Dubai tour: ₹1 ಲಕ್ಷದೊಳಗೆ ದುಬೈ ಪ್ರವಾಸ ಕೈಗೊಳ್ಳುವವರಿಗೆ ಸುವರ್ಣಾವಕಾಶ, ಇಲ್ಲಿದೆ ಮಾಹಿತಿ

IRCTCಯು ದುಬೈಗೆ ಕೈಗೆಟುಕುವ ದರದಲ್ಲಿ ದುಬೈ ಟೂರ್‌ ಪ್ಯಾಕೇಜ್ ಅನ್ನು ಘೋಷಿಸಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

ನವದೆಹಲಿ, ಮಾರ್ಚ್‌, 13: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ IRCTCಯು ದುಬೈಗೆ ಕೈಗೆಟುಕುವ ಅಂತರರಾಷ್ಟ್ರೀಯ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ನೀವು ದುಬೈ ಮತ್ತು ಅಬುಧಾಬಿಯ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವಾಗಿದೆ. ಹಾಗಾದರೆ ಈ ಪ್ಯಾಕೇಜ್‌ನ ದರ ಎಷ್ಟು?, ಪ್ಯಾಕೇಜ್‌ ಅನ್ನು ಬುಕ್‌ ಮಾಡುವ ವಿಧಾನವನ್ನು ಇಲ್ಲಿ ತಿಳಿಯಿರಿ.

IRCTCಯು ಪ್ರವಾಸಿಗರ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಿಸಿದ್ದು, 5 ರಾತ್ರಿ 6 ದಿನಗಳ ಪ್ಯಾಕೇಜ್‌ ಇದಾಗಿದೆ. ಈ ದಿನಗಳಲ್ಲಿ ದುಬೈ ನಗರ ಪ್ರವಾಸ, ಬುರ್ಜ್ ಖಲೀಫಾ, ಡೆಸರ್ಟ್ ಸಫಾರಿ, ಧೋ ಕ್ರೂಸ್, ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿ, ಫೆರಾರಿ ವರ್ಲ್ಡ್ಸ್‌ಗೂ ಭೇಟಿ ನೀಡಬಹುದಾಗಿದೆ.

ಪ್ರವಾಸವು ದೆಹಲಿಯಿಂದ ಮಾರ್ಚ್ 23 ಆರಂಭವಾಗಲಿದೆ. ಪ್ಯಾಕೇಜ್ ರಿಟರ್ನ್ ಎಕಾನಮಿ ಕ್ಲಾಸ್ ವಿಮಾನವನ್ನು ಹೊಂದಿದ್ದು, 3 ಸ್ಟಾರ್ ಹೋಟೆಲ್‌ನಲ್ಲಿ ವಸತಿ, ಆಹಾರ, ವೀಸಾ ಶುಲ್ಕಗಳು ಮತ್ತು ಸಂಸ್ಕರಣಾ ಶುಲ್ಕಗಳನ್ನು ಒಳಗೊಂಡಿದೆ. ಹಾಗೆಯೇ ಡಿಲಕ್ಸ್‌ ಕಂಪರ್ಟೆಬಲ್‌ ಸೀಟ್‌ನಲ್ಲಿ ಮಾರ್ಚ್‌ 23ರಿಂದ 28ರವರೆಗೆ ಪ್ರವಾಸ ಮಾಡಬಹುದಾಗಿದೆ.

 ನಿರ್ಗಮನ ಮತ್ತು ಹಿಂತಿರುಗುವ ಸಮಯಗಳು

ನಿರ್ಗಮನ ಮತ್ತು ಹಿಂತಿರುಗುವ ಸಮಯಗಳು

ವಿಮಾನ ನಿರ್ಗಮನ ಹಿಂದಿರುಗುವ ಸಮಯ
ದೆಹಲಿ-ಅಬುಧಾಬಿ (G8 75) 6 pm 8:40 pm
ಅಬುಧಾಬಿ - ದೆಹಲಿ (G8 76) 9:40 pm 2:40 am

 ಯಾವುದಕ್ಕೆ ಎಷ್ಟು ವೆಚ್ಚ?

ಯಾವುದಕ್ಕೆ ಎಷ್ಟು ವೆಚ್ಚ?

5 ರಾತ್ರಿಗಳ 6 ದಿನಗಳ ಪ್ಯಾಕೇಜ್‌ನ ಬೆಲೆಯು ಇಬ್ಬರಿಂದ-ಮೂವರಿಗೆ ₹81,900 ರಿಂದ ದರ ಪ್ರಾರಂಭವಾಗಲಿದೆ. ಮತ್ತು ಒಬ್ಬರು ₹99,000 ರೂಪಾಯಿ ಪಾವತಿಸಬೇಕಾಗುತ್ತದೆ. ಹಾಗೆಯೇ ಮಗುವಿಗೆ ಹಾಸಿಗೆ ಸಹಿತ ₹81,500 ರೂಪಾಯಿ, ಮತ್ತು ಮಗುವಿಗೆ ಹಾಸಿಗೆ ರಹಿತ ₹70,500 ರೂಪಾಯಿ ವೆಚ್ಚವಾಗಲಿದೆ ಎಂದು ಐಆರ್‌ಸಿಟಿ ಮಾಹಿತಿ ನೀಡಿದೆ.

 RT-PCR ನೆಗೆಟಿವ್‌ ವರದಿ ಕಡ್ಡಾಯ

RT-PCR ನೆಗೆಟಿವ್‌ ವರದಿ ಕಡ್ಡಾಯ

ಐಆರ್‌ಸಿಟಿಸಿ ಮಾಹಿತಿ ಪ್ರಕಾರ, ಪ್ರಯಾಣದ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲಾ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಪ್ರಯಾಣಿಕರು ಎರಡು ಡೋಸ್‌ ಲಸಿಕೆಯನ್ನು ಹಾಕಿಸಿರಬೇಕಾಗುತ್ತದೆ. ಲಸಿಕೆ ಹಾಕಿಸದಿದ್ದರೆ ಅಥವಾ ಒಂದು ಡೋಸ್‌ ಲಸಿಕೆ ಪಡೆದವರು ನಿರ್ಗಮನದ ದಿನಾಂಕದಿಂದ 72 ಗಂಟೆಗಳ ಒಳಗೆ RT-PCR ನೆಗೆಟಿವ್‌ ವರದಿಯನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಹಾಗೆಯೇ ಪ್ರವಾಸಿಗರು ತಮ್ಮ ಪಾಸ್‌ಪೋರ್ಟ್‌ಗೆ ಭಾರತಕ್ಕೆ ಹಿಂದಿರುಗಿದ ದಿನಾಂಕದಿಂದ ಕನಿಷ್ಠ 6 ತಿಂಗಳ ಮಾನ್ಯತೆ ಇದೆ ಎಂದು ಖಚಿತಪಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ.

 ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

ಪ್ರವೇಶ ದಿನಾಂಕದಿಂದ 6 ತಿಂಗಳವರೆಗೆ ಮಾನ್ಯವಾದ ಪಾಸ್‌ಪೋರ್ಟ್ ಹೋದಿರಬೇಕಾಗುತ್ತದೆ. JPEG ಪಾರ್ಮೆಟ್‌ನಲ್ಲಿ ಕಲರ್‌ ಪಾಸ್‌ಪೋರ್ಟ್ ಸ್ಕ್ಯಾನ್ ಪ್ರತಿ, ಬುಕಿಂಗ್ ಸಮಯದಲ್ಲಿ ಪಾನ್‌ ಕಾರ್ಡ್‌ನ ಫೋಟೋ ಪ್ರತಿಯನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ಅರ್ಜಿದಾರರ ಇತ್ತೀಚಿನ 3.5x4.5cm ಗಾತ್ರದ (3 ತಿಂಗಳಿಗಿಂತ ಹಳೆಯದಲ್ಲ) ಛಾಯಾಚಿತ್ರಗಳನ್ನು ತರಬೇಕಾಗುತ್ತದೆ. ಬಿಳಿ ಹಿನ್ನೆಲೆ ಇರುವ ಫೋಟೋಗಳನ್ನು ತರುವುದು ಕಡ್ಡಾಯವಾಗಿದೆ.

 ಯಾವುದಕ್ಕೆ ಹೆಚ್ಚುವರಿ ಹಣ ಪಾವತಿಸಬೇಕು?

ಯಾವುದಕ್ಕೆ ಹೆಚ್ಚುವರಿ ಹಣ ಪಾವತಿಸಬೇಕು?

ಏರ್‌ಪೋರ್ಟ್ ತೆರಿಗೆಗಳಲ್ಲಿ ಯಾವುದೇ ಹೆಚ್ಚಳ, ಇಂಧನ ಸರ್ಚಾರ್ಜ್, ಊಟವನ್ನು ಮೊದಲೇ ಸೇರಿಸಲಾಗಿದ್ದು, ಮೆನುವಿನ ಆಯ್ಕೆ ಇರುವುದಿಲ್ಲ. ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿ ಇತ್ಯಾದಿಗಳಿಗೆ ಎಲ್ಲಾ ರೀತಿಯ ಸಲಹೆಗಳು, ವೈಯಕ್ತಿಕ ಸ್ವಭಾವದ ಯಾವುದೇ ವೆಚ್ಚಗಳು, ನಿಯಮಿತ ಮೆನುವಿನಲ್ಲಿ ನಮೂದಿಸಿರದ ವೆಚ್ಚಗಳು, ವೈನ್, ಆಹಾರ ಮತ್ತು ಪಾನೀಯಗಳು, ಮಿರಾಕಲ್ ಗಾರ್ಡನ್ ಅಥವಾ ವಾಲ್ ಆಫ್ ಫ್ರೇಮ್‌ನ ಐಚ್ಛಿಕ ಪ್ರವಾಸ, ವೀಸಾ ಶುಲ್ಕದಲ್ಲಿ ಯಾವುದೇ ಬದಲಾವಣೆಯಿದ್ದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+