IRCTC ಸರ್ವರ್‌ ಡೌನ್‌; ಟಿಕೆಟ್‌ ಬುಕಿಂಗ್‌ಗೆ ಪ್ರಯಾಣಿಕರ ಪರದಾಟ

IRCTC: ಐಆರ್‌ಸಿಟಿಸಿಯು ಭಾರತೀಯ ರೈಲ್ವೆ ಪ್ರವಾಸೋದ್ಯಮ ವಿಭಾಗವಾಗಿದೆ. ಇನ್ನು ಇದೀಗ ಈ
ವೆಬ್‌ಸೈಟ್‌ ಒಂದು ಗಂಟೆಯವರೆಗೆ ಸ್ಥಗಿತಗೊಂಡಿದೆ. ಈ ಹಿನ್ನೆಲೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡಲಾಗದೇ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಹಾಗಾದರೆ ಟಿಕೆಟ್‌ ಬುಕ್ಕಿಂಗ್‌ಗೆ ಪರ್ಯಾಯ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ತ್ವರಿತ ಟಿಕೆಟ್ ಬುಕಿಂಗ್ ಸಮಯದಲ್ಲಿ ಐಆಆರ್‌ಸಿಟಿಸಿ ವೆಬ್‌ಸೈಟ್‌ ಸ್ಥಗಿತಗೊಂಡಿದೆ. ಈ ಸ್ಥಳದಲ್ಲಿ ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ. ಆದ್ದರಿಂದ ಮುಂದಿನ 1 ಗಂಟೆಯವರೆಗೆ ಯಾವುದೇ ಬುಕಿಂಗ್ ಇರುವುದಿಲ್ಲ ಎಂದು ಐಆಆರ್‌ಸಿಟಿಸಿ ತಿಳಿಸಿದೆ.

IRCTC Server Down Passengers Faces Problem for Ticket Booking

ಐಆರ್‌ಸಿಟಿಸಿಯು ಸರ್ವರ್ ಡೌನ್ ಆಗಿರುವುದರಿಂದ ಮತ್ತು ಆನ್‌ಲೈನ್‌ನಲ್ಲು ಟಿಕೆಟ್ ಕಾಯ್ದಿರಿಸಲು ಆಗದ ಹಿನ್ನೆಲೆ ರೈಲು ಪ್ರಯಾಣಿಕರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಭಾರತೀಯ ರೈಲ್ವೆ ಪ್ರಯಾಣಿಕರ ಪ್ರಶ್ನೆಗೆ ತ್ವರಿತವಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಎಲ್ಲರಿಗೂ ಬುಕಿಂಗ್ ಲಭ್ಯವಾಗಲಿದೆ ಅಂತಲೂ ತಿಳಿಸಿದೆ.

ರದ್ದತಿ ಅಥವಾ ಫೈಲ್ ಟಿಡಿಆರ್‌ಗಾಗಿ ದಯವಿಟ್ಟು ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ. 14646, 0755-6610661 & 0755-4090600 ಅಥವಾ [email protected] ಗೆ ಮೇಲ್ ಮಾಡಿ ಎಂದು ಐಆರ್‌ಸಿಟಿಸಿ ಹೇಳಿದೆ.

ಇನ್ನು ಭಾರತೀಯ ರೈಲ್ವೇ ವಿವಿಧ ಪ್ರಯಾಣಿಕ ಸೇವೆಗಳನ್ನು ಸಂಯೋಜಿಸಲು ಸೂಪರ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಐಆರ್‌ಸಿಟಿಸಿ ಎರಡನೇ ತ್ರೈಮಾಸಿಕದಲ್ಲಿ ₹305.50 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಇಂಟರ್‌ನೆಟ್‌ ಟಿಕೆಟಿಂಗ್ ಗಣನೀಯ ಕೊಡುಗೆ ನೀಡಿದೆ. ಇದರ ಭಾಗವಾಗಿಯೇ ಈ ಚಟುವಟಿಕೆ ನಡೆಯುತ್ತಿರಬಹುದು ಎನ್ನಲಾಗುತ್ತಿದೆ.

ವಂದೇ ಭಾರತ್ ಸ್ಲೀಪರ್ ಕಾರ್ಯಾಚರಣೆ ವಿಳಂಬ: ಈಗಾಗಲೇ ದೇಶಾದ್ಯಂತ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಅಲ್ಲದೆ, ಈ ಐಷಾರಾಮಿ ರೈಲು ಭಾರೀ ಜನಮನ್ನಣೆ ಪಡೆಯುತ್ತಲಿದೆ. ಇನ್ನು ಇದರ ಭಾಗವಾಗಿ ವಂದೇ ಭಾರತ್ ಸ್ಲೀಪರ್ ರೈಲು ಇದೇ ಡಿಸೆಂಬರ್ ಅಂತ್ಯದೊಳಗೆ ಟ್ರ್ಯಾಕ್‌ಗಿಳಿಯಲಿದೆ ಎಂದು ಹೇಳಲಾಗುತ್ತು. ಆದರೆ, ಇದೀಗ ಇದರ ಸಂಚಾರ ಮತ್ತಷ್ಟು ವಿಳಂವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಮೂಲದ ಬೆಮೆಲ್‌ ನಿರ್ಮಿತ ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರ ಮತ್ತಷ್ಟು ವಿಳಂಬ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಡಿಸೆಂಬರ್‌ ಅಂತ್ಯದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲು ಕಾರ್ಯಾಚರಣೆ ಮಾಡಬೇಕಿತ್ತು. ಆದರೆ, ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌), ಬೆಮೆಲ್‌ ನಿರ್ಮಿತ ಕೋಚ್‌ಗಳಲ್ಲಿ ಕಳಪೆ ಹಾಗೂ ಹಲವು ಲೋಪದೋಷಗಳು ಕಂಡುಬಂದಿವೆ. ಆದ್ದರಿಂದ ಈ ರೈಲಿನ ಕಾರ್ಯಾಚರಣೆ ಮತ್ತಷ್ಟು ವಿಳಂಬ ಆಗಲಿದೆ ಎಂದು ತಿಳಿದುಬಂದಿದೆ.

ಐಸಿಎಫ್‌ ಮೂಲಗಳಿಂದ್ದ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಳಪೆ ಗುಣಮಟ್ಟ ಸಮಸ್ಯೆಗಳ ರೈಲಿನ ಒಳಾಂಗಣಕ್ಕೆ ಸಂಬಂಧಿಸಿದ್ದಾಗಿದೆ. ಉದಾಹರಣೆಗೆ ಇಂಟೀರಿಯರ್ ಪ್ಯಾನೆಲ್‌ಗಳಲ್ಲಿ ಗ್ಯಾಪ್‌ಗಳು ಕಾಣಿಸಿವೆ. ಅಸಮರ್ಪಕ ಸೈಡ್ ಲೋವರ್ ಬರ್ತ್‌ಗಳನ್ನು ಗಮನಿಸಿದ್ದೇವೆ. ಕುಶನ್‌ಗಳು ಉತ್ತಮ ಗುಣಮಟ್ಟವಾಗಿಲ್ಲ. ಟಾಯ್ಲೆಟ್‌ಗಳಲ್ಲಿ ನೀರು ಸೂರಿಕೆಯಾಗುತ್ತಿದೆ. ಪ್ಯಾಸೆಂಜರ್‌ ಅಲಾರಂಗಳು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದೆ.

ಬೆಮಲ್‌ ತುಂಬಾ ಅವಸರದಿಂದ ರೈಲಿನ ಒಳಾಂಗಣದ ಕೆಲಸ ಮಾಡಿದೆ. ಗುಣಮಟ್ಟವನ್ನು ಪರಿಶೀಲನೆ ಮಾಡಲಾಗಿಲ್ಲ. ಒಳಾಂಗಣದ ಕೆಲಸಗಳು ಕೂಡ ಕಳಪೆಯಿಂದ ಕೂಡಿವೆ. ಡಿಸೆಂಬರ್‌ ಅಂತ್ಯದೊಳಗೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳು ಟ್ರ್ಯಾಕ್‌ಗೆ ಇಳಿಯಬೇಕಿತ್ತು. ಆದರೆ, ಇದರ ಮಾದರಿ ರೈಲು ಇನ್ನಷ್ಟೇ ಲೈನ್‌ ಟ್ರಯಲ್‌ಗೆ ಇಳಿಯಬೇಕಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಸ್ತುತ, ಚೇರ್ ಕಾರ್‌ಗಳೊಂದಿಗೆ ವಂದೇ ಭಾರತ್ ರೈಲುಗಳನ್ನು ಮಧ್ಯಮ-ದೂರದ ಮಾರ್ಗಗಳಲ್ಲಿ ಕಾತರ್ಯನಿರ್ವಹಿಸಲಾಗುತ್ತಿದೆ. ಕಳೆದ ತಿಂಗಳು ಐಸಿಎಫ್‌, ಬೆಮೆಲ್‌ಗೆ ಈ ಬಗ್ಗೆ ಪತ್ರ ಬರೆದಿತ್ತು. ಅಕ್ಟೋಬರ್ 4ರಂದು ಆಗಮಿಸಿದ ಮೂಲ ಮಾದರಿಯ ರೈಲು ಸೆಟ್‌ನಲ್ಲಿ ತುಂಬಾ ದೋಷಗಳ ಬಗ್ಗೆ ಐಸಿಎಫ್‌ ಕಳವಳ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+