IRCTC: ಉತ್ತರ ಭಾರತದ ಕಡೆ ಪ್ರವಾಸ ಬೆಳೆಸುವವರಿಗೆ ಈ ಪ್ಯಾಕೇಜ್‌ ಉತ್ತಮ, ಮಾಹಿತಿ ತಿಳಿಯಿರಿ

ಐಆರ್‌ಸಿಟಿಸಿಯು ಚಾರ್ ಧಾಮ್ ಯಾತ್ರೆಯ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಹಾಗಾದರೆ ಈ ಪ್ಯಾಕೇಜ್‌ನಲ್ಲಿ ಯಾವೆಲ್ಲ ಸ್ಥಳಗಳನ್ನು ನೋಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನವದೆಹಲಿ, ಫೆಬ್ರವರಿ, 27: ಐಆರ್‌ಟಿಸಿಯು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಇದೆ. ಎಲ್ಲಾ ಹಬ್ಬಗಳ ಸಂದರ್ಭದಲ್ಲೂ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಣೆ ಮಾಡುತ್ತಲೇ ಬಂದಿದೆ. ಇದೀಗ ಉತ್ತರ ಭಾರತದ ಕಡೆಗೆ ಪ್ರವಾಸ ಬೆಳೆಸುವವರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. "ಆ" ಸಿಹಿಸುದ್ದಿ ಏನು ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಐಆರ್‌ಸಿಟಿಸಿಯು "ಚಾರ್ ಧಾಮ್ ಯಾತ್ರೆ"ಯ ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ. "ಚಾರ್ ಧಾಮ್ ಯಾತ್ರೆ"ಯ ಪ್ರವಾಸ ಪ್ಯಾಕೇಜ್‌ನಲ್ಲಿ ಹರಿದ್ವಾರ, ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರೀನಾಥ್ ಮತ್ತು ಋಷಿಕೇಶ ಸ್ಥಳಗಳು ಒಳಗೊಂಡಿದ್ದು, ಇದು 11 ರಾತ್ರಿ ಮತ್ತು 12 ಹಗಲುಗಳ ಪ್ರವಾಸವಾಗಿದೆ.

ಐಆರ್‌ಸಿಟಿಸಿ ಪ್ಯಾಕೇಜ್ ಪ್ರಕಾರ, ಮುಂಬೈ, ನವದೆಹಲಿ, ಹರಿದ್ವಾರ ಬಾರ್ಕೋಟ್, ಜಾಂಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಪುತ್ರ ಪ್ರಯಾಗ್, ಕೇದಾರನಾಥ್, ಬದರಿನಾಥ್, ಹರಿದ್ವಾರದಲ್ಲಿರುವ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.

ಈ ಪ್ರವಾಸ ಯಾವಾಗ ಆರಂಭವಾಗುತ್ತದೆ ಮತ್ತು ಎಲ್ಲಿ ಕೊನೆಯಾಗುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

 ಪ್ರವಾಸ ಕೊನೆಗೊಳ್ಳುವ ವಿವರ ಇಲ್ಲಿದೆ

ಪ್ರವಾಸ ಕೊನೆಗೊಳ್ಳುವ ವಿವರ ಇಲ್ಲಿದೆ

1. 21.05.2023 ರಿಂದ 01.06.2023

2. 28.05.2023 ರಿಂದ 08.06.2023

3. 4.06.2023 ರಿಂದ 15.06.2023

4. 11.06.2023 ರಿಂದ 22.06.2023

5. 18.06.2023 ರಿಂದ 29.06.2023

 ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳ ವಿವರ

ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳ ವಿವರ

ಈ ಪ್ರವಾಸ ಪ್ಯಾಕೇಜ್‌ನಲ್ಲಿ ಬೆಳಗಿನ ಉಪಾಹಾರ ಮತ್ತು ಭೋಜನ ವ್ಯವಸ್ಥೆಯು ಕೂಡ ಇರಲಿದೆ. ಒಬ್ಬರಿಗೆ 91,400 ರೂಪಾಯಿ, ಇಬ್ಬರಿಗೆ 69,900 ರೂಪಾಯಿ ಆದರೆ ಮೂವರು ಪ್ರವಾಸ ಮಾಡಲು ಬಯಸಿದರೆ 67,000 ರೂಪಾಯಿ ವೆಚ್ಚ ಆಗಲಿದೆ ಎನ್ನುವ ಮಾಹಿತಿಯನ್ನು ಐಆರ್‌ಸಿಟಿಸಿ ನೀಡಿದೆ.

 ಈ ಬಾರಿ ಮೇ ತಿಂಗಳಿನಿಂದ ಪ್ರವಾಸ ಆರಂಭ

ಈ ಬಾರಿ ಮೇ ತಿಂಗಳಿನಿಂದ ಪ್ರವಾಸ ಆರಂಭ

ಚಾರ್ ಧಾಮ್ ಯಾತ್ರೆಯು ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಪ್ರಾರಂಭವಾಗುತ್ತಿತ್ತು. ಹಾಗೆಯೇ ಅಕ್ಟೋಬರ್-ನವೆಂಬರ್‌ವರೆಗೆ ಇರುತ್ತದೆ. ಆದರೆ ಈ ಬಾರಿ ಮೇ ತಿಗಳಿನಿಂದ ಈ ಪ್ರವಾಸ ಆರಂಭವಾಗಲಿದ್ದು, ಪ್ರವಾಸಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

 ನೋಂದಣಿ ಮಾಡಿಕೊಳ್ಳುವುದು ಹೇಗೆ?

ನೋಂದಣಿ ಮಾಡಿಕೊಳ್ಳುವುದು ಹೇಗೆ?

ಚಾರ್ ಧಾಮ್ ಯಾತ್ರೆಯ ನೋಂದಣಿ ಪ್ರಕ್ರಿಯೆಯು ಎಲ್ಲಾ ಪ್ರವಾಸಿಗರಿಗೆ ಕಡ್ಡಾಯವಾಗಿದೆ. ಯಾತ್ರೆಗೆ ಮೂರು ರೀತಿಯಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬಹುದಾಗಿದೆ. ಅಧಿಕೃತ ವೆಬ್‌ಸೈಟ್, WhatsApp ಮತ್ತು ಟೋಲ್-ಫ್ರೀ ಸಂಖ್ಯೆಯಲ್ಲಿ ನೋಂದಣಿ ಮಾಡಬಹುದಾಗಿದೆ.

ಅಧಿಕೃತ ವೆಬ್‌ಸೈಟ್ www.registrationandtouristcare.uk.gov.in ಆಗಿದೆ. ಹಾಗೆಯೇ 'ಯಾತ್ರಾ' ಎಂದು ಟೈಪ್ ಮಾಡಿ ವಾಟ್ಸಾಪ್ ಸಂಖ್ಯೆ 8394833833 ಮೂಲಕ ನೋಂದಣಿ ಮಾಡಬಹುದು. ಅಥವಾ ಟೋಲ್-ಫ್ರೀ ಸಂಖ್ಯೆ 01351364ಗೆ ಕರೆ ಮಾಡುವ ಮೂಲಕ ಈ ಪ್ರವಾಸ ಪ್ಯಾಕೇಜ್‌ ಅನ್ನು ನೋಂದಾಯಿಸಕೊಳ್ಳಬಹುದು ಎಂದು ಮಾಹಿತಿ ನೀಡಿದೆ. ಬುಕಿಂಗ್‌ಗಾಗಿ IRCTC ವೆಬ್‌ಸೈಟ್ www.irctctourism.com ಅನ್ನು ಪರಿಶೀಲಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+