IRCTC: ಕೇವಲ ₹5,175ನಲ್ಲಿ ಉದಯಪುರಕ್ಕೆ ಪ್ರವಾಸ ಕೈಗೊಳ್ಳಿ, ದಿನಾಂಕಗಳ ವಿವರವನ್ನು ಪರಿಶೀಲಿಸಿ

ನವದೆಹಲಿ, ಮಾರ್ಚ್‌, 25: ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಅನೇಕ ಸರ್ಕಾರಿ ನೌಕರರು ಬೇಸಿಗೆಯ ರಜೆಯನ್ನು ಹೇಗೆ ಕಳೆಯಬೇಕು ಎಂದು ಯೋಚಿಸುತ್ತಿರುತ್ತಾರೆ. ಇನ್ನು ಕೆಲವರು ಈ ಸಮಯದಲ್ಲಿ ಪ್ರವಾಸ ಹೋಗಲು ಪ್ಲಾನ್‌ ರೂಪಿಸಿರುತ್ತಾರೆ. ಇದೀಗ ಐಆರ್‌ಸಿಟಿಸಿಯು ವಾರಾಂತ್ಯದ ಪ್ರವಾಸ ಕೈಗೊಳ್ಳುವವರಿಗೆ ಕೈಗೆಟಕುವ ದರದಲ್ಲಿ ಉತ್ತಮ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಪ್ರವಾಸ ಎಲ್ಲಿಗೆ? ಪ್ರಾರಂಭವಾಗುವುದು ಯಾವಾಗ? ಮತ್ತು ದರ ಎಷ್ಟಾಗುತ್ತದೆ ಎನ್ನುವ ವಿವರಗಳನ್ನು ಇಲ್ಲಿ ತಿಳಿಯಿರಿ.

ಐಆರ್‌ಸಿಟಿಸಿಯು ಉದಯಪುರಕ್ಕೆ ವಾರಾಂತ್ಯದ ಪ್ರವಾಸವನ್ನು ಘೋಷಣೆ ಮಾಡಿದೆ. ಉದಯಪುರದಲ್ಲಿನ ಪೃಕೃತಿ ಸೌಂದರ್ಯವನ್ನು ಸವಿಯಲು ಈ ಪ್ರವಾಸ ಪ್ಯಾಕೇಜ್‌ ಉತ್ತಮವಾಗಿದೆ. ಭಾರತೀಯ ರೈಲ್ವೆಯ ವಿಭಾಗವಾದ IRCTCಯಿಂದ ಮುಂದಿನ ವಾರ ಮಾರ್ಚ್ 30ರಂದು ಉದಯಪುರಕ್ಕೆ ರೈಲಿನ ಮುಖಾಂತರ ಪ್ರವಾಸ ಆರಂಭವಾಗಲಿದೆ.

IRCTC Tour Package announcement to Udaipur: Check date and price details

ಪ್ರವಾಸ ಪ್ಯಾಕೇಜ್‌ನ ವಿವರ

ಇದು 3 ರಾತ್ರಿ 4 ಹಗಲುಗಳ ಪ್ರವಾಸ ಇದಾಗಿದೆ. ಪ್ರವಾಸ ಪ್ಯಾಕೇಜ್‌ 5,175 ರೂಪಾಯಿಯಿಂದ ಆರಭವಾಗಲಿದ್ದು, ಇದರಲ್ಲಿ ರೈಲು ಟಿಕೆಟ್, ವಸತಿ, ಊಟ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಯು ಇರುತ್ತದೆ. ಅತ್ಯದ್ಭುತ ಸ್ಥಳಗಳಲ್ಲಿ ಒಂದಾಗಿರುವ ಸರೋವರಗಳ ನಗರ, ಉದಯಪುರವನ್ನು ವೀಕ್ಷಿಸಲು ಇದು ಉತ್ತಮ ಸಮಯವಾಗಿದೆ. ಇಲ್ಲಿ ನೀವು ರಾಜಸ್ಥಾನಿ ಪಾಕ ಪದ್ಧತಿಯನ್ನು ಸಹ ಆನಂದಿಸಬಹುದಾಗಿದೆ. ಜೊತೆಗೆ ಕೆಲವು ಸ್ಥಳೀಯ ನೃತ್ಯ ವೀಕ್ಷಣೆ ಜೊತೆ ಬೆಳ್ಳಿ ಶಾಪಿಂಗ್ ಕೂಡ ಮಾಡಬಹುದಾಗಿದೆ.

ಪ್ರವಾಸ ಆರಂಭವಾಗುವುದು ಎಲ್ಲಿಂದ?

ಈ ಪ್ರವಾಸ ಪ್ಯಾಕೇಜ್ ದೆಹಲಿಯಿಂದ ಪ್ರಾರಂಭವಾಗಲಿದ್ದು ಇಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮೊದಲ ದಿನ ದೆಹಲಿ ರೈಲು ನಿಲ್ದಾಣದಿಂದ ಪ್ರವಾಸ ಆರಂಭವಾಗಲಿದೆ. ಉದಯಪುರಕ್ಕೆ ಆಗಮಿಸಿದ ನಂತರ ಹೋಟೆಲ್‌ಗೆ ಭೇಟಿ ನೀಡಬಹುದಾಗಿದೆ. ನಂತರ, ಪ್ರವಾಸಿಗರು ಇತರ ಆಕರ್ಷಣಿಯ ಸ್ಥಳಗಳಾದ ಸಹೇಲಿಯೋನ್ ಕಿ ಬರಿ, ಸುಖದಿಯಾ ಸರ್ಕಲ್, ಸಿಟಿ ಪ್ಯಾಲೇಸ್ ಮ್ಯೂಸಿಯಂ ಮತ್ತು ಭಾರತೀಯ ಲೋಕ ಕಲಾ ಮಂಡಾವನ್ನು ವೀಕ್ಷಣೆ ಮಾಡಬಹುದು.

ದರಗಳ ವಿವರವನ್ನು ತಿಳಿಯಿರಿ

ಪ್ರವಾಸಿಗರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ನಗರದಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿ ತಮ್ಮ ಆಯ್ಕೆಯ ವಾಹನವನ್ನು ಪ್ರವಾಸಿ ತಾಣಗಳನ್ನು ನೋಡಲು ತೆಗೆದುಕೊಂಡೊಯ್ಯಬಹುದು. ಪ್ರವಾಸ ಪ್ಯಾಕೇಜ್ ರೈಲಿನಲ್ಲಿ ವಸತಿ ಮತ್ತು ಊಟವನ್ನು ಸಹ ಕಲ್ಪಿಸಲಾಗುತ್ತದೆ. ಈ ಪ್ರವಾಸ ಪ್ಯಾಕೇಜ್‌ನ ವೆಚ್ಚವು 5,100 ರಿಂದ 11,000 ರೂಪಾಯಿವರೆಗೂ ಇರುತ್ತದೆ.

ಪ್ರಯಾಣಿಕರು ತಮ್ಮ ಅಗತ್ಯತೆಗಳು ಮತ್ತು ಆಕ್ಯುಪೆನ್ಸಿಗೆ ಸೂಕ್ತವಾದ ಬೆಲೆಯನ್ನು ಆಯ್ಕೆ ಮಾಡಬಹುದು. ಸರ್ಕಾರಿ ನೌಕರರು ತಮ್ಮ LTC ಬಳಸುವ ಆಯ್ಕೆಯನ್ನು ಆರಿಸಿಕೊಳ್ಳಬಹುದು. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಟೂರ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ಕಂಫರ್ಟ್ ಅಥವಾ ಸ್ಟ್ಯಾಂಡರ್ಡ್ ವಿಭಾಗಗಳಲ್ಲಿ ಸೀಟ್‌ಗಳನ್ನು ಬುಕ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸಗಳ ಪ್ಯಾಕೇಜ್‌ಗಳು 5,175 ರೂಪಾಯಿಯಿಂದ ಪ್ರಾರಂಭವಾಗುತ್ತವೆ. ಹಾಗೆಯೆ ಹೆಚ್ಚಿನ ವಿವರಗಳನ್ನು IRCTC ವೆಬ್‌ಸೈಟ್‌ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದಾಗಿದೆ.

IRCTC Tour Package announcement to Udaipur: Check date and price details

ಊಟಿಗೆ ಪ್ರವಾಸ ಪ್ಯಾಕೇಜ್‌ ಘೋಷಣೆ

ಹಾಗೆಯೇ ಹೈದರಾಬಾದ್‌ನಿಂದ ಸ್ವರ್ಗದಂತಿರುವ ಊಟಿಯ ಗಿರಿಧಾಮಕ್ಕೆ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ರವಾಸ ಪ್ಯಾಕೇಜ್‌ನ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಈ ಪ್ಯಾಕೇಜ್ ಪ್ರವಾಸಿಗರಿಗೆ ಊಟಿ ಮತ್ತು ಅಲ್ಲಿನ ಸುತ್ತಮುತ್ತಲಿನ ರಮಣೀಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವನ್ನು ಕಲ್ಪಿಸಿದೆ. ಪ್ರಯಾಣಿಕರು ಆರಾಮದಾಯಕವಾಗಿ ಯಾವುದೇ ತೊಂದರೆಯಿಲ್ಲದ ಪ್ರಯಾಣದ ಅನುಭವವನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ.

ಮಾರ್ಚ್ 28 ರಂದು ಈ ಪ್ರವಾಸ ಆರಂಭವಾಗಲಿದ್ದು, ಜೂನ್ 27ಕ್ಕೆ ಅಂತ್ಯವಾಗಲಿದೆ. ಇದು 6 ಹಗಲು ಮತ್ತು 5 ರಾತ್ರಿಯ ಪ್ರವಾಸವಾಗಿದೆ. ಪ್ಯಾಕೇಜ್‌ನ ದರಗಳ ವಿವರವನ್ನು ನೋಡುವುದಾದರೆ, ಪ್ರತಿ ವ್ಯಕ್ತಿಗೆ 9,280 ರೂಪಾಯಿ ವೆಚ್ಚ ಆಗಲಿದೆ. ರೈಲಿನ ಮೂಲಕ ಪ್ರಯಾಣ ಆರಂಭವಾಗಲಿದ್ದು, ಇಲ್ಲಿ ಹೋಟೆಲ್‌, ವಸತಿ, ಕ್ಯಾಬ್ ಸೌಲಭ್ಯ, ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇದರೊಂದಿಗೆ ನೀವು ಊಟಿ ಮತ್ತು ಅದರ ಸುತ್ತಮುತ್ತಲಿನ ಆಕರ್ಷಣೀಯ ಪ್ರವಾಸಿ ತಾಣಗಳಿಗೂ ಸಹ ಭೇಟಿ ನೀಡಬಹುದಾಗಿದೆ.

ಇನ್ನು ಪ್ರಸಿದ್ಧ ಊಟಿ ಸರೋವರಕ್ಕೆ ಭೇಟಿ ನೀಡಿ ಆನಂದಿಸಬಹುದಾಗಿದೆ. ಪ್ರವಾಸಿಗರು ಅಲ್ಲಿ ಬೋಟಿಂಗ್ ಸೇರಿದಂತೆ ಇತರ ಜಲ ಕ್ರೀಡೆಗಳನ್ನು ಸಹ ಆನಂದಿಸಬಹುದಾಗಿದೆ. ಜೊತೆಗೆ ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿರುವ ಬೆರಗುಗೊಳಿಸುವ ಬೊಟಾನಿಕಲ್ ಗಾರ್ಡನ್‌ಗಳಿಗೂ ತೆರಳಬಹುದಾಗಿದೆ. ಇದರೊಂದಿಗೆ ದೊಡ್ಡಬೆಟ್ಟ ಶಿಖರಕ್ಕೆ ಭೇಟಿ ನೀಡುವುದು, ನೀಲಗಿರಿ ಬೆಟ್ಟಗಳಲ್ಲಿನ ಅತೀ ಎತ್ತರದ ಪ್ರದೇಶ ಮತ್ತು ಸುಂದರವಾದ ಪೈಕಾರ ಜಲಪಾತದ ಸೊಬಗನ್ನು ಸವಿಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+