IRCTC: ಬೇಸಿಗೆಯಲ್ಲಿ ಲಡಾಖ್‌ಗೆ ಪ್ರವಾಸ ಕೈಗೊಳ್ಳುವವರಿಗೆ ಈ ಪ್ಯಾಕೇಜ್ ಉತ್ತಮ, ಮಾಹಿತಿ ತಿಳಿಯಿರಿ
ಐಆರ್‌ಸಿಟಿಸಿಯು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾದ ಲೆಹ್-ಲಡಾಖ್‌ಗೆ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ.
ನವದೆಹಲಿ, ಮಾರ್ಚ್, 22: ಐಆರ್‌ಸಿಟಿಸಿಯು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾದ ಲೆಹ್-ಲಡಾಖ್‌ಗೆ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ರದೇಶಕ್ಕೆ ಪ್ರತಿ ವರ್ಷವೂ ಸಹ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ನೀವು ಸಹ ಬೇಸಿಗೆ ಕಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದರೆ, ಐಆರ್‌ಸಿಟಿಸಿ ಘೋಷಿಸಿದ ಪ್ರವಾಸ ಪ್ಯಾಕೇಜ್ ಉತ್ತಮವಾಗಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.
7 ಹಗಲು ಮತ್ತು 6 ರಾತ್ರಿಗಳ ಪ್ರವಾಸ ಪ್ಯಾಕೇಜ್ ಇದ್ದಾಗಿದ್ದು, ಈ ಪ್ರವಾಸ ಮೇ 4ರಂದು ಹೈದರಾಬಾದ್‌ನಿಂದ ಪ್ರಾರಂಭವಾಗುತ್ತದೆ. ಹೈದರಾಬಾದ್‌ನಿಂದ ಲೇಹ್‌ಗೆ ಹಿಂದಿರುಗಲು ವಿಮಾನಯಾನ ಶುಲ್ಕ, ಬಸ್, ಹೋಟೆಲ್, ಆಹಾರ, ಮಾರ್ಗದರ್ಶಿ ಮತ್ತು ವಿಮೆಯ ಸೌಲಭ್ಯಗಳನ್ನು ಕೂಡ ಈ ಪ್ಯಾಕೇಜ್‌ನಲ್ಲಿ ಕಲ್ಪಿಸಲಾಗಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ದರಗಳ ವಿವರ ಇಲ್ಲಿದೆ
ಪ್ರವಾಸ ಪ್ಯಾಕೇಜ್ ಮೂರು ವಿಭಿನ್ನ ಆಕ್ಯುಪೆನ್ಸಿ ವರ್ಗಗಳಲ್ಲಿ ಲಭ್ಯವಿದೆ. ಸಿಂಗಲ್, ಡಬಲ್ ಮತ್ತು ತ್ರಬಲ್ ಎನ್ನುವ ಮೂರು ವರ್ಗಗಳಿರುತ್ತವೆ. ಕಂಪರ್ಟ್‌ಮೆಂಟ್ ವರ್ಗದಲ್ಲಿ ಮೂವರಿಗೆ 47,830 ರೂಪಾಯಿ, ಇಬ್ಬರಿಗೆ 48,560 ರೂಪಾಯಿ ಮತ್ತು ಸಿಂಗಲ್ ಆಕ್ಯುಪೆನ್ಸಿಗೆ 54,500 ರೂಪಾಯಿ ಆಗಲಿದೆ. ಇನ್ನು 5 ರಿಂದ 11 ವರ್ಷದೊಳಗಿನ ಮಕ್ಕಳನ್ನು ಕೂಡ ಕರೆದುಕೊಂಡು ಹೋಗಬಹುದಾಗಿದೆ. ಮಕ್ಕಳಿಗೆ ಹಾಸಿಗೆಯೊಂದಿಗೆ 45,575 ರೂಪಾಯಿ, ಹಾಸಿಗೆಯಿಲ್ಲದೆ 41,750 ರೂಪಾಯಿ ವೆಚ್ಚ ಆಗಲಿದೆ.
ಪ್ರವಾಸ ಪ್ಯಾಕೇಜ್‌ನ ಮುಖ್ಯಾಂಶಗಳು
ಇದು 7 ದಿನ ಹಗಲು ಮತ್ತು 6 ರಾತ್ರಿ ಪ್ರವಾಸ ಆಗಿದೆ. ಇದರಲ್ಲಿ ತುರ್ತುಕ್‌ಗೂ ಕೂಡ ಭೇಟಿ ನೀಡಬಹುದಾಗಿದೆ. ಪ್ರವಾಸದ ಸಮಯದಲ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯು ಇರಲಿದೆ. ಸಾರಿಗೆಯ ವಿಧಾನವು ವಿಮಾನವಾಗಿರುತ್ತದೆ. ನೀವು IRCTC ವೆಬ್‌ಸೈಟ್, irctctourism.com ಅಥವಾ IRCTC ಪ್ರವಾಸಿ ಸೌಲಭ್ಯ ಕೇಂದ್ರ, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಈ ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಬಹುದಾಗಿದೆ.

ಚಂಡೀಗಢ, ಶಿಮ್ಲಾ ಪ್ರವಾಸ ಪ್ಯಾಕೇಜ್ ಘೋಷಣೆ
ಭಾರತೀಯ ರೈಲ್ವೇಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಭಾರತದ ಪ್ರಸಿದ್ಧ ಗುಡ್ಡಗಾಡು ಹೊಂದಿರುವ ಪ್ರದೇಶಗಳಿಗೆ ಭೇಟಿ ನೀಡಲು ಬಯಸುವ ಪ್ರಯಾಣಿಕರಿಗೆ ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದು, 16,000 ರೂಪಾಯಿಯಲ್ಲೂ ಈ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಹಾಗಾದರೆ ಆ ಪ್ರಸಿದ್ಧ ಪ್ರವಾಸಿ ತಾಣಗಳು ಯಾವುವು? ಮತ್ತು ಪ್ಯಾಕೇಜ್ ಗರಿಷ್ಠ ಮತ್ತು ಕನಿಷ್ಠ ದರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನೀವು ಚಂಡೀಗಢ, ಶಿಮ್ಲಾ ಮತ್ತು ಕುಫ್ರಿಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಈ ಪ್ರವಾಸ ಪ್ಯಾಕೇಜ್ ಉತ್ತಮವಾಗಿದೆ. ಐಆರ್‌ಸಿಟಿಸಿಯ ಪ್ರಕಾರ ಈ ಪ್ರವಾಸವನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತದೆ. ಏಪ್ರಿಲ್ 15 ರಿಂದ ಪ್ರವಾಸ ಆರಂಭವಾಗಲಿದ್ದು, ಜುಲೈ 14ಕ್ಕೆ ಅಂತ್ಯವಾಗಲಿದೆ. ಈ ಪ್ರವಾಸವು ಲಕ್ನೋದಿಂದ ಪ್ರಾರಂಭವಾಗಿ ಕೊನೆಗೆ ಲಕ್ನೋದಲ್ಲಿಯೇ ಕೊನೆಗೊಳ್ಳುತ್ತದೆ. ಹಾಗೆಯೇ ಏಪ್ರಿಲ್‌ನಿಂದ ಜುಲೈವರೆಗಿನ ಗರಿಷ್ಠ ಅವಧಿಗಳಲ್ಲಿ ಮತ್ತು ಡಿಸೆಂಬರ್‌ನಿಂದ ಜನವರಿವರೆಗಿನ ಕಡಿಮೆ ಅವಧಿಗಳಲ್ಲೂ ಪ್ರವಾಸವನ್ನು ಆಯೋಜಿಸಲಾಗುತ್ತದೆ.
ಪ್ರವಾಸಿ ತಾಣಗಳ ವಿವರ ಇಲ್ಲಿದೆ
ಚಂಡೀಗಢದ ರೋಸ್ ಗಾರ್ಡನ್, ರಾಕ್ ಗಾರ್ಡನ್ ಮತ್ತು ಮಾನಸಾ ದೇವಿ ದೇವಸ್ಥಾನ, ಶಿಮ್ಲಾದ ಪಿಂಜೋರ್ ಗಾರ್ಡನ್ ಮತ್ತು ಮಾಲ್ ರೋಡ್ ಮತ್ತು ಕುಫ್ರಿ ಮತ್ತು ಸುಖನಾ ಸರೋವರ ಸೇರಿದಂತೆ ಜನಪ್ರಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಇದು ಉತ್ತಮ ಅವಕಾಶವಾಗಿದೆ.
ಪ್ರವಾಸ ಪ್ಯಾಕೇಜ್‌ನ ದರಗಳ ವಿವರ ಪ್ರವಾಸದ ಪ್ಯಾಕೇಜ್‌ನ ವೆಚ್ಚದ ವಿವರವನ್ನು ನೋಡುವುದಾದರೆ, ಗರಿಷ್ಠ ಅವಧಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸೆಕೆಂಡ್ ಕ್ಲಾಸ್ ಎಸಿಯಲ್ಲಿ ಒಬ್ಬರಿಗೆ 39,225 ರೂಪಾಯಿ ಆಗುತ್ತದೆ. ಇಬ್ಬರಿಗೆ 22,170 ರೂಪಾಯಿ ಮತ್ತು ಮೂವರು ಪ್ರಯಾಣ ಮಾಡಲು ಬಯಸಿದರೆ 17,620 ರೂಪಾಯಿ ಪಾವತಿಸಬೇಕಾಗುತ್ತದೆ.












Click it and Unblock the Notifications