Narasapur-Bengaluru Weekly special train: ವಿಶೇಷ ರೈಲು ಸೇವೆಗಳ ವಿಸ್ತರಣೆ, ದಿನಾಂಕ, ಸಮಯಗಳ ವಿವರ ತಿಳಿಯಿರಿ

ಬೆಂಗಳೂರು, ಅಕ್ಟೋಬರ್‌, 11: ದಕ್ಷಿಣ ಮಧ್ಯ ರೈಲ್ವೆ (South Central Railway) ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳಲ್ಲಿ ಆಯ್ದ ದಿನಾಂಕಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನರಸಾಪುರದ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು (SMVT) ಸಾಪ್ತಾಹಿಕ ವಿಶೇಷ ರೈಲು ಸೇವೆಗಳನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದೆ. ಹಾಗಾದರೆ ರೈಲುಗಳ ಸಮಯ, ದಿನಾಂಕಗಳ ವಿವರವನ್ನು ಇಲ್ಲಿ ತಿಳಿಯಿರಿ.

07153 ಸಂಖ್ಯೆಯ ರೈಲು ಸೇವೆಯು ನರಸಾಪುರದಿಂದ ಶುಕ್ರವಾರ ಮಧ್ಯಾಹ್ನ 15:50 ಗಂಟೆಗೆ ಹೊರಟು ಮರುದಿನ ಶುಕ್ರವಾರ 09:30 ಗಂಟೆಗೆ ಬೆಂಗಳೂರಿನ ಸರ್‌.ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT)ಗೆ ತಲುಪುತ್ತದೆ. ಈಗ ಅಕ್ಟೋಬರ್ 13, 20, 27 ರಂದು ಲಭ್ಯವಿರುತ್ತದೆ. ಮತ್ತು ನವೆಂಬರ್ 3, 10, 17 ಮತ್ತು 24 ಒಟ್ಟು ಏಳು ಹೆಚ್ಚುವರಿ ಸೇವೆಗಳನ್ನು ಒದಗಿಸಲಿದೆ ಎಂದು ತಿಳಿಸಿದೆ.

Narasapur-Bengaluru Weekly special train services extension, Know details of date, timings

ಅದೇ ರೀತಿ, 07154 ಸಂಖ್ಯೆಯ ರೈಲು ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT)ನಿಂದ ಶನಿವಾ ಬೆಳಗ್ಗೆ 10:50 ಗಂಟೆಗೆ ಹೊರಟು ಮರುದಿನ ಶುಕ್ರವಾರ ಬೆಳಗ್ಗೆ 06:00 ಗಂಟೆಗೆ ನರಸಾಪುರವನ್ನು ತಲುಪುತ್ತದೆ. ಇದನ್ನು ಅಕ್ಟೋಬರ್ 14, 21, 28ರಂದು ವಿಸ್ತರಿಸಲಾಗುವುದು. ಮತ್ತಿ ನವೆಂಬರ್ 4, 11, 18, 25 ಹೀಗೆ ಒಟ್ಟು 7 ಹೆಚ್ಚುವರಿ ಸೇವೆಗಳನ್ನು ಪ್ರಯಾಣಿಕರಿಗೆ ಒದಗಿಸುತ್ತದೆ ಎನ್ನುವ ಮಾಹಿತಿಯನ್ನು ನೀಡಿದೆ.

ಕೋಚ್‌ಗಳು ಹೀಗಿವೆ

1. 2 ಎಸಿ ಪ್ರಥಮ ದರ್ಜೆ ಕಂ ಎಸಿ 2 ಟೈರ್‌ ಕೋಚ್‌ಗಳು

2. 2 ಎಸಿ 2 ಟೈರ್‌ ಕೋಚ್‌ಗಳು

3. 2 ಎಸಿ 3 ಟೈರ್‌ ಕೋಚ್‌ಗಳು

4. 12 ಸ್ಲೀಪರ್ ಕ್ಲಾಸ್ ಕೋಚ್‌ಗಳು

5. 2 ಜನರಲ್‌ ಕೋಚ್‌ಗಳು ಮತ್ತು 2 ಲಗೇಜ್ ಕಂ ಬ್ರೇಕ್ ವ್ಯಾನ್‌ಗಳು ಇರಲಿವೆ.

ಟಿಕೆಟ್‌ ಬುಕ್‌ ಮಾಡುವ ವಿಧಾನ

ಪ್ರಯಾಣಿಕರು ವಿಶೇಷ ರೈಲುಗಳ ಟಿಕೆಟ್‌ ಅನ್ನು ಸುಲಭವಾಗಿ ಬುಕ್‌ ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ನರಸಾಪುರದಿಂದ ಸರ್‌.ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಸಾಪ್ತಾಹಿಕ 07153/07154 ಸಂಖ್ಯೆಯ ವಿಶೇಷ ರೈಲುಗಳನ್ನು ಬಿಡಲಾಗಿದೆ. ನೀವು ಈ ವಿಶೇಷ ರೈಲು ಟಿಕೆಟ್‌ ಬುಕ್‌ ಮಾಡಲು ರೈಲ್ವೆ ನಿಲ್ದಾಣದ ಮುಖ್ಯ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ಅಥವಾ ಅಧಿಕೃತ ವೆಬ್‌ಸೈಟ್ www.irctc.co.in ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

ಇನ್ನು ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆಗೆ ಸಂಬಂಧಿಸಿದ ನಿಖರವಾದ ವಿವರಗಳಿಗಾಗಿ, ಪ್ರಯಾಣಿಕರು www.enquiry.indianrail.gov.inಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+