾಣದ ವಿಭಾಗವು ವಿಮಾನ ಆಗಿರುತ್ತದೆ.

6 ರಾತ್ರಿ 7 ದಿನಗಳ ಪ್ರವಾಸ

ಈ ವಿಮಾನವು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 08.45ಕ್ಕೆ ನಿರ್ಗಮಿಸಲಿದೆ.
ಇನ್ನು ಈ ಪ್ರವಾಸವು 2024ರ ಜನವರಿ 22ರಂದು ಆರಂಭವಾಗಲಿದ್ದು, 6 ರಾತ್ರಿ 7 ದಿನಗಳ ಪ್ರವಾಸ ಇದಾಗಿದೆ.

ಪ್ರವಾಸಿ ತಾಣಗಳ ವಿವರ

ಜೈಪುರ- ರಾಜಸ್ಥಾನದ ರಾಜಧಾನಿಯು ತನ್ನ ಪ್ರಾಚೀನ ಇತಿಹಾಸದ ಆಕರ್ಷಣೆಯನ್ನು ಹೊಂದಿದೆ. ಇಲ್ಲಿ ಅನೇಕ ಕೋಟೆಗಳು, ಅರಮನೆಗಳು ಇವೆ. ಹಾಗೆಯೇ ಅಜ್ಮೀರ್ ಹಿಂದೂಗಳು ಮತ್ತು ಮುಸ್ಲಿಮರಿಗೆ ಯಾತ್ರಾ ಕೇಂದ್ರ ಆಗುವುದರ ಜೊತೆಗೆ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿ ಉಳಿದಿದೆ.

ಪುಷ್ಕರ್ ಪ್ರವಾಸಿ ತಾಣವು ಸಾವಿರಾರು ಪ್ರವಾಸಿಗರು ಮತ್ತು ಭಕ್ತರಿಗೆ ನೆಚ್ಚಿನ ತಾಣವಾಗಿದೆ. ಇಲ್ಲಿ ಬ್ರಹ್ಮ ದೇವನಿಗೆ ಮುಡಿಪಾದ ದೇವಾಲಯವಿದೆ. ಆಹ್ಲಾದಕರವಾದ ಪುಷ್ಕರ್ ಸರೋವರಕ್ಕೆ ನೆಲೆಯಾಗಿದೆ. ಇನ್ನು ರಾಜಸ್ಥಾನದ ಎರಡನೇ ದೊಡ್ಡ ನಗರವಾದ ಜೋಧ್‌ಪುರ ನೀಲಿ ನಗರ ಎಂದು ಜನಪ್ರಿಯ ಆಗಿದೆ. ಇಲ್ಲಿ ಕೋಟೆಗಳು, ಅರಮನೆಗಳು, ದೇವಾಲಯಗಳು, ಹವೇಲಿಗಳು ಮತ್ತು ಮನೆಗಳು ಸಹ ನೀಲಿ ಬಣ್ಣದ ಎದ್ದುಕಾಣುವ ಛಾಯೆಗಳಲ್ಲಿ ನಿರ್ಮಿಸಲ್ಪಟ್ಟ ಸ್ಥಳಗಳ ಸೌಂದರ್ಯವನ್ನು ಸವಿಯಬಹುದಾಗಿದೆ.

ಜೈಸಲ್ಮೇರ್ ಅನ್ನು ಗೋಲ್ಡನ್ ಸಿಟಿ ಎಂದೇ ಕರೆಯಲಾಗುತ್ತದೆ. ಜೈಸಲ್ಮೇರ್ ಕೋಟೆ, ಪ್ರಾಚೀನ ಹವೇಲಿಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಇನ್ನು ಬಿಕಾನೆರ್‌ ತನ್ನ ಪ್ರಾಚೀನ ಅರಮನೆಗಳು ಮತ್ತು ಕೋಟೆಗಳ ಮೂಲಕ ಪ್ರಖ್ಯಾತಿ ಪಡೆದಿದೆ. ಇದು ಕೆಂಪು ಮರಳುಗಲ್ಲಿನಿಂದ ನಿರ್ಮಿಸಲ್ಪಟ್ಟಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಏರ್‌ಲೈನ್ಸ್‌ನಿಂದ (ಬೆಂಗಳೂರು-ಜೈಪುರ-ಬೆಂಗಳೂರು) ಎಕಾನಮಿ ಕ್ಲಾಸ್‌ನಲ್ಲಿ ಏರ್ ಟಿಕೆಟ್‌ಗಳು ಲಭ್ಯವಾಗಲಿವೆ. ಬೆಳಗಿನ ಉಪಾಹಾರ ಮತ್ತು ಭೋಜನದೊಂದಿಗೆ ರಾತ್ರಿ ಹೋಟೆಲ್ ವಸತಿ ಸೌಲಭ್ಯ ಇರಲಿವೆ.

ಎಸಿ ಕೋಚ್ ಮೂಲಕ ಎಸ್‌ಐಸಿ ಆಧಾರದ ಮೇಲೆ ಪ್ರವಾಸದ ಪ್ರಯಾಣದ ಪ್ರಕಾರ ವರ್ಗಾವಣೆಗಳು ಮತ್ತು ದೃಶ್ಯ ವೀಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಚಾಲಕ ಭತ್ಯೆ, ಟೋಲ್, ಪಾರ್ಕಿಂಗ್ ಮತ್ತು ಮೇಲಿನ ಸೇವೆಗಳಿಗೆ ಅನ್ವಯವಾಗುವ ಎಲ್ಲಾ ತೆರಿಗೆಗಳು ಒಳಗೊಂಡಿರುತ್ತವೆ ಎನ್ನುವ ಮಾಹಿತಿಯನ್ನು ನೀಡಿದೆ.

ಟೂರ್‌ ಪ್ಯಾಕೇಜ್‌ ದರಗಳ ವಿವರ

ಐಆರ್‌ಸಿಟಿಸಿಯು ರಾಜಸ್ಥಾನಕ್ಕೆ ಅತಿ ಕಡಿಮೆ ದರದಲ್ಲಿ ಪ್ರವಾಸ ಪ್ಯಾಕೇಜ್‌ ಅನ್ನು ಪರಿಚಯಿಸಿದೆ. ಇಬ್ಬರೊಂದಿಗೆ ಪ್ರಯಾಣಿಸಿದರೆ ಪ್ರತಿ ವ್ಯಕ್ತಿಗೆ 39,550 ರೂಪಾಯಿ, ಮೂರು ಜನರೊಂದಿಗೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ 37,650 ರೂಪಾಯಿ, ನೀವು ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರೆ ಪ್ರತಿ ವ್ಯಕ್ತಿಗೆ ಟಿಕೆಟ್ 49,350 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.

ಮಕ್ಕಳು ಸಹ ನಿಮ್ಮೊಂದಿಗೆ ಪ್ರಯಾಣಿಸುತ್ತಿದ್ದರೆ, ಹಾಸಿಗೆಯೊಂದಿಗೆ 5 ರಿಂದ 11 ವರ್ಷದ ಮಗುವಿಗೆ 30,450 ರೂಪಾಯಿ, ಹಾಸಿಗೆ ಇಲ್ಲದ ಸೌಲಭ್ಯಕ್ಕೆ 24,400 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಐಆರ್‌ಸಿಟಿಸಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+