Tour packages: 2024ರ ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದ್ದೀರಾ- ಇಲ್ಲಿದೆ ಸೂಕ್ತ ಪ್ಯಾಕೇಜ್, ದರ, ತಾಣಗಳ ವಿವರ
ಡಿಸೆಂಬರ್ ಬಂತೆಂದರೆ ಸಾಕು ಬಹುತೇಕ ಮಂದಿ ಪ್ರವಾಸ ಕೈಗೊಳ್ಳುವ ಯೋಜನೆಯಲ್ಲಿರುತ್ತಾರೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಡಿಸೆಂಬರ್ ಅಂತ್ಯವಾಗಿ ಹೊಸ ವರ್ಷವೂ ಬರಲಿದ್ದು, ಈ ವೇಳಗೂ ಪ್ರವಾಸ ಮಾಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗಾದರೆ ಈ ವೇಳೆ ಪ್ರವಾಸ ಕೈಗೊಳ್ಳುವವರಿಗೆ ಕಡಿಮೆ ವೆಚ್ಚದ ಸೂಕ್ತ ಪ್ಯಾಕೇಜ್‌ಗಳ ವಿವರ ಇಲ್ಲಿವೆ. ಹಾಗಾದರೆ ಪ್ರವಾಸ ಎಲ್ಲಿಗೆ ಹಾಗೂ ಆರಂಭವಾಗುವ ದಿನಾಂಕಗಳ ವಿವರಗಳನ್ನು ಇಲ್ಲಿ ತಿಳಿಯಿರಿ.
ಈ ತಿಂಗಳ ರಜಾದಿನಗಳು ಹಾಗೂ ಕ್ರಿಸ್ಮಸ್ ವೇಳೆ ಪ್ರವಾಸ ಪ್ರಿಯರಿಗೆ KSRTC ಸಿಹಿಸುದ್ದಿಯೊಂದನ್ನು ನೀಡಿದೆ. ಬಜೆಟ್ ಟೂರಿಸಂ ಸೆಲ್ ಈ ಹಬ್ಬದ ಸೀಸನ್‌ಗಾಗಿ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಇದನ್ನು ವಿಶೇಷವಾಗಿ 'ಜಂಗಲ್ ಬೆಲ್ಸ್' ಎಂದು ಕರೆಯಲಾಗುತ್ತದೆ. ನೆಯ್ಯಂಟಿಂಕರ ಡಿಪೋದಿಂದ ಪ್ರಾರಂಭವಾಗಲಿವೆ.

ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರು ಗವಿ, ಪರುಂತುಂಪಾರ, ವಾಗಮೋನ್, ವಯನಾಡ್, ಮುನ್ನಾರ್, ಅತಿರಪಲ್ಲಿ ಮತ್ತು ಮಲಕಪ್ಪರ ಸೇರಿದಂತೆ ಕೇರಳದ ಸ್ವರ್ಗಂತಿರುವ ಪ್ರಮುಖ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ನಡಿಮೆ ದರಸ ಬಜೆಟ್‌ನ ಟೂರ್ ಪ್ಯಾಕೇಜ್ ಇದಾಗಿದೆ. ಈ ಪ್ರವಾಸದಲ್ಲಿ ಪ್ರಯಾಣಿಕರು ಆಕರ್ಷಕ ಸ್ಪರ್ಧೆಗಳನ್ನು ಕೂಡ ಕಾಣಬಹುದಾಗಿದೆ. ಗವಿ ಮತ್ತು ಪರುತುಂಪಾರಕ್ಕೆ ಒಂದು ದಿನದ ಪ್ರವಾಸದ ವಿವರಗಳನ್ನು ಇಲ್ಲಿ ಗಮನಿಸಿ.
ಪ್ರವಾಸಿ ತಾಣಗಳು ಹಾಗೂ ದಿನಾಂಕಗಳ ವಿವರ
1. ಗವಿ ಮತ್ತು ಪರುತುಂಪಾರ ಒಂದು ದಿನದ ಪ್ರವಾಸ- ಡಿಸೆಂಬರ್ 3, 24, ಮತ್ತು 31
2. ವಾಗಮನ್ ಎರಡು ದಿನಗಳ ಪ್ರವಾಸ- ಡಿಸೆಂಬರ್ 27 & 28
3. ವಯನಾಡ್ ಪ್ರವಾಸ- ಡಿಸೆಂಬರ್ 30, 31, ಜನವರಿ 1 & 2 (2024)
4. ಕ್ರಿಸ್ಮಸ್ ವಿಶೇಷ ಸಂಪೂರ್ಣ ಮುನ್ನಾರ್ ಯಾತ್ರೆ- ಡಿಸೆಂಬರ್ 23, 24 ಮತ್ತು 25
5. ಕಪ್ಪುಕ್ಕಾಡು ಮತ್ತು ಪೊನ್ಮುಡಿ ಒಂದು ದಿನದ ಪ್ರವಾಸ- ಡಿಸೆಂಬರ್ 9, 17, 24 ಮತ್ತು 31
6. ತಿರುವೈರಾಣಿಕುಲಂ ಭಕ್ತಿ ತೀರ್ಥಯಾತ್ರೆ- ಡಿಸೆಂಬರ್ 27, 30 ಮತ್ತು ಜನವರಿ 2 (2024)
7. ವಂಡರ್ಲಾ ವಿಶೇಷ ಯಾತ್ರೆ:- ಡಿಸೆಂಬರ್ 28
8. ಅತಿರಪಳ್ಳಿ, ವಜಚಲ್ ಮತ್ತು ಮಲಕಪ್ಪಾರಕ್ಕೆ ಹೊಸ ವರ್ಷದ ಪ್ರವಾಸ- ಡಿಸೆಂಬರ್ 30 ಮತ್ತು 31
ಈ ಆಕರ್ಷಕ ಪ್ಯಾಕೇಜ್‌ಗಳ ಹೊರತಾಗಿಯೂ KSRTCಯ ನೆಯ್ಯಟ್ಟಿಂಕರ ಘಟಕವು ಈಗ ಅರಬ್ಬಿ ಸಮುದ್ರದಲ್ಲಿ ನೆಫೆರ್ಟಿಟಿ ಐಷಾರಾಮಿ ವಿಹಾರದ ಮುಂಬರುವ ಋತುವಿಗೆ ಅನುಸಾರವಾಗಿ ಬುಕಿಂಗ್‌ಗಳನ್ನು ಪ್ರಾರಂಭ ಮಾಡುತ್ತದೆ. ಹವಾಮಾನ ಪರಿಸ್ಥಿತಿಗಳ ಅನುಗುಣವಾಗಿ ಪ್ರಯಾಣದ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ ಎಂದು ಎಂದು ನಿಗಮ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಈ ಪ್ರವಾಸ ಪ್ಯಾಕೇಜ್ ಅನ್ನು ಕೇರಳದ ಕೆಎಸ್‌ಆರ್‌ಟಿಸಿ ಘೋಷಣೆ ಮಾಡಿದೆ. ಅದರಂತೆಯೇ ಹಬ್ಬಗಳ್ಳು, ಜಾತ್ರೆಗಳು, ವಿಶೇಷ ಆಚರಣೆಗಳ ಸಂದರ್ಭಗಳಲ್ಲಿ ಕರ್ನಾಟಕದ ಕೆಎಸ್‌ಆರ್‌ಟಿಸಿಯು ಕೂಡ ಪ್ರವಾಸಿಗರ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬರುತ್ತಿದೆ. ಅದರಲ್ಲೂ ಇಡೀ ದೇಶದಲ್ಲೇ ಸಾರಿಗೆ ಬಸ್‌ಗಳ ವಿಭಾಗದಲ್ಲಿ ನಮ್ಮ ಹೆಮ್ಮೆಯ ಕರ್ನಾಟದ ರಥ KSRTC ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದೆ. ಇದು ನಮ್ಮ ಕರುನಾಡ ಹೆಮ್ಮೆಯಾಗಿದೆ.












Click it and Unblock the Notifications