Mysuru-Belagavi Express train: ವೇಳಾಪಟ್ಟಿ ಪರಿಷ್ಕರಣೆ, ಸಮಯ, ದಿನಾಂಕ, ಮಾರ್ಗಗಳ ವಿವರ ತಿಳಿಯಿರಿ

ಮೈಸೂರು, ಸೆಪ್ಟೆಂಬರ್‌, 29: ಹೊಸದಾಗಿ ವಿಸ್ತರಿಸಲಾದ ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲಿನ ಪರಿಷ್ಕರಣೆಯ ವೇಳಾಪಟ್ಟಿ ಅಕ್ಟೋಬರ್ 1ರಿಂದ ಜಾರಿಯಾಗಲಿದೆ. ಹಾಗಾದರೆ ಸಮಯಗಳು ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.

ಈ ಪರಿಷ್ಕರಣೆಯ ವೇಳಾಪಟ್ಟಿಯು ಭಾರತೀಯ ರೈಲ್ವೆಯ 2023-24ನೇ ಸಾಲಿನ ಭಾಗವಾಗಿದ್ದು, ಇದು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪರಿಷ್ಕರಣೆ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ಅಕ್ಟೋಬರ್ 1ರಿಂದ ಮೈಸೂರಿನಿಂದ ರಾತ್ರಿ 08:45 ಗಂಟೆಗೆ ಹೊರಡುತ್ತದೆ. ನಂತರ ಮಾರನೇ ಬೆಳಗ್ಗೆ 08:45ಕ್ಕೆ ಬೆಳಗಾವಿ ತಲುಪುತ್ತದೆ. ಪ್ರಸ್ತುತ, ರೈಲು ಮೈಸೂರಿನಿಂದ ರಾತ್ರಿ 08:30ಕ್ಕೆ ಹೊರಟು ಮಾರನೇ ದಿನ ಬಳಗ್ಗೆ 10:45ಕ್ಕೆ ಬೆಳಗಾವಿಗೆ ಆಗಮಿಸುತ್ತದೆ.

mysuru-belagavi-express-trains-timings

ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ಬೆಳಗಾವಿಯಿಂದ ಸಂಜೆ 06:00 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 05:55ಕ್ಕೆ ಮೈಸೂರು ತಲುಪುತ್ತದೆ. ಈ ವೇಳಾಪಟ್ಟಿ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ. ಪ್ರಸ್ತುತ, ರೈಲು ಬೆಳಗಾವಿಯಿಂದ ರಾತ್ರಿ 8 ಗಂಟೆಗೆ ಹೊರಟು, ಮಾರನೇ ದಿನ 07:10ಕ್ಕೆ ಮೈಸೂರಿಗೆ ಆಗಮಿಸುತ್ತಿದೆ.

ಅಕ್ಟೋಬರ್ 1ರಿಂದ ಪ್ರಯಾಣಕ್ಕಾಗಿ NTES ಅಪ್ಲಿಕೇಶನ್‌ನಲ್ಲಿ ಪರಿಷ್ಕೃತ ವೇಳಾಪಟ್ಟಿಯನ್ನು ನವೀಕರಿಸಲಾಗಿದೆ. ಈ ಅಪ್ಲಿಕೇಶನ್‌ನಿಂದ ತೆಗೆದುಕೊಳ್ಳಲಾದ ರೈಲು ಸಂಖ್ಯೆ 17301/02 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್‌ಗಾಗಿ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ನವೀಕರಿಸಿದ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರೈಲು ಸಂಖ್ಯೆ, ಸ್ಥಳ ಮತ್ತು ಸಮಯಗಳ ವಿವರ:

ಕ್ರಮ
ಸಂಖ್ಯೆ
17302 ಸಮಯ ಸ್ಥಳ 17301 ಸಮಯ
1 5.55 ಮೈಸೂರು 20.45
2 4.29 ಕೃಷ್ಣರಾಜನಗರ 21.2
3 3.38 ಹೊಳೆ ನರಸೀಪುರ 22.12
4 3.02 ಹಾಸನ 22.47
5 2.1 ಅರಸೀಕೆರೆ 23.5
6 1.11 ಕಡೂರು 0.22
7 1 ಬೀರೂರು 00.33
8 00.21 ಚಿಕ್ಕಜಾಜೂರ್ 1.2
9 23.45 ದಾವಣಗೆರೆ 2
10 23.27 ಹರಿಹರ 2.17
11 23.07 ರಾಣಿಬೆನ್ನೂರು 2.39
12 22.47 ಬ್ಯಾಡಗಿ 2.55
13 22.3 SMM ಹಾವೇರಿ 3.12
14 22 ಯಲವಿಗಿ 4.15
15 21.2 ಎಸ್‌ಎಸ್‌ಎಸ್ ಹುಬ್ಬಳ್ಳಿ 5.25
16 20.25 ಧಾರವಾಡ 5.45
17 19.3 ಅಳ್ನಾವರ 6.24
18 18.5 ಲಂಡ 7.1
19 18.2 ಖಾನಾಪುರ 7.35
20 18 ಬೆಳಗಾವಿ 8.45
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+