Vande Bharat Sleeper: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ಮತ್ತಷ್ಟು ವಿಳಂಬ
Vande Bharat Sleeper Train: ಈಗಾಗಲೇ ದೇಶಾದ್ಯಂತ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಅಲ್ಲದೆ, ಈ ಐಷಾರಾಮಿ ರೈಲು ಭಾರೀ ಜನಮನ್ನಣೆ ಪಡೆಯುತ್ತಲಿದೆ. ಇನ್ನು ಇದರ ಭಾಗವಾಗಿ ವಂದೇ ಭಾರತ್ ಸ್ಲೀಪರ್ ರೈಲು ಇದೇ ಡಿಸೆಂಬರ್ ಅಂತ್ಯದೊಳಗೆ ಟ್ರ್ಯಾಕ್‌ಗಿಳಿಯಲಿದೆ ಎಂದು ಹೇಳಲಾಗುತ್ತು. ಆದರೆ, ಇದೀಗ ಇದರ ಸಂಚಾರ ಮತ್ತಷ್ಟು ವಿಳಂವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಮೂಲದ ಬೆಮೆಲ್ ನಿರ್ಮಿತ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಮತ್ತಷ್ಟು ವಿಳಂಬ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ಮಾಡಬೇಕಿತ್ತು. ಆದರೆ, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್), ಬೆಮೆಲ್ ನಿರ್ಮಿತ ಕೋಚ್‌ಗಳಲ್ಲಿ ಕಳಪೆ ಹಾಗೂ ಹಲವು ಲೋಪದೋಷಗಳು ಕಂಡುಬಂದಿವೆ. ಆದ್ದರಿಂದ ಈ ರೈಲಿನ ಕಾರ್ಯಾಚರಣೆ ಮತ್ತಷ್ಟು ವಿಳಂಬ ಆಗಲಿದೆ ಎಂದು ತಿಳಿದುಬಂದಿದೆ.

ಐಸಿಎಫ್ ಮೂಲಗಳಿಂದ್ದ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಳಪೆ ಗುಣಮಟ್ಟ ಸಮಸ್ಯೆಗಳ ರೈಲಿನ ಒಳಾಂಗಣಕ್ಕೆ ಸಂಬಂಧಿಸಿದ್ದಾಗಿದೆ. ಉದಾಹರಣೆಗೆ ಇಂಟೀರಿಯರ್ ಪ್ಯಾನೆಲ್‌ಗಳಲ್ಲಿ ಗ್ಯಾಪ್‌ಗಳು ಕಾಣಿಸಿವೆ. ಅಸಮರ್ಪಕ ಸೈಡ್ ಲೋವರ್ ಬರ್ತ್‌ಗಳನ್ನು ಗಮನಿಸಿದ್ದೇವೆ. ಕುಶನ್‌ಗಳು ಉತ್ತಮ ಗುಣಮಟ್ಟವಾಗಿಲ್ಲ. ಟಾಯ್ಲೆಟ್‌ಗಳಲ್ಲಿ ನೀರು ಸೂರಿಕೆಯಾಗುತ್ತಿದೆ. ಪ್ಯಾಸೆಂಜರ್ ಅಲಾರಂಗಳು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದೆ.
ಬೆಮಲ್ ತುಂಬಾ ಅವಸರದಿಂದ ರೈಲಿನ ಒಳಾಂಗಣದ ಕೆಲಸ ಮಾಡಿದೆ. ಗುಣಮಟ್ಟವನ್ನು ಪರಿಶೀಲನೆ ಮಾಡಲಾಗಿಲ್ಲ. ಒಳಾಂಗಣದ ಕೆಲಸಗಳು ಕೂಡ ಕಳಪೆಯಿಂದ ಕೂಡಿವೆ. ಡಿಸೆಂಬರ್ ಅಂತ್ಯದೊಳಗೆ ವಂದೇ ಭಾರತ್ ಸ್ಲೀಪರ್ ರೈಲುಗಳು ಟ್ರ್ಯಾಕ್‌ಗೆ ಇಳಿಯಬೇಕಿತ್ತು. ಆದರೆ, ಇದರ ಮಾದರಿ ರೈಲು ಇನ್ನಷ್ಟೇ ಲೈನ್ ಟ್ರಯಲ್‌ಗೆ ಇಳಿಯಬೇಕಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರಸ್ತುತ, ಚೇರ್ ಕಾರ್‌ಗಳೊಂದಿಗೆ ವಂದೇ ಭಾರತ್ ರೈಲುಗಳನ್ನು ಮಧ್ಯಮ-ದೂರದ ಮಾರ್ಗಗಳಲ್ಲಿ ಕಾತರ್ಯನಿರ್ವಹಿಸಲಾಗುತ್ತಿದೆ. ಕಳೆದ ತಿಂಗಳು ಐಸಿಎಫ್, ಬೆಮೆಲ್‌ಗೆ ಈ ಬಗ್ಗೆ ಪತ್ರ ಬರೆದಿತ್ತು. ಅಕ್ಟೋಬರ್ 4ರಂದು ಆಗಮಿಸಿದ ಮೂಲ ಮಾದರಿಯ ರೈಲು ಸೆಟ್‌ನಲ್ಲಿ ತುಂಬಾ ದೋಷಗಳ ಬಗ್ಗೆ ಐಸಿಎಫ್ ಕಳವಳ ವ್ಯಕ್ತಪಡಿಸಿದೆ.
ವಂದೇ ಭಾರತ್ ಸ್ಲೀಪರ್ ಸೇವೆಯ ಪರಿಚಯವನ್ನು ಸಾರ್ವಜನಿಕರು ಕುತೂಹಲದಿಂದ ನಿರೀಕ್ಷಿಸುತ್ತಿರುವಾಗ ವಿಳಂಬವಾಗುತ್ತಿದೆ. ಅವರಿಂದ ಟೀಕೆಗಳು ಸಹ ಬರುತ್ತಿವೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ, ಅಕ್ಟೋಬರ್ 5ರಂದು ಬೆಮೆಲ್‌ಗೆ ಬರೆದ ಪತ್ರದಲ್ಲಿ ಐಸಿಎಫ್ ಒಟಟು 81 ಲೋಪದೋಷವನ್ನು ಸರಿಪಡಿಸುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಐಸಿಎಫ್ ಜನರಲ್ ಮ್ಯಾನೇಜರ್ ಸುಬ್ಬಾರಾವ್ ಅವರು ಮಾತಾಡಿದ್ದು, ಯಾವುದೇ ವಿಳಂಬ ಇಲ್ಲ. ಮೂಲ ಮಾದರಿಯಲ್ಲಿ ನಿರೀಕ್ಷಿಸಲಾದ ಸಣ್ಣ ಕಮಿಷನಿಂಗ್ ಮತ್ತು ಸೈಡ್ ಫಿನಿಶಿಂಗ್ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಪ್ರಯೋಗಗಳಿಗಾಗಿ ರೈಲು ಸೆಟ್ ಅನ್ನು ಡಿಸೆಂಬರ್ 10ರೊಳಗೆ ಲಕ್ನೋಗೆ ಕಳುಹಿಸಲಾಗುವುದು ಎಂದು ಹೇಳಿದರು.
ಐಸಿಎಫ್ 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳ 10 ರೇಕ್‌ಗಳಿಗಾಗಿ ಮೇ 2023ರಲ್ಲಿ ಬಿಇಎಂಎಲ್‌ಗೆ ಆರ್ಡರ್ ಕೊಟ್ಟಿತ್ತು. ಈ ರೈಲುಗಳನ್ನು ಗಂಟೆಗೆ 160 ಕಿಲೋ ಮೀಟರ್ ವೇಗಾವಗಿ ಓಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ರೈಲು 16 ಕೋಚ್‌ಗಳನ್ನು ಒಳಗೊಂಡಿರುತ್ತದೆ, 1AC, 2AC ಮತ್ತು 3AC ಸಂರಚನೆಗಳಿಂದ ಕೂಡಿರುತ್ತದೆ. ಒನ್ನು ಶೀಘ್ರದಲ್ಲಿಯೇ ಈ ರೈಲು ಟ್ರ್ಯಾಕ್‌ಗಿಳಿಯಲಿದೆ ಎನ್ನುವ ಮಾಹಿತಿ ಲಭ್ಯಚಾಗಿದೆ.












Click it and Unblock the Notifications