ನೇಪಾಳಕ್ಕೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

Nepal travelogue by Suresha Bhatta
ಸಿಂಗಪುರದಿಂದ ಕಾಠ್ಮಂಡುವಿಗೆ ನೇರ ವಿಮಾನಗಳಿದ್ದರೂ ಮಿತವ್ಯಯದಲ್ಲಿ ಪಯಣಿಸಲಿಚ್ಚಿಸುವವರು ನವದೆಹಲಿಯ ಮೂಲಕ ಪಯಣಿಸುವುದು ಉತ್ತಮ. ಭಾರತದಿಂದ ಬಸ್ಸು, ರೈಲು ಅಥವಾ ವಿಮಾನದಲ್ಲಿ ಪಯಣಿಸುವವರಿಗೆ ವಾರಣಾಸಿ, ಪಾಟ್ನಾ, ಕೋಲ್ಕತ್ತಾ, ಸಿಲಿಗುರಿ, ದೆಹಲಿ ಮತ್ತು ಲಕ್ನೋವಿನಿಂದ ನೇಪಾಳಕ್ಕೆ ಪ್ರವೇಶಿಸಬಹುದು. ಅಲ್ಲಿ ಭಾರತದ ಹಾಗೂ ನೇಪಾಳೀ ರೂಪಾಯಿಗಳು ಅಲ್ಲಿ ಚಲಾವಣೆಯಲ್ಲಿವೆ. ಭಾರತೀಯರಿಗೆ ವೀಸಾ ಬೇಕಾಗಿಲ್ಲ. ನೇಪಾಳದಲ್ಲಿ ಕರೆನ್ಸಿ ಕನ್ವರ್ಶನ್ ಸೆಂಟರ್‌ಗಳು ಹಾಗೂ ಒಳ್ಳೆಯ ದರ ಸಿಗುವ ಸಾಧ್ಯತೆ ಕಡಿಮೆಯಾದ್ದರಿಂದ ಸಿಂಗಪುರದಿಂದ ಅಲ್ಲಿಗೆ ಪಯಣಿಸುವವರು ಮುಸ್ತಫಾದಲ್ಲಿ ಹಣ ವಿನಿಮಯ ಮಾಡುವುದು ಉತ್ತಮ.

ಛಳಿ ಮತ್ತು ಮಳೆ ಕಡಿಮೆ ಇರುವ, ಪ್ರವಾಸಕ್ಕೆ ಅನುಕೂಲಕರವಾದ ತಿಂಗಳುಗಳು ಮಾರ್ಚ್, ಆಗಸ್ಟ್ ಮತ್ತು ಸೆಪ್ಟೆಂಬರ್. ಅತಿಥಿಗೃಹ, ಧರ್ಮಶಾಲೆ, ಲಾಡ್ಜ್ ಅಥವಾ ಹೋಟೆಲ್‌ಗಳನ್ನು ಮೊದಲೇ ಕಾದಿರಿಸುವುದು ಒಳ್ಳೆಯದು. ಮ್ಯೂಸಿಯಮ್‌, ಕೇಬಲ್ ಕಾರ್, ಮೌಂಟನ್ ಪ್ಫ್ಲೈಟ್‌ಗಳಲ್ಲಿ ಪ್ರವೇಶದರ ನೇಪಾಳೀಯರಿಗೆ ಕಡಿಮೆ, ಭಾರತೀಯರಿಗೆ ಸ್ವಲ್ಪ ಜಾಸ್ತಿ ಮತ್ತು ಇತರ ದೇಶದವರಿಗೆ ಇನ್ನೂ ಜಾಸ್ತಿ. ಹಾಗಾಗಿ ಓಡಾಡುವ ಎಲ್ಲ ಕಡೆ ನಿಮ್ಮ ಗುರುತಿನ ಚೀಟಿಯನ್ನು ಭದ್ರವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಿಬರಲು ಕನಿಷ್ಟ 8-10 ದಿನಗಳು ಬೇಕು.

ಕಾಠ್ಮಂಡುವಿನಲ್ಲಿ ಆಂಗನ್, ರಾಮೇಶ್ವರ್, ನಂದನ ಎಂಬ ಕೆಲವೇ ಸಂಖ್ಯೆಯ ಸಸ್ಯಾಹಾರೀ ಉಪಾಹಾರಮಂದಿರಗಳಿದ್ದು ಹುಡುಕುವುದು ಸ್ವಲ್ಪ ಕಷ್ಟವಾಗಬಹುದು. ಆಂಗನ್ ಸ್ವಲ್ಪ ದುಬಾರಿಯೆನಿಸಿದರೂ ರುಚಿಕರವಾಗಿದ್ದು, ಪ್ರಸಿದ್ಧವಾಗಿದೆ. ಕಾಠ್ಮಂಡುವಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಬಸ್, ಮೈಕ್ರೋಸ್, ಟೆಂಪೋ ಮತ್ತು ಟ್ಯಾಕ್ಸಿಗಳಿವೆ. ಬಸ್ ಮತ್ತು ಮೈಕ್ರೋಸ್‌ನಲ್ಲಿ ನಗರವಲಯದೊಳಗೆ ಪಯಣಿಸಲು 10ರಿಂದ 20ರೂಪಾಯಿ. ಪಶುಪತಿನಾಥ ಮಂದಿರದಲ್ಲಿ ನಾಲ್ಕು ಕನ್ನಡಿಗ ಪುರೋಹಿತರಿದ್ದು ದೇವಸ್ಥಾನದ ಪೂಜೆಯ ವೇಳೆಯ ನಂತರ ನಿಮಗೆ ಅಗತ್ಯವಾದ ಮಾಹಿತಿಗಳನ್ನು ಸಂತೋಷವಾಗಿ ನೀಡುತ್ತಾರೆ.

ವಿ.ಸೂ: Pashupatinath - Holy of Hindu Holies ಎಂಬ ಪುಸ್ತಕದಿಂದ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+