IRCTC: ರಾಮನವಮಿ ಪ್ರಯುಕ್ತ "ಭಾರತ್ ನೇಪಾಳ ಅಷ್ಟ ಯಾತ್ರಾ" ಪ್ರವಾಸ ಪ್ಯಾಕೇಜ್‌ ಘೋಷಣೆ, ದಿನಾಂಕ, ದರಗಳನ್ನು ತಿಳಿಯಿರಿ

ಐಆರ್‌ಸಿಟಿಸಿಯು "ಭಾರತ್ ನೇಪಾಳ ಅಷ್ಟ ಯಾತ್ರಾ" ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ನವದೆಹಲಿ, ಮಾರ್ಚ್‌, 13: ಭಾರತೀಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಕೈಗೆಟುಕುವ ದರದಲ್ಲಿ ದೇಶಿ ಮತ್ತು ವಿದೇಶಿ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಾಗೆಯೇ ಇದೇ ತಿಂಗಳು ಮಾರ್ಚ್‌ 30ರಂದು ರಾಮನವಮಿಯನ್ನು ಆಚರಿಸುತ್ತಿದ್ದು, ಈ ಪ್ರಯುಕ್ತ 10 ದಿನಗಳ ಪ್ರವಾಸ ಪ್ಯಕೇಜ್‌ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ನಲ್ಲಿ ಯಾವೆಲ್ಲ ಸ್ಥಳಗಳನ್ನು ನೋಡಬಹುದು? ಮತ್ತು ಇದರ ವೆಚ್ಚ ಎಷ್ಟಾಗುತ್ತದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ

ನಾಲ್ಕು ಪ್ರಮುಖ ಯಾತ್ರಾ ಸ್ಥಳಗಳು ಮತ್ತು ಪಾರಂಪರಿಕ ತಾಣಗಳನ್ನು ಪ್ರದರ್ಶಿಸುವ ಭಾರತ್ ಗೌರವ್ ಟೂರಿಸ್ಟ್ ರೈಲಿನ ಅಡಿಯಲ್ಲಿ "ಭಾರತ್ ನೇಪಾಳ ಅಷ್ಟ ಯಾತ್ರಾ" ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಭಾರತ್ ಗೌರವ್ ಟೂರಿಸ್ಟ್ ರೈಲು ಪ್ರಾರಂಭವು ದೇಶೀಯ ಪ್ರವಾಸೋದ್ಯಮದಲ್ಲಿ ವಿಶೇಷ ಆಸಕ್ತಿಯ ಸರ್ಕ್ಯೂಟ್‌ಗಳನ್ನು ಉತ್ತೇಜಿಸುತ್ತಾ ಬಂದಿದೆ.

IRCTC: Bharat Nepal Ashtha Yatra Tour Start from 31 March: know price details

9 ರಾತ್ರಿಗಳು 10 ದಿನಗಳ ಪ್ರವಾಸ

ಇದು 9 ರಾತ್ರಿಗಳು 10 ದಿನಗಳ ಪ್ರವಾಸವಾಗಿದೆ. ಭಾರತದ ಅಯೋಧ್ಯೆ, ವಾರಣಾಸಿ ಮತ್ತು ಪ್ರಯಾಗ್‌ರಾಜ್ ಮತ್ತು ನೇಪಾಳದ ಪಶುಪತಿನಾಥ (ಕಠ್ಮಂಡು) ನಂತಹ ಸ್ಥಳಗಳನ್ನು ಒಳಗೊಂಡಿದೆ. ರೈಲು ಜಲಂದರ್‌ನಿಂದ ಹೊರಡಲಿದ್ದು, ನವದೆಹಲಿ ಸಫ್ದರ್‌ಜಂಗ್‌ನಿಂದ ಹತ್ತಬಹುದಾಗಿದೆ. "ಭಾರತ್‌ ನೇಪಾಳ ಅಷ್ಟ ಯಾತ್ರೆ"ಯು ಮಾರ್ಚ್‌ 31ರಿಂದ ಪ್ರಾರಂಭವಾಗಲಿದೆ.

ಯಾವೆಲ್ಲ ಸ್ಥಳಗಳನ್ನು ನೋಡಬಹುದಾಗಿದೆ?

ಈ ಪ್ರವಾಸದಲ್ಲಿ ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್ ಗರ್ಹಿ, ಸರಯುಘಾಟ್, ಅಯೋಧ್ಯೆಯ ನಂದಿಗ್ರಾಮ್, ಕಠ್ಮಂಡುವಿನಲ್ಲಿ ಪಶುಪತಿನಾಥ ದೇವಾಲಯ, ದರ್ಬಾರ್ ಸ್ಕ್ವೈರ್, ಸ್ವಯಂಭುನಾಥ ಸ್ತೂಪ, ತುಳಸಿ ಮಾನಸ ದೇವಸ್ಥಾನ, ಸಂಕಟಮೋಚನ ದೇವಸ್ಥಾನ, ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ದೇವಸ್ಥಾನ, ವಾರಣಾಸಿಯ ವಾರಣಾಸ್‌ ಘಾಟ್‌ನಲ್ಲಿ ಗಂಗಾ ಆರತಿ, ಗಂಗಾ - ಯಮುನಾ ಸಂಗಮ, ಪ್ರಯಾಗರಾಜ್‌ನಲ್ಲಿರುವ ಹನುಮಾನ್ ದೇವಸ್ಥಾನವನ್ನು ನೋಡಬಹುದಾಗಿದೆ.

ಜಲಂಧರ್ ಸಿಟಿ, ಲುಧಿಯಾನ, ಚಂಡೀಗಢ, ಅಂಬಾಲಾ, ಕುರುಕ್ಷೇತ್ರ, ಪಾಣಿಪತ್, ನವದೆಹಲಿ, ಗಾಜಿಯಾಬಾದ್, ಅಲಿಗಢ, ತುಂಡ್ಲಾ, ಇಟಾವಾ, ಕಾನ್ಪುರ್ ಮಾರ್ಗವಾಗಿ ರೈಲು ಸಂಚರಿಸಲಿದೆ. ಐಆರ್‌ಸಿಟಿಸಿ ಪ್ರಕಾರ, ಇದು 3AC ಆಗಿದ್ದು, 600 ಸೀಟುಗಳನ್ನು ಹೊಂದಿರಲಿದೆ. ಈ 600 ಸೀಟುಗಳಲ್ಲಿ 300 ಸ್ಟಾಂಡರ್ಡ್ ಆಗಿದ್ದು, ಉಳಿದ 300 ಸೀಟುಗಳು ಸುಪೀರಿಯರ್ ಆಗಿರುತ್ತವೆ ಎನ್ನುವ ಮಾಹಿತಿಯನ್ನು ನೀಡಿದೆ.

IRCTC: Bharat Nepal Ashtha Yatra Tour Start from 31 March: know price details

ಪ್ಯಾಕೇಜ್‌ನ ದರಗಳ ವಿವರ

ವರ್ಗ ಒಬ್ಬರಿಗೆ ಇಬ್ಬರು/ ಮೂವರಿಗೆ ಮಕ್ಕಳು (5-11 ವರ್ಷ)
ಸುಪೀರಿಯರ್ - 41090 ರೂ. 31610 ರೂ. 28450 ರೂ.
ಸ್ಟ್ಯಾಂಡರ್ಡ್ - 36160 ರೂ. 27815 ರೂ. 25035 ರೂ.

ಇಲ್ಲಿ ಎಸಿ ರೂಮ್‌, ಮತ್ತು ನಾನ್-ಎಸಿ ರೂಂಗಳ ವ್ಯವಸ್ಥೆಯನ್ನು ನೋಡಬಹುದಾಗಿದೆ. ಹಾಗೆಯೇ ರಾತ್ರಿ ಉಳಿದುಕೊಳ್ಳಲು ರೂಮ್‌ಗಳ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ರೈಲುಗಳಲ್ಲಿ ಎಲ್ಲಾ ರೀಯಯ ಆಹಾರವನ್ನು ಒಳಗೊಂಡಿರುತ್ತದೆ. ಇದರ ಹೊರತಾಗಿ, ಉತ್ತಮ ಗುಣಮಟ್ಟದ ರೆಸ್ಟೋರೆಂಟ್‌ಗಳಲ್ಲಿ ವೆಜ್ ಊಟವನ್ನು ಮಾತ್ರ ಒದಗಿಸಲಾಗುವುದು. ಪ್ರಯಾಣಿಕರಿಗೆ ಪ್ರಯಾಣ ವಿಮೆ, ರೈಲಿನಲ್ಲಿ ಭದ್ರತೆ ಮತ್ತು ಎಲ್ಲಾ ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಿದೆ.

ಕೋವಿಡ್‌ ಲಸಿಕೆ ಪ್ರಮಾಣಪತ್ರ ಕಡ್ಡಾಯ

IRCTC ಪ್ರಕಾರ, ದೇವಾಲಯದ ದರ್ಶನ ಮತ್ತು ಸ್ಮಾರಕಗಳ ವೀಕ್ಷಣೆಗೆ COVID-19 ಲಸಿಕೆ ಪ್ರಮಾಣಪತ್ರವು ಕಡ್ಡಾಯವಾಗಿದೆ. ಪ್ರವಾಸದ ಅವಧಿಯಲ್ಲಿ ಎಲ್ಲಾ ಪ್ರಯಾಣಿಕರು ಲಸಿಕೆ ಪ್ರಮಾಣಪತ್ರವನ್ನು ಹಾರ್ಡ್ ಕಾಪಿಯಲ್ಲಿ ಅಥವಾ ಫೋನ್‌ನಲ್ಲಿ ಕೊಂಡೊಯ್ಯಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+